Advertisement

ಅನರ್ಹ ಶಾಸಕರಿಗೆ,ಬಿಜೆಪಿಗೆ ಸಂತ್ರಸ್ತರ ಶಾಪ ತಟ್ಟಲಿದೆ : ಎಂ.ಬಿ.ಪಾಟೀಲ

08:14 AM Sep 24, 2019 | Team Udayavani |

ವಿಜಯಪುರ : ಅನರ್ಹ ಶಾಸಕರು ಹಾಗೂ ಬಿಜೆಪಿ‌ ಪಕ್ಷಕ್ಕೆ ರಾಜ್ಯದ ನೆರ ಸಂಸತ್ರಸ್ತರ ಶಾಪ ತಟ್ಟಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಟೀಕಿಸಿದರು.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಅವರು ಅನರ್ಹ ಶಾಸಕರು ರಾಜ್ಯದ ಜನತೆಗೆ ಹಾಗೂ ಕ್ಷೇತ್ರದ ಮತದಾರರಿಗೆ, ಸಂಕಷ್ಟದಲ್ಲಿರುವ ಸಂಸತ್ರಸ್ತರಿಗೆ ಮೋಸ ಮಾಡಿದ್ದಾರೆ.

ತಮ್ಮ ಕ್ಷೇತ್ರದ ಜನರು ನೆರೆಯ ಬಾಧೆಯಿಂದ ಕಣ್ಣೀರಲ್ಲಿ ಮುಳುಗಿದ್ದರೂ ಕಾಗವಾಡ, ಅಥಣಿ, ಗೋಕಾಕ ಅನರ್ಹ ಶಾಸಕರಿಗೆ ಸಂತ್ರಸ್ತ ಸಮಸ್ಯೆ ಆಲಿಸಲು ಮುಂದಾಗಿಲ್ಲ. ಹೀಗಾಗಿ ಅನರ್ಹ ಶಾಸಕರಿ ಸಂತ್ರಸ್ತರ ಶಾಪ ತಟ್ಟೊದು ಗ್ಯಾರಂಟಿ‌ ಎಂದು ಹರಿಹಾಯ್ದರು.

ಅನರ್ಹ ಶಾಸಕರ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಏನೇ ಬರಲಿ, ಕಾನೂನು ಗೌರವಿಸಬೇಕು.

15 ಮತಕ್ಷೇತ್ರದಲ್ಲಿ ಒಂದು ಪೆನಲ್ ಮಾಡಿದ್ದೇವಿ. ಹೀಗಾಗಿ ಉಪ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳ ಖಂಡಿತ ಕಾಂಗ್ರೆಸ್ ಗೆಲ್ಲಲಿದೆ ಎಂದರು.

Advertisement

ವಿರೋಧ ಪಕ್ಷದ ನಾಯಕರ ನೇಮಕ‌ ಶೀಘ್ರದಲ್ಲೇ ಆಗಲಿದೆ. ಹೈಕಮಾಂಡ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಸಮ್ಮಿಶ್ರ ಸರ್ಕಾರ ಅತಿ ಕೆಟ್ಟ ಸರಕಾರವಾಗಿತ್ತು ಎಂದು ಹೇಳಿಕೊಂಡಿರುವ ಹಿಂದಿನ ಅರ್ಥ, ತಾತ್ಪರ್ಯ ಬೇರೆಯೇ ಇದೆ.‌ ಬಿಜೆಪಿ ಸರ್ಕಾರದಲ್ಲಿ ಜನರ ಕೆಲಸಗಳ ಆಗ್ತಿಲ್ಲ. ಇದನ್ನ ವಿಶ್ಲೇಷಣೆ ಮಾಡುವಾಗ ಆ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಹೊಂದಾಣಿಕೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ‌ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next