Advertisement

ಚೀನಾ ಮೆಟ್ರೋ ರೈಲಿನಲ್ಲಿ ಪ್ರಯಾಣದ ಅವಸ್ಥೆ ಹೇಗಿದೆ ಗೊತ್ತಾ!Watch

03:46 PM Nov 19, 2018 | Sharanya Alva |

ಬೀಜಿಂಗ್: ಜಗತ್ತಿನ ಅತೀ ಎತ್ತರದ ಸೇತುವೆ, ಜಗತ್ತಿನ ಅತೀ ಉದ್ದದ ಸೇತುವೆ ಹೀಗೆ ಒಂದಿಲ್ಲೊಂದು ಕಾಮಗಾರಿಗಳ ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿರುವ ಚೀನಾದಲ್ಲಿ ಮೆಟ್ರೋ ಪ್ರಯಾಣ ಹೇಗಿದೆ ಎಂಬುದಕ್ಕೆ ಭಾರತದ ಮಹೀಂದ್ರ ಕಂಪನಿ ಮಾಲೀಕ ಆನಂದ ಮಹೀಂದ್ರ ಅವರು ತಮ್ಮ ಟ್ವೀಟ್ ನಲ್ಲಿ ಟ್ವೀಟ್ ಮಾಡಿರುವ ವಿಡಿಯೋ ತುಣುಕು ಸಾಕ್ಷಿಯಾಗಿದೆ.

Advertisement

ವಿಶ್ವದಲ್ಲಿಯೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಬೆಳಗ್ಗೆ ಕಚೇರಿಗೆ, ಉದ್ಯೋಗಕ್ಕೆ ತೆರಳುವ ಮಹಿಳೆಯರ ಪಾಡು ಮೆಟ್ರೋದಲ್ಲಿ ಹೇಗಿದೆ ಎಂಬುದನ್ನು ಆನಂದ ಮಹೀಂದ್ರ ಅವರು ಗೆಳೆಯರೊಬ್ಬರು ವಾಟ್ಸಪ್ ಗೆ ಕಳುಹಿಸಿರುವ ವಿಡಿಯೋದಲ್ಲಿ ಬಟಾಬಯಲಾಗಿದೆ.

ಸೋಮವಾರ ಬೆಳಗ್ಗೆ ಮೆಟ್ರೋದಲ್ಲಿ ಪ್ರಯಾಣಿಕರನ್ನು ಸಿಬ್ಬಂದಿ ಗಂಡಸರು, ಹೆಂಗಸರು ಎಂದು ನೋಡದೆ ಒಳಗೆ ನೂಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಚ್ಚರಿ ಏನೆಂದರೆ ಮಹಿಳೆಯರೂ ಈ ಬಗ್ಗೆ ಯಾವುದೇ ದೂರು ನೀಡದೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ!  ದೆಹಲಿ, ಮುಂಬೈನಲ್ಲಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಇಂತಹ ಪರಿಸ್ಥಿತಿಯನ್ನು ಕಾಣಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next