Advertisement

ಉಪರಾಷ್ಟಪತಿ ವೆಂಕಯ್ಯನಾಯ್ಡು ಹಂಪಿಗೆ ಆಗಮನ : ವಾಯುಸೇನೆ  ಹೆಲಿಕ್ಯಾಪ್ಟರ್  ಪೂರ್ವಭ್ಯಾಸ

05:45 PM Aug 18, 2021 | Team Udayavani |

ಹೊಸಪೇಟೆ :  ಆ. 2೦ ರಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ವಿಶ್ವ ವಿಖ್ಯಾತ ಹಂಪಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ನಗರದ ಮುನ್ಸಿಫಲ್ ಮೈದಾನದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಹೆಲಿಪ್ಯಾಡ್‌ ನಲ್ಲಿ ವಾಯುಸೇನೆಯ  ಹೆಲಿಕ್ಯಾಪ್ಟರ್ ಪೈಲಟ್  ಇಂದು (ಬುಧವಾರ, ಆಗಸ್ಟ್ 18) ಪೂರ್ವಾಭ್ಯಾಸ ನಡೆಸಿದರು.

Advertisement

ಉಪರಾಷ್ಟ್ರಪತಿ ವೆಂಕನಾಯ್ಡು ಅವರ ಕುಟುಂಬ ವಾಯುಸೇನೆಯ ವಿಶೇಷ ವಿಮಾನದ ಮೂಲಕ ನಗರಕ್ಕೆ ಆಗಮಿಸಿ, ಇಲ್ಲಿಂದ ಹಂಪಿಗೆ ತೆರಳುವ ಹಿನ್ನಲೆಯಲ್ಲಿ ವಾಯುಸೇನೆಯ ಹೆಲಿಕ್ಯಾಪ್ಟರ್ ಪೈಲಟ್ ಹಾರಾಟ, ಲ್ಯಾಂಡಿಂಗ್ ಅಭ್ಯಾಸ ನಡೆಸಿದರು. ಹತ್ತಾರು ಬಾರಿ ಹೆಲಿಕ್ಯಾಪ್ಟರ್ ಹಾರಾಟ ಹಾಗೂ ಲ್ಯಾಂಡಿಂಗ್ ನಡೆಸುವುದು ಮಾಡಿದರು.

ಇದನ್ನೂ ಓದಿ : ಬೆಳಗ್ಗೆ ಸಾರ್ವಕಾಲಿಕ ದಾಖಲೆ ಬರೆದಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 163 ಅಂಕ ಕುಸಿತ!

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ ಎಚ್.ವಿಶ್ವನಾಥ, ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಮೈದಾನ ಸುತ್ತಲು ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಅಭ್ಯಾಸ ನೋಡಲು ಮೈದಾನ ಸುತ್ತಲು ಜನರು ಸೇರಿದ್ದರು. ವೆಂಕಯ್ಯನಾಯ್ಡು ಅವರ ಕುಟುಂಬ ಆ. 2೦ ರಂದು ವಾಯುಸೇನೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಮುನ್ಸಿಫಲ್ ಮೈದಾನಕ್ಕೆ ಆಗಮಿಸಲಿದ್ದಾರೆ.

Advertisement

ಇಲ್ಲಿಂದ ಮೊದಲು ನೇರವಾಗಿ ತುಂಗಭದ್ರಾ ಜಲಾಶಯಕ್ಕೆ ತೆರಳಲಿದ್ದಾರೆ. ಬಳಿಕ ಹಂಪಿ – ಕಮಲಾಪುರ ಮಯೂರ ಭುವನೇಶ್ವರಿ ಹೋಟೆಲ್‌ನಲ್ಲಿ ವ್ಯಾಸ್ತವ್ಯ ಹೂಡಲಿದ್ದಾರೆ.

ಆ.21 ರಂದು ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಲಿದ್ದು, ನಂತರ ಪ್ರಮುಖ ಸ್ಮಾರಕ ವೀಕ್ಷಣೆ ಮಾಡಲಿದ್ದಾರೆ. ರಾತ್ರಿ ಅಲ್ಲಿಯ ವ್ಯಾಸ್ತವ್ಯ ಮಾಡಿ ಮರುದಿನ ಬೆಳಿಗ್ಗೆ ಹುಬ್ಬಳ್ಳಿಗೆ ಪ್ರಯಾಣ ಬೆಳಸಲಿದ್ದಾರೆ.

ಈಗಾಗಲೇ ಕಚೇರಿ ಸಿಬ್ಬಂದಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೊಠಡಿ ಮೀಸಲಿಡಲಾಗಿದೆ.

ಇದನ್ನೂ ಓದಿ : ಯಾದಗಿರಿ ಜನಾಶೀರ್ವಾದ ಯಾತ್ರೆ ವೇಳೆ ಸುಡುಮದ್ದು ಸದ್ದು: ಪ್ರಕರಣ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next