Advertisement

ಮೈ ಮರೆತರೆ ಅಪಾಯ ತಪ್ಪಿದ್ದಲ್ಲ: ವೆಂಕಯ್ಯ ನಾಯ್ಡು 

10:49 PM Aug 24, 2021 | Team Udayavani |

ಬೆಂಗಳೂರು: ಕೊರೊನಾ ವಿರುದ್ಧದ ಸಮರದಲ್ಲಿ ನಾವು ಸಾಧಿಸಬೇಕಾದದ್ದು ಇನ್ನೂ ಇದೆ. ಸ್ವಲ್ಪ ಮೈ ಮರೆತರೂ ಅಪಾಯ ತಪ್ಪಿದ್ದಲ್ಲ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

Advertisement

ರಾಜಭವನದಲ್ಲಿ ಗಿವ್‌ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ವ್ಯಾಕ್ಸಿನೇಟ್‌ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೊರೊನಾಗೆ ಲಸಿಕೆಯೇ ರಾಮಬಾಣ. ಇದಕ್ಕೆ ಪರ್ಯಾಯ ಬೇರೊಂದಿಲ್ಲ. ಹೀಗಾಗಿ, ಪ್ರತಿಯೊಬ್ಬರಿಗೂ ಲಸಿಕೆಯೇ ನಮ್ಮ ಗುರಿಯಾಗ ಬೇಕು ಎಂದು ತಿಳಿಸಿದರು.

ಕೊರೊನಾ ಸಂದರ್ಭ ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿ ಅತಿ ಶ್ರೇಷ್ಠ. ಜಂಕ್‌ ಫ‌ುಡ್‌ ಬಿಟ್ಟು ನಮ್ಮ ಆಹಾರಕ್ಕೆ ಹೆಚ್ಚು ಆದ್ಯತೆ ನೀಡೋಣ. ನಮ್ಮ ಕುಟುಂಬ ಮತ್ತು ಪರಿವಾರದ ಆರೋಗ್ಯ ಕಾಪಾಡಿಕೊಳ್ಳೋಣ ಎಂದು ನಾಯ್ಡು ಅವರು ಕಿವಿಮಾತು ಹೇಳಿದರು.

ಕರ್ನಾಟಕಕ್ಕೆ ಶೇ. 20ರಷ್ಟು  ಹೆಚ್ಚುವರಿ ಲಸಿಕೆ ಪೂರೈಕೆ :

ಕರ್ನಾಟಕಕ್ಕೆ ಶೇ. 20ರಷ್ಟು ಹೆಚ್ಚುವರಿ ಲಸಿಕೆ ಪೂರೈಕೆಗೆ ಕೇಂದ್ರ  ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಒಪ್ಪಿದ್ದಾರೆ ಎಂದು ಉಪ ರಾಷ್ಟ್ರಪತಿ  ಎಂ.ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

Advertisement

ಸಿಎಂ ಬೊಮ್ಮಾಯಿ ಅವರ ಮನವಿ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರು ಕೇಂದ್ರ ಸಚಿವರ ಜತೆ ಮಾತನಾಡಿದ್ದು ತತ್‌ಕ್ಷಣವೇ ಅವರು ಒಪ್ಪಿದ್ದಾರೆ ಎಂದು ಹೇಳಲಾಗಿದೆ.

ನಿತ್ಯ 5 ಲಕ್ಷ ಲಸಿಕೆ ಗುರಿ :

ರಾಜ್ಯದಲ್ಲಿ ಸೆಪ್ಟಂಬರ್‌ ತಿಂಗಳಿನಿಂದ ಪ್ರತಿ ದಿನ 5 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪ್ರಸ್ತುತ 3.5ರಿಂದ 4 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದ್ದು ಅದನ್ನು 5 ಲಕ್ಷಕ್ಕೆ ಏರಿಸಲಾಗುವುದು. ಕೇಂದ್ರ ಸರಕಾರದಿಂದ 1.5 ಕೋಟಿ ಲಸಿಕೆ ಪೂರೈಕೆಯಾಗುವ ಭರವಸೆ ಸಿಕ್ಕಿದೆ. ಜತೆಗೆ, ಕೊರೊನಾ ಮೂರನೇ ಅಲೆ ಅಕ್ಟೋಬರ್‌ ತಿಂಗಳಲ್ಲಿ  ಎದುರಾಗುವ ನಿರೀಕ್ಷೆ ಇರುವುದರಿಂದ ರಾಜ್ಯವು ಮೂಲಸೌಕರ್ಯ ಸೇರಿ ಎಲ್ಲ ರೀತಿಯಲ್ಲೂ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next