Advertisement

ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನೂ ಸುಟ್ಟಾಕಿ: ಆರೋಪಿಯ ತಾಯಿಯ ಆಕ್ರೋಶ

09:56 AM Dec 02, 2019 | Mithun PG |

ಹೈದರಬಾದ್: ಅತ್ಯಾಚಾರಿಗಳನ್ನು ನಮಗೊಪ್ಪಿಸಿ, ಅವರಿಗೇನು ಶಿಕ್ಷೆ ಕೊಡಬೇಕೋ ನಾವೇ ಕೊಡುತ್ತೇವೆ ಎನ್ನುವ ಮಾತುಗಳು ದೇಶಾದ್ಯಂತ ಪ್ರತಿಧ್ವನಿಸುತ್ತಿದ್ದರೆ, ಮತ್ತೊಂದೆಡೆ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯ ತಾಯಿಯೊಬ್ಬರು ನೀಡಿದ ಹೇಳಿಕೆ ಭಾರೀ ವೈರಲ್ ಆಗಿದೆ.

Advertisement

ಹೌದು. ತೆಲಂಗಾಣದಲ್ಲಿ ನಡೆದ ಭೀಕರ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದ ಆರೋಪಿಯ ತಾಯಿಯೋರ್ವರು “ಸಂತ್ರಸ್ತೆಯನ್ನು ಅವರು ಹೇಗೆ ಬೆಂಕಿ ಇಟ್ಟು ಸುಟ್ಟರೋ ಹಾಗೇ ಅವರನ್ನೂ ಸುಟ್ಟು ಹಾಕಿ. ಅವರಿಗೆ ಗಲ್ಲು ಶಿಕ್ಷೆ ನೀಡಿದರೂ ನಾವು ಅದನ್ನು ವಿರೋಧಿಸುವುದಿಲ್ದ ಎಂದಿದ್ದಾರೆ.

ಗಲ್ಲು ಶಿಕ್ಷೆ ಅಥವಾ ಸುಟ್ಟು ಬಿಡಿ

ಸಾಮೂಹಿಕ ಅತ್ಯಾಚಾರದ ಪ್ರಕರಣ ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದ್ದು, ಸಂತ್ರಸ್ಥೆಗೆ ನ್ಯಾಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಕೇಶವುಲ್ ಎಂಬಾತನ ತಾಯಿ ಮಾತನಾಡುತ್ತಾ “ಆತನಿಗೆ ಗಲ್ಲು ಶಿಕ್ಷೆ ನೀಡಿ, ಇಲ್ಲವೇ ಸುಟ್ಟು ಬಿಡಿ, ಅವರೆಲ್ಲಾ ಆ ವೈದ್ಯೆಯನ್ನು ಅತ್ಯಾಚಾರ ಮಾಡಿದ ಬಳಿಕ ಏನು ಮಾಡಿದರೋ ಹಾಗೆ ಅವರಿಗೂ ಶಿಕ್ಷೆ ನೀಡಿ ಎಂದಿದ್ದಾರೆ.

ಹೆಣ್ಣು ಹೆತ್ತ ಆ ವೈದ್ಯೆಯ ಕುಟುಂಬದ ನೋವು ಏನೆಂಬುದು ನನಗೆ ತಿಳಿದಿದೆ. ನನಗೂ ಒಬ್ಬಳು ಮಗಳಿದ್ದಾಳೆ. ಮಗಳಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿದಾಗ ಆಗುವ ನೋವು ಏನೆಂಬುದು ನನಗೆ ಅರ್ಥವಾಗುತ್ತದೆ. ನನ್ನ ಮಗ ಮಾಡಿದ ಘೋರ ಪಾಪ ತಿಳಿದ ಬಳಿಕವೂ ಆತನನ್ನು ರಕ್ಷಿಸಲು ನಿಂತರೆ, ಜನರು ನನ್ನನ್ನು ಜೀವಮಾನವಿಡಿ ದ್ವೇಷಿಸುತ್ತಾರೆ ಎಂದಿದ್ದಾರೆ.

Advertisement

ಆರೋಪಿಗಳ ವೈದ್ಯಕೀಯ ಪರೀಕ್ಷೆ ಆದ ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next