Advertisement

Video: ಟೇಕ್-ಆಫ್ ಆದ ಕೆಲವೇ ಹೊತ್ತಲ್ಲಿ ಕಳಚಿ ಬಿದ್ದ ವಿಮಾನದ ಚಕ್ರ! ಹಲವು ಕಾರುಗಳು ಜಖಂ

12:23 PM Mar 11, 2024 | Team Udayavani |

ಲಾಸ್ ಏಂಜಲೀಸ್: ಜಪಾನ್‌ಗೆ ಹೊರಟಿದ್ದ ಬೋಯಿಂಗ್ 777 ಜೆಟ್‌ ಲೈನರ್ ಗುರುವಾರ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ತುರ್ತು ಲ್ಯಾಂಡಿಂಗ್ ಮಾಡಬೇಕಾದ ಪ್ರಸಂಗ ಬಂದಿದೆ. ಇದಕ್ಕೆ ಕಾರಣ ವಿಮಾನದ ಚಕ್ರ ಕಳಚಿ ಬಿದ್ದಿರುವುದು.

Advertisement

ಹೌದು ಪ್ರಯಾಣಿಕರನ್ನು ಹೊತ್ತು ಜಪಾನ್ ಗೆ ಸಾಗಬೇಕಿದ್ದ ಯುನೈಟೆಡ್ ಏರ್ ಲೈನ್ಸ್ ವಿಮಾನ ಟೇಕ್ ಆಫ್ ಆದ ವೇಳೆ ವಿಮಾನದ ಒಂದು ಚಕ್ರ ಕಳಚಿ ಬಿದ್ದಿದೆ ಪರಿಣಾಮ ವಿಮಾನದ ಪೈಲೆಟ್ ತುರ್ತಾಗಿ ವಿಮಾನವನ್ನು ಲ್ಯಾಂಡ್ ಮಾಬೇಕಾಯಿತು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಇಲ್ಲಿ ವಿಮಾನ ಟೇಕ್ ಆಫ್ ಆಗುತ್ತಿದ್ದು ಈ ವೇಳೆ ವಿಮಾನದ ಒಂದು ಚಕ್ರ ಕಳಚಿ ಬೀಳುವುದು ಕಾಣಬಹುದು ಕೂಡಲೇ ಕಾರ್ಯಪ್ರವೃತ್ತರಾದ ಪೈಲೆಟ್ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಿದ್ದಾರೆ.

ಚಕ್ರ ಬಿದ್ದ ಪರಿಣಾಮ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಹಲವಾರು ಕಾರುಗಳು ಜಖಂಗೊಂಡಿರುವುದಾಗಿ ಹೇಳಲಾಗಿದೆ.

ಒಸಾಕಾಗೆ ಹೊರಟಿದ್ದ ವಿಮಾನದಲ್ಲಿ ಸುಮಾರು 249 ಜನ ಪ್ರಯಾಣಿಕರಿದ್ದರು ಎಂದು ಯುನೈಟೆಡ್ ಏರ್‌ಲೈನ್ಸ್ ತಿಳಿಸಿದೆ.

Advertisement

ಇತ್ತೀಚಿಗೆ ಇದೆ ಕಂಪೆನಿಗೆ ಸೇರಿದ ವಿಮಾನ ಹಾರಾಟದ ವೇಳೆ ಬಾಗಿಲಿನ ಗಾತ್ರದಷ್ಟು ದೊಡ್ಡದಾದ ಫಲಕ ಹಾರಿ ಹೋಗಿರುವ ವಿಚಾರ ಸಾಕಷ್ಟು ಸುದ್ದಿಯಾಗಿತ್ತು ಇದಾದ ಬಳಿಕ ಇಂದಿನ ಈ ಘಟನೆ ಯುನೈಟೆಡ್ ಇಂಡಿಯಾ ವಿಮಾನದ ಗುಣಮಟ್ಟವನ್ನು ಸೂಚಿಸುವಂತಿದೆ ಎಂದು ಹೇಳಲಾಗಿದೆ. ಸದ್ಯ ಪೈಲೆಟ್ ಸುರಕ್ಷಿತವಾಗಿ ವಿಮಾನವನ್ನು ಇಳಿಸಿದ ಪರಿಣಾಮ ಯಾವುದೇ ತೊಂದರೆ ಆಗಲಿಲ್ಲ ಎನ್ನಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next