Advertisement

ಪಶು ವೈದ್ಯರು ಶೀಘ್ರ ಮರಳಿ ಮಾತೃ ಇಲಾಖೆಗೆ

07:05 AM Jun 28, 2018 | Team Udayavani |

ರಾಯಚೂರು: ಪಶು ಇಲಾಖೆಯಿಂದ ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡ ಎಲ್ಲ ವೈದ್ಯರನ್ನು ಮರಳಿ ಮಾತೃ ಇಲಾಖೆಗೆ ಕರೆತರಲಾಗುವುದು. ಅದರ ಜತೆಗೆ 500 ಪಶು ವೈದ್ಯರ ನೇಮಕಕ್ಕೆ ಶೀಘ್ರವೇ ಅಧಿಸೂಚನೆ
ಹೊರಡಿಸಲಾಗುವುದು ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ
ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾತೃ ಇಲಾಖೆಗೆ ಬರಲು ಒಪ್ಪದ ವೈದ್ಯರ ವಿರುದಟಛಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಹೈ-ಕ ಭಾಗದಲ್ಲಿ 120 ಹುದ್ದೆಗಳಲ್ಲಿ 60 ವೈದ್ಯರು ಮಾತ್ರ ಇದ್ದಾರೆ. ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯಲ್ಲಿಯೇ ಹೆಚ್ಚು ಹುದ್ದೆಗಳ ಕೊರತೆ ಇದೆ ಎಂದರು.

ರೈತರ ಸಾಲಮನ್ನಾದಂತಹ ಮಹತ್ತರ ಸಮಸ್ಯೆ ಸರ್ಕಾರದೆದುರು ಇರುವ ಕಾರಣ ಹೊಸ ಉತ್ಸವಗಳ ಆಚರಣೆಗೆ ಮುಂದಾಗುವ ಸಾಧ್ಯತೆ ಕಡಿಮೆ. ಅದರ ಬದಲು ಮುಂಗಾರು ಸಾಂಸ್ಕೃತಿಕ ಹಬ್ಬವನ್ನೇ ಸರ್ಕಾರದಿಂದ ಆಚರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಕುರಿತು ಸಿಎಂ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈಗಿರುವ ಗೋಶಾಲೆಗಳನ್ನೇ ಬಲಪಡಿಸುವ ಮೂಲಕ ನಿರುಪಯುಕ್ತ ಜಾನುವಾರುಗಳನ್ನು ಅಲ್ಲಿ ಬಿಡುವ ವ್ಯವಸ್ಥೆ ಮಾಡಲಾಗುವುದು.
– ವೆಂಕಟರಾವ್‌ ನಾಡಗೌಡ, ಪಶು ಸಂಗೋಪನಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next