Advertisement

ನಾನು ಸ್ವರ್ಗದಲ್ಲಿ ಸಂತೋಷವಾಗಿದ್ದೇನೆ… ಜೈಲಿನಲ್ಲಿದ್ದುಕೊಂಡೇ ಲೈವ್ ವಿಡಿಯೋ ಮಾಡಿದ ಆರೋಪಿ

03:56 PM Mar 15, 2024 | Team Udayavani |

ಉತ್ತರಪ್ರದೇಶ: ಕೊಲೆ ಪ್ರಕರಣದಲ್ಲಿ ಉತ್ತರಪ್ರದೇಶದ ಬರೇಲಿಯ ಕೇಂದ್ರ ಕಾರಾಗ್ರಹದಲ್ಲಿ ಕಂಬಿ ಎಣಿಸುತ್ತಿರುವ ಆರೋಪಿಯೋರ್ವ ಜೈಲಿನಲ್ಲಿ ಇದ್ದುಕೊಂಡೇ ಲೈವ್ ವಿಡಿಯೋ ಹರಿಬಿಟ್ಟ ಘಟನೆ ಬೆಳಕಿಗೆ ಬಂದಿದ್ದು ಇದರ ಬೆನ್ನಲ್ಲೇ ಜೈಲಿನಲ್ಲಿ ಆರೋಪಿಗಳಿಗೆ ಯಾವ ರೀತಿಯ ಅನುಕೂಲಗಳು ಸಿಗುತ್ತವೆ ಎಂಬ ಕುರಿತು ಸಾರ್ವಜನಿಕರಲ್ಲಿ ಅನುಮಾನಗಳು ಕಾಡತೊಡಗಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಒಂದು ವೇಳೆ ಜೈಲು ಅಧಿಕಾರಿಗಳು ತಪ್ಪು ಎಸಗಿರುವುದು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಏನಿದು ಪ್ರಕರಣ:
2019 ರ ಡಿಸೆಂಬರ್ 2 ರಂದು ದೆಹಲಿಯ ಶಹಜಾನ್‌ಪುರದ ಸದರ್ ಬಜಾರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಗುತ್ತಿಗೆದಾರ ರಾಕೇಶ್ ಯಾದವ್ (34) ಅವರನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ಆರೋಪಿಯಾಗಿರುವ ಆಸಿಫ್ ನನ್ನ ಬಂಧಿಸಿ ಉತ್ತರಪ್ರದೇಶದ ಬರೇಲಿಯ ಕೇಂದ್ರ ಕಾರಾಗ್ರಹದಲ್ಲಿ ಇರಿಸಲಾಗಿದೆ ಇದೀಗ ಆತ ಜೈಲಿನಲ್ಲಿ ಇದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಎರಡು ನಿಮಿಷಗಳ ವಿಡಿಯೋ ಒಂದು ಹರಿಬಿಟ್ಟಿದ್ದಾನೆ ಅದರಲ್ಲಿ ನಾನು ಸ್ವರ್ಗದಲ್ಲಿದ್ದು ಎಂಜಾಯ್ ಮಾಡುತಿದ್ದೇನೆ ಇನ್ನು ಕೆಲವೇ ದಿನದಲ್ಲಿ ಹೊರಗೆ ಬರಲಿದ್ದೇನೆ ಎಂದು ಹೇಳುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಲೈವ್ ಆಗುತ್ತಿದ್ದಂತೆ ರಾಕೇಶ್ ಯಾದವ್ ಅವರ ಸಹೋದರ ಜಿಲ್ಲಾಧಿಕಾರಿ ಉಮೇಶ್​ ಪ್ರತಾಪ್​ ಸಿಂಗ್​ ಅವರನ್ನು ಭೇಟಿ ಮಾಡಿ ಜೈಲಿನಲ್ಲಿರುವ ಆರೋಪಿಗಳಿಗೆ ಉತ್ತಮ ಸೌಲಭ್ಯ ನೀಡಲಾಗುತ್ತಿದೆ ಅಲ್ಲದೆ ಅವರಿಗೆ ಬೇಕಾದ ಮೊಬೈಲ್ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ ಎಂದು ದೂರು ನೀಡಿದ್ದಾರೆ.

ಸದ್ಯ ಈ ವಿಡಿಯೋ ಕುರಿತು ಮಾಹಿತಿ ನೀಡಿದ ಡೆಪ್ಯುಟಿ ಇನ್ಸ್​​ಪೆಕ್ಟರ್​ ಜನರಲ್​​ ಕುಂತಲ್​ ಕಿಶೋರ್​ ಜೈಲಿನಲ್ಲಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next