Advertisement

ವಿಡಿಯೋ ಗೇಮ್ ಆಡಬೇಡ ಎಂದ ಪತ್ನಿಯ ಮಾತಿಗೆ ಬೇಸರಗೊಂಡ ಪತಿ ಆತ್ಮಹತ್ಯೆ!

05:57 PM Nov 11, 2020 | sudhir |

ಬೆಳಗಾವಿ: ಫೋನ್‌ನಲ್ಲಿ ವಿಡಿಯೋ ಗೇಮ್‌ ಆಡಬೇಡ ಎಂದು ಪತ್ನಿ ಹೇಳಿದ್ದಕ್ಕೆ ಮಾನಸಿಕವಾಗಿ ನೊಂದ ಪತಿ ನಗರದ
ಖಡೇಬಜಾರ್‌ ರಸ್ತೆಯಲ್ಲಿರುವ ಲಾಡ್ಜ್ ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಚಿಕ್ಕಮಗಳೂರು ಚರ್ಚ್‌ ರಸ್ತೆಯ ನಿವಾಸಿ ಶಹಾಬ್‌ ಸಿ.ಎಂ. (36) ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಚಿಕ್ಕಪ್ಪನ ಮಗ ಅಲ್ತಾಫ್‌ ಉರೆಹಮಾನ್‌ ದೂರು ನೀಡಿದ್ದಾರೆ. ಇವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ.

ಎಎಸ್‌ಐ ಎ.ಎಂ. ಯರಗಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಮುತಗಾ: ವೃದ್ಧ ಆತ್ಮಹತ್ಯೆ
ಸಾಂಬ್ರಾ: ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗ್ರಾಮದ ಅಂಬೇಡ್ಕರ್‌ ಓಣಿಯ ನಿವಾಸಿ ಗಣಪತಿ ಭರಮಾ ಕೋಲಕಾರ (75) ಮೃತ ವ್ಯಕ್ತಿ. ಗಣಪತಿ ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Advertisement

ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next