Advertisement

VHP; ಸರಕಾರದ ಹಿಡಿತದಿಂದ ದೇಗುಲಗಳ ಮುಕ್ತಿಗೆ  ಆಂದೋಲನ

12:15 AM Jan 07, 2025 | Team Udayavani |

ಅಮರಾವತಿ: ಸರಕಾರದ ಒಡೆತನದಿಂದ ದೇಗುಲಗಳನ್ನು ಮುಕ್ತಗೊಳಿಸಿ, ದೇವಾಲಯದ ಆಡಳಿತವನ್ನು ಭಕ್ತರ ಕೈಗೆ ಒಪ್ಪಿಸಬೇಕೆಂದು ಆಗ್ರಹಿಸಿ ಆಂಧ್ರಪ್ರದೇಶದಲ್ಲಿ ವಿಎಚ್‌ಪಿ ಬೃಹತ್‌ ಆಂದೋಲನ ಆರಂಭಿಸಿದೆ. 150 ಮಂದಿ ಸನ್ಯಾಸಿಗಳು, ಸಂತರು ಸೇರಿದಂತೆ ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದ್ದಾರೆ. ಅದಕ್ಕೆ “ಹೈಂದವ ಶ‌ಂಖಾರವಂ’ ಹೆಸರು ನೀಡಿದೆ. ದೇಗುಲಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಹೋರಾಟ ನಡೆಸಲಾಗುತ್ತದೆ ಎಂದು ವಿಎಚ್‌ಪಿ ಅಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿ ದ್ದಾರೆ. ದೇಗುಲಗಳನ್ನು ತೆರಿಗೆ ಮೂಲಗಳ ರೀತಿ ಬಳಸಿ ಕೊಳ್ಳಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ದೇಗುಲಗಳನ್ನು ಸ್ವಾಯತ್ತಗೊಳಿಸಬೇಕು ಈ ನಿಟ್ಟಿನಲ್ಲಿ ಅಗತ್ಯ ಕಾಯ್ದೆಗೆ ತಿದ್ದುಪಡಿ ತರಬೇಕು. ದೇಗುಲ ಭೂಮಿ ಕಬಳಿಕೆಗೆ ತಡೆ ತರಬೇಕು ಎಂದು ಆಗ್ರಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next