Advertisement

ಜಾಧವ್‌ ತಾಯಿ,ಪತ್ನಿಗೆ ಅವಮಾನ; ಪಾಕ್‌ ಧ್ವಜ ಸುಟ್ಟು ಪ್ರತಿಭಟನೆ 

01:41 PM Dec 29, 2017 | |

ಮಂಗಳೂರು: ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿ  ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ ಅವರ ಪತ್ನಿ ಮತ್ತು ತಾಯಿಗೆ ಮಾಡಿದ ಅವಮಾನವನ್ನು ಖಂಡಿಸಿ ವಿಶ್ವಹಿಂದೂ ಪರಿಷದ್ ಮತ್ತು  ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಕದ್ರಿ ಮಲ್ಲಿಕಟ್ಟೆ ವೃತದ ಬಳಿ ಪಾಕಿಸ್ತಾನದ ದ್ವಜವನ್ನು ಸುಟ್ಟು ಪ್ರತಿಭಟನೆ ನಡೆಸಿದರು. 

Advertisement

 ಜಾಧವ್  ಅವರನ್ನು ಭೇಟಿ ಮಾಡಲು ತೆರಳಿದ್ದ ಪತ್ನಿ ಹಾಗೂ ತಾಯಿಯ ಮಂಗಳ ಸೂತ್ರ, ಸಿಂಧೂರ ಹಾಗೂ ಕೈಬಳೆಗಳನ್ನು ತೆಗದು ಹಾಕುವಂತೆ ಮಾಡಿ , ಚಪ್ಪಲಿಗಳನ್ನು ಬದಲಾಯಿಸಿ ಹೀನಾಯವಾಗಿ ನಡೆದುಕೊಂಡಿತ್ತು. 

ಜಾಧವ್ ತಾಯಿ ಹಾಗೂ ಪತ್ನಿಗೆ ಹಿಂಸಾತ್ಮಕ ಅವಮಾನ ಮಾಡಿದ ಪಾಪಿ ಪಾಕಿಸ್ತಾನಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು. 

Advertisement

Udayavani is now on Telegram. Click here to join our channel and stay updated with the latest news.

Next