Advertisement

ಅರುಣಾಚಲ : ಸ್ಪರ್ಧೆ ಇಲ್ಲದೆ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ!

09:15 AM Mar 29, 2019 | Team Udayavani |

ಇಟಾನಗರ : ಅರುಣಾಚಲಪ್ರದೇಶದ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನವೇ ನಡೆಯದೆ ಬಿಜೆಪಿ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.

Advertisement

ಔಲೋ ಪೂರ್ವ ವಿಧಾನಸಭಾ ಕ್ಷೇತ್ರ ಮತ್ತು ಯಾಚುಲಿ ಕ್ಷೇತ್ರಗಳಲ್ಲಿ ಎಪ್ರಿಲ್‌ 11 ರಂದು ಮತದಾನ ನಿಗದಿಯಾಗಿತ್ತು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಅವರು ಟ್ವೀಟ್‌ ಮಾಡಿದ್ದು, ಬಿಜೆಪಿಯ ಗೆಲುವಿನ ಯಾತ್ರೆ ಅರುಣಾಚಲದಿಂದ ಆರಂಭವಾಗಿದ್ದು, ಸರ್‌ ಕೆಂಟೊ ಜಿನಿ ಅವರು ಸ್ಪರ್ಧೆ ಇಲ್ಲದೆ ಔಲೊ ಪೂರ್ವದಲ್ಲಿ , ಮತ್ತೊಂದು ಗೆಲುವು ಇರ್‌ ಟಾಬಾ ಟೆಡಿರ್‌ ಅವರು ಯಾಚುಲಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬರೆದಿದ್ದಾರೆ.

60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭೆಗೆ ಎಪ್ರಿಲ್‌ 11 ರಂದು ಲೋಕಸಭಾ ಕ್ಷೇತ್ರಗಳೊಂದಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next