Advertisement

ನೆರೆ ಪರಿಹಾರ ತಾರತಮ್ಯ ಖಂಡಿಸಿ ಪ್ರತಿಭಟನೆ

10:01 AM Sep 07, 2019 | Suhan S |

ಹುಬ್ಬಳ್ಳಿ: ಪ್ರವಾಹ ಪೀಡಿತ ನಿರಾಶ್ರಿತರಿಗೆ ಪರಿಹಾರ ನೀಡಿಡುವಲ್ಲಿ ಅಧಿಕಾರಿಗಳು ತಾರತಮ್ಯ ತೋರುತ್ತಿದ್ದಾರೆ ಎಂದು ಭಾರತೀಯ ಮೂಲ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರವಾಹ ಪೀಡಿತರನ್ನು ಗುರುತಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪಡದಯ್ಯನ ಹಕ್ಕಲ, ಇಂದಿರಾನಗರ, ಮ್ಯಾದಾರ ಓಣಿ, ನಾರಾಯಣ ಸೋಪಾ, ಕರ್ಕಿ ಬಸವೇಶ್ವರನಗರ, ಎಸ್‌.ಎಂ.ಕೃಷ್ಣ ನಗರ, ಬಿಡ್ನಾಳ, ಸದರಸೋಪಾ, ತೊರವಿಹಕ್ಕಲ ಹಾಗೂ ಚನ್ನಪೇಟ ಪ್ರದೇಶದಲ್ಲಿ ಸಾಕಷ್ಟು ಜನರು ಪ್ರವಾಹದಿಂದ ಸಂಕಷ್ಟ ಅನುಭವಿಸಿದ್ದು, ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆಯುವಂತಾಗಿದೆ. ಬಿದ್ದ ಮನೆಗಳಿಗೆ ಪರಿಹಾರ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೂಡಲೇ ಸಂತ್ರಸ್ತರ ಸಮೀಕ್ಷೆ ಕಾರ್ಯ ನಡೆಸಿ ಅರ್ಹರಿಗೆ ಪರಿಹಾರ ನೀಡಬೇಕು. ಸಂಪೂರ್ಣ ಮನೆ ಬಿದ್ದವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಅರ್ಜಿ ಸಲ್ಲಿಸುವ ಸಂತ್ರಸ್ತರಿಗೆ ಸೂಕ್ತ ಮಾಹಿತಿ ನೀಡಿ ಸ್ವೀಕರಿಸಬೇಕು. ಅಕ್ರಮ ಸಕ್ರಮ ಮನೆಗಳಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಗಂಗಾಧರ ಪೆರೂರ, ಜಿಲಾನಿ, ಮೇಘರಾಜ ಹಿರೇಮನಿ, ಶಂಕರ ಭೋಜಗಾರ, ಶಂಕರ ಅಜಮನಿ, ಆಂಜನೇಯ, ರಫಿಕ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next