Advertisement

ಭವನ ಸುಂದರಿ 

10:12 AM Jul 14, 2019 | Vishnu Das |

ಇಂದು, ಕರ್ನಾಟದಕ ಶಕ್ತಿಕೇಂದ್ರ ವಿಧಾನಸೌಧದ ಶಂಕುಸ್ಥಾಪನೆಯಾದ ದಿನ. 1951ರ ಜುಲೈ 13ರಂದು, ಅಂದಿನ ಪ್ರಧಾನಿ ಜವಾಹರಲಾಲ ನೆಹರೂ ಅವರು ಸೌಧದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಆ ಅಡಿಪಾಯದ ಕಲ್ಲು ಮುಂದೆ ಸೌಧವಾಗಿ, ಇಡೀ ರಾಜ್ಯದ ಆಡಳಿತ ಕೇಂದ್ರವಾಗಿ ತಲೆ ಎತ್ತಿ ನಿಂತಿತು.

Advertisement

ಎಲ್ಲಿ ದೆ?
ಅಂಬೇಡ್ಕರ್‌ ಬೀದಿ, ಸಂಪಂಗಿರಾಮ ನಗರ, ಹೈ ಕೋರ್ಟ್‌ ಎದುರು

ನಿರ್ಮಾ ಣ
1952ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ 1956ರಲ್ಲಿ ಮುಕ್ತಾಯ ಕಂಡಿ ತು.

ಕಟ್ಟಡ ವಿಸ್ತಾ ರ
4 ಮಹಡಿ ಮತ್ತು 1 ನೆಲಮಾಳಿಗೆಯುಳ್ಳ ಕಟ್ಟಡದ ಒಟ್ಟು ವಿಸ್ತೀರ್ಣ 5,05,505 ಚದರ ಅಡಿ. ಒಟ್ಟು 172 ಕೊಠಡಿಗಳಿದ್ದು, 500 ಜನರು ಕುಳಿತುಕೊಳ್ಳಬಹುದಾದ ಗ್ಯಾಲರಿಯನ್ನು ಹೊಂದಿದೆ.

ಕಟ್ಟಿಸಿದ್ದು…
ಕೆಂಗಲ್‌ ಹನುಮಂತಯ್ಯ

Advertisement

ವಿನ್ಯಾಸ
ನಿಯೋ ದ್ರಾವಿಡಿಯನ್‌ ಶೈಲಿ

ಸ್ಫೂರ್ತಿ
ವಿಧಾನಸೌಧದ ಪಶ್ಚಿಮ ದಿಕ್ಕಿನ ಹೊರಭಾಗವು ರಾಜಸ್ಥಾನ ಅರಮನೆಗಳ ಶಿಲ್ಪಕಲೆಯಿಂದ, ಉತ್ತರ ಭಾಗವು ಮೈಸೂರಿನ ಕೃಷ್ಣ ರಾಜ ಸಾಗರ ಅಣೆಕಟ್ಟಿನಿಂದ ಸ್ಫೂರ್ತಿ ಪಡೆದಿದೆ. ಮೂರನೇ ಮಹಡಿಯಲ್ಲಿರುವ ಕ್ಯಾಬಿನೆಟ್‌ ಮೀಟಿಂಗ್‌ ಹಾಲ್‌ ಅನ್ನು ಶ್ರೀಗಂಧವನ್ನು ಬಳಸಿ ಅಲಂಕರಿಸಲಾಗಿದೆ.

ಒಟ್ಟು ವೆಚ್ಚ
ವಿಧಾನಸೌಧ ನಿರ್ಮಾಣಕ್ಕಾಗಿ ಮೊದಲು 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ನಿರ್ಮಾಣ ಕಾರ್ಯ ಪೂರ್ಣಗೊಂಡಾಗ ಒಟ್ಟು ಖರ್ಚು 1.84 ಕೋಟಿಯನ್ನು ಮುಟ್ಟಿತ್ತು. ಈಗ ಅದರ ವಾರ್ಷಿಕ ನಿರ್ವಹಣಾ ವೆಚ್ಚ ವೇ (ಸುಣ್ಣ ಬಣ್ಣ, ರಿಪೇರಿ ಇತ್ಯಾದಿ) 2 ಕೋಟಿಯನ್ನು ಮೀರುತ್ತದೆ!

ಏನು ಬರೆದಿದೆ?
ವಿಧಾನಸೌಧದ ಮುಂಭಾಗದಲ್ಲಿ, ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಯಲಾಗಿದೆ. 1957ರಲ್ಲಿ ಸರ್ಕಾರವು 7,500 ರೂ. ಖರ್ಚು ಮಾಡಿ, ಘೋಷವಾಕ್ಯವನ್ನು ಸತ್ಯಮೇವ ಜಯತೆ ಎಂದು ಬದಲಿಸಲು ನಿರ್ಧರಿಸಿತಾದರೂ, ಕೊನೆಗೆ ನಿರ್ಧಾರವನ್ನು ಬದಲಿಸಿತು.

ಖೈದಿಗಳೇ ಕಾರ್ಮಿಕರು
ಸುಮಾರು 5000 ಕಾರ್ಮಿಕರು ಮತ್ತು 1500 ಶಿಲ್ಪಿಗಳು ಹಾಗೂ ಬಡಗಿಗಳು, ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಬಹುತೇಕರು ಖೈದಿಗಳಾಗಿದ್ದು, ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಅವರನ್ನು ಬಿಡುಗಡೆಗೊಳಿಸಲಾಯ್ತು!

ಒಟ್ಟು ಪ್ರದೇಶ
ವಿಧಾನಸೌಧವು ಒಟ್ಟು 60 ಎಕರೆ ಜಾಗದಲ್ಲಿ ತಲೆ ಎತ್ತಿದೆ

ಕಟ್ಟಡದ ಚೆಲುವು
ಸಂಪೂರ್ಣ ಕಟ್ಟಡವನ್ನು, ಮಲ್ಲಸಂದ್ರ ಮತ್ತು ಹೇಸರಘಟ್ಟದ ಸುತ್ತಮುತ್ತ ಉತVನನ ಮಾಡಿದ ಬೆಂಗಳೂರು ಗ್ರಾನೈಟ್‌ನಿಂದ ನಿರ್ಮಿಸಲಾಗಿದೆ. ಕಟ್ಟಡದ ಸೌಂದರ್ಯ ಹೆಚ್ಚಿಸಲು ಮಾಗಡಿಯ ಗುಲಾಬಿ ಕಲ್ಲು ಮತ್ತು ತುರುವೇಕೆರೆಯ ಕಪ್ಪು ಕಲ್ಲುಗಳನ್ನು ಬಳಸಿದ್ದಾರೆ.

(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ವಾರಕ್ಕೆ ಒಂದೊಂದರಂತೆ, ಕಟ್ಟಡಗಳ ತುಣುಕು ಮಾಹಿತಿಯ ಸರ ಮಾಲೆ ಈ ಅಂಕಣದಲ್ಲಿ ಮೂಡಿಬರಲಿದೆ )

Advertisement

Udayavani is now on Telegram. Click here to join our channel and stay updated with the latest news.

Next