ಆಲೂರು: ಹೇಮಾವತಿ ಅಣೆಕಟ್ಟಿನಿಂದ ಮುಳುಗಡೆ ಯಾದ ಸಂತ್ರಸ್ತರಿಗೆ ಸರ್ಕಾರ ಬ್ಯಾಬ ಪಾರೆಸ್ಟ್ ವ್ಯಾಪ್ತಿ ಯಲ್ಲಿ ಜಮೀನು ನೀಡಿ 50 ವರ್ಷ ಕಳೆದರೂ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ದುರಸ್ತಿ ಹಾಗೂ ಪಕ್ಕ ಪೋಡು ಮಾಡದೆ ಸಂತ್ರಸ್ತ ಕುಟುಂಬ ಕಚೇರಿ ಅಲೆಯುವಂತಾಗಿದೆ.
50 ವರ್ಷಗಳ ಹಿಂದೆ ತುಮಕೂರು ಬೆಂಗಳೂರು ಗ್ರಾಮಾಂತರ ಸೇರಿದಂತೆ ಇತರೆ ಕುಡಿಯುವ ನೀರು ಒದಗಿಸುವ ಸಲುವಾಗಿ ಡ್ಯಾಂ ನಿರ್ಮಾಣ ವೇಳೆ ಪೊನ್ನತ ಪುರ, ಬಂಡಿ ಮಲ್ಲೇನಹಳ್ಳಿ,ಮಂದಿರಾ, ಕಾಕನಹಳ್ಳಿ, ಸಿದ್ದಾಪುರ, ಹೊಳೆಮಾರನಹಳ್ಳಿ, ಅಪ್ಪಗೊಡನಹಳ್ಳಿ, ಗಂಜಿಗೆರೆ, ಬಸವನಹಳ್ಳಿ, ಅಜ್ಜಗೊಡನಹಳ್ಳಿ ಸೇರಿದಂತೆ ಸುಮಾರು 48 ಗ್ರಾಮಗಳನ್ನು ಜಿಲ್ಲೆಯ ವಿವಿಧ ಭಾಗಗಳಿಗೆ ಸ್ಥಳಾಂತರ ಮಾಡಿದ್ದು ಕೆಲವು ಸಂತ್ರಸ್ತರನ್ನು ಆಲೂರು ತಾಲ್ಲೂಕಿನ ಬ್ಯಾಬ ಫಾರೆಸ್ಟ್‌ನಲ್ಲಿ ಒಂದು ಕುಟುಂಬಕ್ಕೆ ತಲಾ ನಾಲ್ಕು ಎಕರೆಯಂತೆ ಸುಮಾರು 300 ಕುಟುಂಬಗಳಿಗೆ 1558 ಎಕರೆ ಜಮೀನು ನೀಡಲಾಗಿದೆ.
ಆದರೆ, ಜಮೀನು ನೀಡಿ ಐದು ದಶಕಗಳು ಕಳೆದರೂ ಇದುವರೆಗೂ ಆ ಕುಟುಂಬ ಗಳಿಗೆ ಜಮೀನಿಗೆ ಯಾವುದೇ ಹಕ್ಕು ಬಾದ್ಯತೆ ನೀಡಿಲ್ಲ. ರೈತರು ಜಮೀನು ದುರಸ್ತಿ ಪಡಿ ಸುವಂತೆ ತಾಲೂಕು ಕಚೇರಿಗೆ ಅಲೆಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಬಿಜೆಪಿ ಮುಖಂಡ ಸಿಮೆಂಟ್ ಮಂಜು ಅವರ ಉಪಸ್ಥಿತಿಯಲ್ಲಿ ನೂರಾರು ಸಂತ್ರಸ್ತರು, ಆಲೂರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಆಲೂರು ತಾಲೂಕು ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ ಜಿಲ್ಲಾ ಹಾಗೂ ತಾಲೂಕು ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Related Articles
ಉಳ್ಳವರಿಗೆ ದುರಸ್ತಿ: ರಾಜಕೀಯ ಹಾಗೂ ಆರ್ಥಿಕವಾಗಿ ಮುಂದಿರುವ ಕೆಲವು ರೈತರು ಅಧಿಕಾರಿಗಳಿಗೆ ಹಣ ನೀಡಿ ಈಗಾಗಲೇ ಜಮೀನು ದುರಸ್ತಿ ಪಡಿಸಿಕೊಂಡಿದ್ದಾರೆ. ಇನ್ನೂ ಕೆಲವರು ದುರಸ್ತಿ ಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಎಚ್‌ಆರ್‌ಪಿ ಜಮೀನು ಮಂಜೂ ರಿಗೆ ಜಿÇÉಾಧಿಕಾರಿ ಅದೇಶ ಇಲ್ಲ. ದುರಸ್ತಿ ಸಾಧ್ಯವಿಲ್ಲ. ಸರ್ಕಾರದ ಅದೇಶ ಬರಲಿ ಮಾಡಿಕೋಡುತ್ತೇವೆ ಎನ್ನುತ್ತಾರೆ.
