Advertisement

ಕಾರು ಮಾಲೀಕನಿಗೆ 20,000 ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್ : ಕಾರಣ ಇಷ್ಟೇ

01:49 PM Apr 02, 2022 | Team Udayavani |

ಉತ್ತರ ಪ್ರದೇಶ : ಅದೆಷ್ಟೋ ಸಲ ವಾಹನ ಚಾಲಕರಿಗೆ ಗೊತ್ತಿಲ್ಲದೇ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ವಾಹನ ಮಾಲಕರ ಮನೆಗೆ ನೊಟೀಸ್ ಬರುವುದಿದೆ, ಅಲ್ಲದೆ ಕೆಲವೊಂದು ಸಲ ವಾಹನ ಮಾಲಕರ ತಪ್ಪಿಲ್ಲದಿದ್ದರೂ ದಂಡ ಕಟ್ಟಲು ನೊಟೀಸ್ ಬಂದದ್ದೂ ಇದೆ.

Advertisement

ಆದರೆ ಉತ್ತರ ಪ್ರದೇಶದ ಗಾಝಿಯಾಬಾದ್ ಮೂಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಇಪ್ಪತ್ತು ಸಾವಿರ ಮೊತ್ತದ ದಂಡವನ್ನು ಸಂಚಾರಿ ಪೊಲೀಸರು ವಿಧಿಸಿದ್ದಾರೆ. ಕಾರಣ ಇಷ್ಟೇ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಯುವಕರ ಗುಂಪೊಂದು ತಮ್ಮ ಕಾರಿನ ಛಾವಣಿಯ ಮೇಲೆ ಡ್ಯಾನ್ಸ್ ಮಾಡಿದ್ದಾರೆ, ವಾಹನ ಸಂಚಾರ ಇರುವ ರಸ್ತೆಯಲ್ಲೇ ಯುವಕರು ಮದ್ಯ ಸೇವಿಸಿ ಕಾರು ಚಲಿಸಿಸುತ್ತಿದ್ದಂತೆ ಕಾರಿನ ಛಾವಣಿ ಮೇಲೆ ಇಬ್ಬರು ಯುವಕರು ಕುಣಿದಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ, ಈ ವೇಳೆ ಆ ರಸ್ತೆಯಲ್ಲೇ ಸಂಚರಿಸುತ್ತಿದ್ದ ಇನ್ನೊಂದು ಕಾರಿನವರು ಆ ಯುವಕರ ವಿಡಿಯೋ ಮಾಡಿ ಗಾಝಿಯಾಬಾದ್ ಪೊಲೀಸರಿಗೆ ಟ್ವಿಟರ್ ಮೂಲಕ ಶೇರ್ ಮಾಡಿ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ..

33 ಸೆಕುಂಡುಗಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಾಝಿಯಾಬಾದ್ ಪೋಲಿಸರು ಕಾರಿನ ಮಾಲಕರಿಗೆ ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಇಪ್ಪತ್ತು ಸಾವಿರ ರೂಪಾಯಿ ದಂಡ ಕಟ್ಟುವಂತೆ ನೊಟೀಸ್ ಕಳುಹಿಸಿದ್ದಾರೆ. ಅಲ್ಲದೆ ಪೊಲೀಸರು ವಾಹನ ಮಾಲಕರಿಗೆ ಕಳುಹಿಸಿದ ನೊಟೀಸ್ ನ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next