Advertisement

Kollywood: ಪೋಷಕ ನಟನ ಕಾರು ಢಿಕ್ಕಿ; ಸಹಾಯಕ ನಿರ್ದೇಶಕ ಸ್ಥಳದಲ್ಲೇ ಮೃತ್ಯು

10:07 AM Jun 09, 2023 | Team Udayavani |

ಚೆನ್ನೈ: ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶರಣ್‌ ರಾಜ್‌ (26) ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಗುರುವಾರ (ಜೂ.8 ರಂದು) ರಾತ್ರಿ 11:30 ರ ಹೊತ್ತಿಗೆ ಕೆ.ಕೆ. ನಗರ್‌ ನಲ್ಲಿ ತನ್ನ ಬೈಕ್‌ ನಲ್ಲಿ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಅವರ ಬೈಕ್‌ ಗೆ ಢಿಕ್ಕಿ ಹೊಡಿದಿದೆ. ಪರಿಣಾಮ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಶರಣ್‌ ರಾಜ್‌ ಸ್ಥಳದಲ್ಲೇ ಪ್ರಾಣ ತೆತ್ತಿದ್ದಾರೆ.

ಇದನ್ನೂ ಓದಿ: Hyderabad: ನೇಣು ಬಿಗಿದು ಮಗಳು ಆತ್ಮಹತ್ಯೆ; ವಾಮಾಚಾರವೇ ಘಟನೆಗೆ ಕಾರಣವೆಂದ ಪೋಷಕರು 

ಸ್ಥಳೀಯರು ಕೂಡಲೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಲಿವುಡ್‌ ನಲ್ಲಿ ಸಹನಟನಾಗಿ ಗುರುತಿಸಿಕೊಂಡಿರುವ ಪಳನಿಯಪ್ಪನ್ ಅವರ ಕಾರು ಅಪಘಾತವನ್ನು ಎಸೆಗಿದೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪಳನಿಯಪ್ಪನ್ ಅವರನ್ನು ಬಂಧಿಸಲಾಗಿದೆ.

ಭಾರತೀಯ ಸಿನಿಮಾರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾಗಳಾದ ʼ ವಡಾ ಚೆನ್ನೈʼ ಹಾಗೂ ʼಅಸುರನ್‌ʼ ಸಿನಿಮಾದಲ್ಲಿ ಶರಣ್‌ ರಾಜ್‌ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ʼಅಸುರನ್‌ʼ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲೂ ಅವರು ನಟಿಸಿದ್ದಾರೆ.

Advertisement

ಶರಣ್‌ ರಾಜ್‌ ಅವರ ಹಠಾತ್‌ ನಿಧನಕ್ಕೆ ಕಾಲಿವುಡ್‌ ಕಂಬನಿ ಮಿಡಿದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next