ಜಮೀನಿನ ನಕ್ಷೆ ನೀಡಿಲ್ಲ: ಬೈರಾಪುರ ಗ್ರಾಪಂ ಸದಸ್ಯ ಗಣೇಶ್ ಮಾತನಾಡಿ, ನಮಗೆ ಜಮೀನು ನೀಡಿ 50 ವರ್ಷ ಕಳೆದರೂ, ಇದುವರೆವಿಗೂ ಸಂಬಂಧಪಟ್ಟ ಅಧಿಕಾರಿಗಳು ಸಾಗುವಳಿ ಚೀಟಿ ಬಿಟ್ಟರೆ ಒಎಂ ಅಥವಾ ಜಮೀನಿನ ನಕ್ಷೆಯಾಗಲಿ ಇದುವರೆಗೂ ನೀಡಿಲ್ಲ. ಕೆಲವು ಅಧಿಕಾರಿಗಳು ಜಮೀನು ದುರಸ್ತಿಗೆ ಹಣ ಪಡೆದು ಕೆಲಸ ಮಾಡಿಕೊಡದೇ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಪುರ ಗ್ರಾಮದ ರೈತ ಕೃಷ್ಣೇಗೌಡ ಮಾತನಾಡಿ ಹೇಮಾ ವತಿ ಜಲಾಶಯ ಕಟ್ಟಲು ಜಮೀನು ನೀಡಿ ಚಿನ್ನ ದಂತ ಭೂಮಿ ಕಳೆದುಕೊಂಡು ತ್ಯಾಗ ಮಾಡಿದ್ದರಿಂದ ಇಂದು ಕೋಟ್ಯಂತರ ಜನರು ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಮಗೆ ನೀಡಿದ ಜಮೀನಿಗೆ ಇದುವರೆವಿಗೂ ದುರಸ್ತಿ ಮಾಡಿಲ್ಲ. ಈ ತಪ್ಪಿಗೆ ಇಂದು ನಾವು, ಹಿಂದೆ ಪೂರ್ವಜರು ಈಗ ನಾವು ನಮ್ಮ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿ ಕೊಂಡಿದ್ದಾರೆ.
ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹೇಮಾವತಿ ಅಣೆಕಟ್ಟು ಸಂತ್ರಸ್ತರಿಗೆ ನೀಡಿದ ಜಮೀನಿಗೆ ದುರಸ್ತಿಪಡಿಸುವ ಮೂಲಕ ಹಕ್ಕು ಬಾದ್ಯತೆ ನೀಡಿ ಸಂಕಷ್ಟದಲ್ಲಿರುವ ಜನರಿಗೆ ನ್ಯಾಯ ದೊರಕಿಸಿಕೊಡ ಬೇಕು ಎಂದು ಜನಸಾಮಾನ್ಯರ ಒತ್ತಾಯವಾಗಿದೆ. ತಿಂಗಳ ಹಿಂದೆ ಹೇಮಾವತಿ ಸಂತ್ರಸ್ತ ರೈತರು ಪ್ರತಿಭಟನೆ ನಡೆಸಿ ಮನವಿ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಎಚ್‌ಆರ್ ಪಿ ಸಂಬಂಧಪಟ್ಟ ಸಭೆಯಲ್ಲಿ ಚರ್ಚಿಸೋಣ ಎಂದು ತಿಳಿಸಿದ್ದಾರೆ. ಅವರ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉದಯವಾಣಿಗೆ ತಿಳಿಸಿದರು. -ಸೌಮ್ಯ, ತಹಶೀಲ್ದಾರ್
ಈ ಹಿಂದೆ ನಿಮ್ಮ ಜಮೀನುಗಳಿಗೆ ಹಕ್ಕು ಬಾಧ್ಯತೆ ನೀಡುವುದಾಗಿ ನಂಬಿಸಿ ಅಧಿಕಾರಿಗಳು ಎರಡು ಮೂರು ದಶಕಗಳ ಹಿಂದೆ ಎಸ್.ಆ ರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜಮೀನಿಗೆ ಸಂಬಂಧಪಟ್ಟಂತೆ ಕೆಲವು ದಾಖಲಾತಿಗಳನ್ನು ಪಡೆದು ಜಮೀನಿಗೆ ಸರಿಯಾದ ಹಕ್ಕುಬಾಧ್ಯತೆ ನೀಡದೆ ವಂಚಿಸಿದ್ದಾರೆ. ಜಮೀನನ್ನು ಪರಭಾರೆ ಮಾಡುವಂತಿಲ್ಲ. ಸುಮಾರು ಐದು ದಶಕಗಳಿಂದಲೂ ನಾವು ಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ನೆರ ವಿಗೆ ಬರಲಿ ಎಂದು ಮನವಿ ಮಾಡಿದರು. -ನಂಜೇಶ್, ಬೈರಾಪುರ ಗ್ರಾಪಂ ಮಾಜಿ ಸದಸ್ಯ
-ಟಿ.ಕೆ.ಕುಮಾರಸ್ವಾಮಿ