ಅಸ್ಸಾಂ: ಮದುವೆ ಎನ್ನುವುದು ಜೀವನದದ ಅದ್ಭುತ ಕ್ಷಣ. ಸುಂದರ ಕ್ಷಣದಲ್ಲಿ ಸಂತಸ, ಸಂಭ್ರಮವಿರುತ್ತದೆ. ಆದರೆ ಇಲ್ಲೊಂದು ಮದುವೆ ಸಮಾರಂಭ ಮದ್ಯದ ಕಾರಣದಿಂದ ರದ್ದಾಗಿದೆ.
ಅಸ್ಸಾಂಮಿನ ನಲ್ಬರಿ ಎಂಬಲ್ಲಿ ಇತ್ತೀಚೆಗೆ ಮದುವೆ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಹೆಣ್ಣಿನ ಕುಟುಂಬ ಮಂಟಪಕ್ಕೆ ಬಂದು ಕೂತಿದೆ. ಹಸೆಮಣೆಯಲ್ಲಿ ಕೂತ ವರನಿಗೆ ಆರ್ಚಕರು ಆಚರಣೆಯನ್ನು ಹೇಗೆ ಅನುಸರಿಸಬೇಕೆಂದು ಹೇಳಿಕೊಡುತ್ತಿದ್ದಾರೆ. ಆದರೆ ವರ ಮಾತ್ರ ಅದನ್ನು ಕೇಳಿಸಿಕೊಳ್ಳಲು ಆಗುತ್ತಲೇ ಇಲ್ಲ. ಅದಕ್ಕೆ ಕಾರಣ ತನ್ನದೇ ಮದುವೆಯಲ್ಲಿ ವರ ಕಂಠಪೂರ್ತಿ ಕುಡಿದು ಹಸೆಮಣೆಯಲ್ಲಿ ಕೂತಿದ್ದಾನೆ.
ಮಂತ್ರ, ಆಚರಣೆ, ಸಂಪ್ರದಾಯವನ್ನು ಆರ್ಚಕರು ಹೇಳಿಕೊಡುತ್ತಿದ್ದಾರೆ ಆದರೆ ವರ ಮದ್ಯವನ್ನು ಸೇವಿಸಿದ ಪರಿಣಾಮ ಆತ ಸರಿಯಾಗಿ ಕೂರಲು ಸಮೇತ ಆಗುತ್ತಿಲ್ಲ. ಆತ ಕುಡಿದು ಟೈಟಾಗಿ ಮಂತ್ರವನ್ನು ಅರೆಬರೆಯಾಗಿ ಹೇಳುತ್ತಲೇ ಕುಡಿದು ಹಸೆಮಣೆಯಲ್ಲೇ ಬಿದ್ದಿದ್ದಾನೆ.
ಇದನ್ನೂ ಓದಿ: ಪ್ರತಿಷ್ಠಿತ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಂದ್…ಅಮೆರಿಕದ 2ನೇ ಅತೀ ದೊಡ್ಡ Bank ವೈಫಲ್ಯ!
Related Articles
ಇದನ್ನು ಗಮನಿಸುತ್ತಲೇ ಇದ್ದ ವಧು ಇಂಥ ಕುಡುಕನನ್ನು ಮದುವೆಯಾಗಲಾರೆ ಎಂದು ಹೇಳಿ ಮದುವೆಯನ್ನೇ ರದ್ದು ಮಾಡಿ ಮಂಟಪದಿಂದ ಹೊರ ಹೋಗಿದ್ದಾರೆ. ನಲ್ಬರಿ ಪೋಲೀಸ್ ಠಾಣೆಗೆ ತೆರಳಿ ವಧುವಿನ ಮನೆಯವರು ಮದುವೆಗಾಗಿ ಖರ್ಚು ಮಾಡಿದ ಹಣವನ್ನು ಪಾವತಿಸಬೇಕೆಂದು ವರನ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾರೆ.
ವರ ಹಾಗೂ ವರನ ಅಪ್ಪ, ಸೇರಿದಂತೆ ಆತನ ಕುಟುಂಬದ ಬಹುತೇಕ ಸದಸ್ಯರು ಕುಡಿದು ಮದುವೆ ಮಂಟಪಕ್ಕೆ ಬಂದಿದ್ದಾರೆ. ನಾವು ಮದುವೆಗಾಗಿ ಎಲ್ಲವನ್ನು ತಯಾರು ಮಾಡಿಕೊಂಡು ಬಂದಿದ್ದರೂ ವರ ಹಾಗೂ ಆತನ ಮನೆಯವರು ಕುಡಿದು ಬಂದ ಕಾರಣ ಮದುವೆಯನ್ನು ರದ್ದು ಮಾಡಿದ್ದೇವೆ. ನಮಗೆ ಖರ್ಚು ಮಾಡಿದ ಹಣವನ್ನು ಮರಳಿಸಲಿ ಎಂದು ಠಾಣೆ ಮೆಟ್ಟಿಲು ಏರಿದ್ದಾರೆ.
ಕುಡಿದು ಬಂದು ಹಸೆಮಣೆ ಏರಿದ ವರನ ವಿಡಿಯೋ ವೈರಲ್ ಆಗಿದೆ.