ನವದೆಹಲಿ: ಅಕ್ರಮ ಧಾರ್ಮಿಕ ಮತಾಂತರ ತಡೆಗಟ್ಟಲು ಕೇಂದ್ರ ಸರ್ಕಾರ ಕೂಡಲೇ ಹೊಸ ಕಾನೂನು ಜಾರಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಒತ್ತಾಯಿಸಿದೆ.
ಕಪಟ ನಾಟಕವಾಡಿ, ಆಮಿಷವೊಡ್ಡಿ, ಒತ್ತಾಯಪುರ್ವಕವಾಗಿ ಮತಾಂತರ ಮಾಡುವ ಘಟನೆಗಳನ್ನು ತಡೆಯದೇ ಇದ್ದರೆ, ಅದು ದೇಶದ ಭದ್ರತೆಗೆ ಅಪಾಯ ತಂದೊಡ್ಡಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದ ಬೆನ್ನಲ್ಲೇ ವಿಎಚ್‌ಪಿ ಈ ಬಗ್ಗೆ ಪ್ರತಿಕ್ರಿಯಿಸಿದೆ.
“ಈ ವಿಷಯದ ಕುರಿತು ಇದುವರೆಗೂ ರಚಿಸಲಾದ ವಿವಿಧ ಆಯೋಗಗಳು ಮತ್ತು ವಿವಿಧ ಘಟನೆಗಳು, ಅಕ್ರಮ ಮತಾಂತರವು ಧಾರ್ಮಿಕ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂಬುದನ್ನು ನಿರೂಪಿಸಿದೆ.
ಅಕ್ರಮ ಮತಾಂತರದಿಂದ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾನೂನು ಜಾರಿಗೊಳಿಸಬೇಕಿರುವುದು ಈಗಿನ ಅಗತ್ಯವಾಗಿದೆ,’ ಎಂದು ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಪ್ರತಿಪಾದಿಸಿದರು.