ಸಾಗರ್(ಮಧ್ಯಪ್ರದೇಶ): ಜಗದೀಶ್ ಯಾದವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಅಮಾನತುಗೊಂಡ ಬಿಜೆಪಿ ಮುಖಂಡ ಮಿಶ್ರಿ ಚಂದ್ ಗುಪ್ತಾ ಅವರ ಅನಧಿಕೃತ ಹೋಟೆಲ್ ಅನ್ನು ಜಿಲ್ಲಾಡಳಿತ ಧ್ವಂಸಗೊಳಿಸಿರುವ ಘಟನೆ ಮಂಗಳವಾರ(ಜನವರಿ 03) ಮಧ್ಯಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ರಾತ್ರಿ ಮದ್ಯ ಸೇವಿಸಿ ಬೆಳಿಗ್ಗೆ ಮೃತಪಟ್ಟ ವ್ಯಕ್ತಿ; ಬಾರ್ ಮುಚ್ಚುವಂತೆ ಸ್ಥಳೀಯರ ಆಗ್ರಹ
ಡಿಸೆಂಬರ್ 22ರಂದು ಬಿಜೆಪಿ ಮುಖಂಡ ಗುಪ್ತಾ ತನ್ನ ಎಸ್ ಯುವಿ ಕಾರನ್ನು ಜಗದೀಶ್ ಯಾದವ್ ಅವರ ಮೇಲೆ ಹರಿಸಿದ್ದ ಪರಿಣಾಮ ದಾರುಣ ಅಂತ್ಯ ಕಂಡಿದ್ದರು. ಈ ಭೀಕರ ಘಟನೆ ಬಗ್ಗೆ ಗುಪ್ತಾ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.
ಮಧ್ಯಪ್ರದೇಶದ ಸಾಗರ್ ನಲ್ಲಿರುವ ಗುಪ್ತಾ ಒಡೆತನದ ಅನಧಿಕೃತ ಹೋಟೆಲ್ ಅನ್ನು ಇಂದೋರ್ ನ ವಿಶೇಷ ತಜ್ಞರ ತಂಡ ಬರೋಬ್ಬರಿ 60 ಡೈನಾಮೇಟ್ಸ್ ಇಟ್ಟು ಸ್ಫೋಟಗೊಳಿಸಿತ್ತು. ಕೆಲವೇ ಸೆಕೆಂಡ್ಸ್ ಗಳಲ್ಲಿ ಇಡೀ ಕಟ್ಟಡ ನೆಲಸಮವಾಗಿತ್ತು ಎಂದು ವರದಿ ತಿಳಿಸಿದೆ.
ಕಟ್ಟಡ ಧ್ವಂಸಗೊಳಿಸುವ ಸಂದರ್ಭದಲ್ಲಿ ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ, ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ (ಡಿಐಜಿ) ತರುಣ್ ನಾಯಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ವರದಿ ಹೇಳಿದೆ.