Advertisement

ನೂತನ ಸಂಸತ್ ಭವನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ಉಪ ರಾಷ್ಟ್ರಪತಿ

12:26 PM Sep 17, 2023 | Team Udayavani |

ಹೊಸದಿಲ್ಲಿ: ಸದನದ ವಿಶೇಷ ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಕರ್ ಅವರು ಭಾನುವಾರ ಹೊಸ ಸಂಸತ್ತಿನ ಕಟ್ಟಡದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದರು.

Advertisement

ಸೋಮವಾರದಿಂದ ಪ್ರಾರಂಭವಾಗುವ ಐದು ದಿನಗಳ ಸಂಸತ್ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಧ್ವಜಾರೋಹಣ ಸಮಾರಂಭವು ನಡೆಯಿತು. ವಿಶೇಷ ಅಧಿವೇಶನದಲ್ಲಿ ಸಂಸತ್ತಿನ ಕಲಾಪಗಳನ್ನು ಹಳೆಯದರಿಂದ ಹೊಸ ಸಂಸತ್ತಿನ ಕಟ್ಟಡಕ್ಕೆ ಬದಲಾಯಿಸಬಹುದು.

ಮೇ 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಹೊಸ ಸಂಸತ್ತಿನ ಕಟ್ಟಡದ “ಗಜ ದ್ವಾರ”ದ ಮೇಲೆ ಜಗದೀಪ್ ಧನ್ ಕರ್ ಧ್ವಜಾರೋಹಣ ಮಾಡಿದರು. ಹೊಸ ರಚನೆಯು ಹಳೆಯ ಸಂಸತ್ತಿನ ಕಟ್ಟಡದ ಪಕ್ಕದಲ್ಲಿದೆ.

ಇದನ್ನೂ ಓದಿ:Asia Cup 2023; ಪಾಕ್ ಡ್ರೆಸ್ಸಿಂಗ್ ರೂಂನಲ್ಲಿ ಜಗಳ; ಬಾಬರ್- ಶಹೀನ್ ನಡುವೆ ವಾಕ್ಸಮರ

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರಾದ ವಿ ಮುರಳೀಧರನ್, ಪಿಯೂಷ್ ಗೋಯಲ್, ಅರ್ಜುನ್ ರಾಮ್ ಮೇಘವಾಲ್, ಕಾಂಗ್ರೆಸ್ ಸಂಸದರಾದ ಅಧೀರ್ ರಂಜನ್ ಚೌಧರಿ ಮತ್ತು ಪ್ರಮೋದ್ ತಿವಾರಿ ಇತರರು ನೂತನ ಸಂಸತ್ ಭವನದಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

ಧ್ವಜಾರೋಹಣ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಮೇಲ್ಮನೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗಿದ್ದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಗಾಗಿ ಅವರು ಹೈದರಾಬಾದ್‌ ನಲ್ಲಿದ್ದಾರೆ. ತಡವಾಗಿ ಆಹ್ವಾನ ನೀಡಿದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next