Advertisement

‌Bollywood: ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಎಡಗೈಗೆ ಏಟು ಮಾಡಿಕೊಂಡ ವಿಕ್ಕಿ ಕೌಶಲ್

01:59 PM Feb 08, 2024 | Team Udayavani |

ಮುಂಬಯಿ: ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಅವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

Advertisement

ವಿಕ್ಕಿ ಕೌಶಲ್‌ ಅವರೊಂದಿಗೆ ಈ ಹಿಂದೆ ʼಜರಾ ಹಟ್ಕೆ ಜರಾ ಬಚ್ಕೆʼ ಸಿನಿಮಾವನ್ನು ಮಾಡಿದ್ದ ಲಕ್ಷ್ಮಣ್ ಉಟೇಕರ್ ಅವರು ‘ಛಾವಾʼ ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ವೇಳೆಯೇ ವಿಕ್ಕಿ ಕೌಶಲ್‌ ಅವರು ಗಾಯಗೊಂಡಿದ್ದಾರೆ ಎಂದ ವರದಿ ತಿಳಿಸಿದೆ.

ʼಛಾವಾʼ ಸಿನಿಮಾದ ಸಾಹಸ ದೃಶ್ಯವೊಂದರ ಚಿತ್ರೀಕರಣದ ವೇಳೆ ವಿಕ್ಕಿ ಅವರು ಏಟಾಗಿದ್ದು, ಪರಿಣಾಮ ಎಡಗೈಗೆ ಬ್ಯಾಂಡೇಜ್‌ ಹಾಕಲಾಗಿದೆ. ವಿಕ್ಕಿ ಕೆಲವು ವಾರಗಳ ಕಾಲ ವಿಶ್ರಾಂತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಎಡಗೈಗೆ ಏಟು ಮಾಡಿಕೊಂಡು ಮನೆಗೆ ಬರುತ್ತಿರುವ ವಿಕ್ಕಿ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ನೋಡಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ʼಛಾವಾʼ ಸಿನಿಮಾದಲ್ಲಿ ವಿಕ್ಕಿ ಕೌಶಲ್‌ ಜೊತೆ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next