Advertisement

ವೈಚಕುರಹಳ್ಳಿ ಪ್ರಥಮ ಹೊಗೆರಹಿತ ಗ್ರಾಮ

11:28 AM Sep 09, 2017 | Team Udayavani |

ಬೆಂಗಳೂರು: ದೇಶದ ಮೊಟ್ಟ ಮೊದಲ ಹೊಗೆರಹಿತ ಗ್ರಾಮದ ಖ್ಯಾತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ “ವೈಚಕುರಹಳ್ಳಿ’ ಸೇರುವ ಮೂಲಕ 2017ರ ಲಿಮ್ಕಾ ದಾಖಲೆಗೆ ಪ್ರವೇಶಿಸಿದೆ. ಗ್ರಾಮದ ಪ್ರತಿ ಮನೆಯಲ್ಲಿ ಅಡುಗೆ ಮಾಡಲು ಸೌದೆ ಅಥವಾ ಇನ್ನಿತರ ವಸ್ತುಗಳ ಬಳಕೆಗೆ ಬದಲಾಗಿ ಶೇ.100ರಷ್ಟು ಎಲ್‌ಪಿಜಿ ಇಂಧನ ಬಳಸುತ್ತಿರುವುದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ಸೇರಲು ಕಾರಣವಾಗಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿ., (ಐಒಸಿಎಲ್‌) ಪ್ರಕಟಣೆಯಲ್ಲಿ ತಿಳಿಸಿದೆ. 

Advertisement

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ರಾಜ್ಯ ಸಂಯೋ ಜಕ (ಆಯಿಲ್‌ ಇಂಡಸ್ಟ್ರಿ) ಎಸ್‌. ವರದಾಚಾರಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಣೆಗೆ ಈ ದಾಖಲೆ ನಮಗೆ ಮತ್ತಷ್ಟು ಪ್ರೇರಣೆ ನೀಡಿದೆ. ವೈಚಕುರ ಹಳ್ಳಿ ಗ್ರಾಮದ ಎಲ್ಲ 274 ಮನೆಗಳು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ   ಉಜ್ವಲ ಯೋಜನೆ (ಪಿಎಂಯುವೈ)ಯಡಿ ಸಂಪೂರ್ಣ ವಾಗಿ ಎಲ್‌ಪಿಜಿ ಬಳಸುವ ಮೂಲಕ ಹೊಗೆರಹಿತ ಗ್ರಾಮವಾಗಿಸಿರುವುದು ಸಂತಸ ತಂದಿದೆ. 

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಗ್ರಾಮವನ್ನು 2015ರ ಡಿ.8ರಂದೇ ದೇಶದ ಹೊಗೆರಹಿತ ಗ್ರಾಮ ಎಂದು ಘೋಷಿಸಿತ್ತು. ಈಗ 2017ರ ಲಿಮ್ಕಾ ಬುಕ್‌ ಆಫ್‌ ರೆಕಾಡ್ಸ್‌ಗೆ ಸೇರಿದ ಸಾಧನೆ ಗಾಗಿ ಇಂಡಿಯನ್‌ ಆಯಿಲ್‌ ಪರ ವಾಗಿ ಕರ್ನಾಟಕದಲ್ಲಿರುವ ಪ್ರತಿಯೊ ಬ್ಬರಿಗೂ, ಪ್ರಮುಖವಾಗಿ ವೈಚಕುರ ಹಳ್ಳಿಯ ಗ್ರಾಮಸ್ಥರಿಗೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next