Advertisement

ಜಪ್ಪುವಿನ “ಪಶು ಚಿಕಿತ್ಸಾಲಯ’ಸ್ಥಳಾಂತರಕ್ಕೆ ವ್ಯಾಪಕ ವಿರೋಧ

05:38 PM Jan 08, 2022 | Team Udayavani |

ಜಪ್ಪು: ನಗರದ ಸುಮಾರು 30 ವಾರ್ಡ್‌ ಹಾಗೂ ನೀರುಮಾರ್ಗ ಒಳ ಗೊಂಡ ಗ್ರಾಮಾಂತರ ಭಾಗದ ದನ, ಕರು ಸಹಿತ ಪ್ರಾಣಿಗಳ ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ಉಪಚಾರ ನಡೆಸುವ ಜಪ್ಪು ಮಾರ್ಕೆಟ್‌ ಸಮೀಪದ ಪಶು ಚಿಕಿತ್ಸಾ ಲಯವನ್ನು ಅಭಿವೃದ್ಧಿ ನೆಪದಿಂದ ಸ್ಥಳಾಂತರಿ ಸಲು ಸಿದ್ಧತೆ ನಡೆಯುತ್ತಿದ್ದು, ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಸುಮಾರು 70 ವರ್ಷಕ್ಕೂ ಮುನ್ನ ಸ್ಥಾಪನೆಯಾದ ಪಶು ಪಾಲನ ಮತ್ತು ಪಶುವೈದ್ಯ ಕೀಯ ಸೇವಾ ಇಲಾಖೆಯ ಪಶು ಚಿಕಿತ್ಸಾಲಯವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಸ್ಥಳೀಯಾಡಳಿಕ್ಕೆ ಮನವಿ ಸಲ್ಲಿಸಲಾಗಿದೆ.

ಮಂಗಳಾದೇವಿ ಬಸ್‌ನಿಲ್ದಾಣವನ್ನು ಸುಸಜ್ಜಿತವಾಗಿ ನಿರ್ಮಿಸಲು ಪಾಲಿಕೆ ಉದ್ದೇಶಿಸಿದ್ದು, ಇದಕ್ಕಾಗಿ ಪಶು ಚಿಕಿತ್ಸಾಲಯ ಇರುವ ವ್ಯಾಪ್ತಿಯ ಪ್ರದೇ ಶವನ್ನು ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಪಶು ಚಿಕಿತ್ಸಾಲಯ ಸ್ಥಳಾಂತರ ಆಗಬೇಕಾಗ ಬಹುದು ಎನ್ನಲಾಗಿದೆ. ಹಲವು ವರ್ಷಗಳಿಂದ ಈ ವ್ಯಾಪ್ತಿಯ ನಿವಾಸಿಗಳು ಹೈನುಗಾರಿಕೆ ವೃತ್ತಿ ನಡೆಸುತ್ತಾ ಬಂದಿದ್ದಾರೆ. ಇಲ್ಲಿನ ನಿವಾಸಿಗಳಲ್ಲಿ ವಿವಿಧ ಉತ್ತಮ ತಳಿಯ ದನಕರುಗಳಿದ್ದು, ಅವುಗಳ ಚಿಕಿತ್ಸಾ ಕಾರ್ಯಕ್ರಮಗಳಿಗೆ ಜಪ್ಪುವಿನ ಗೋ ಆಸ್ಪತ್ರೆಯನ್ನೇ ಅವಲಂಬಿಸಲಾಗಿದೆ. ಇತರ ಪ್ರಾಣಿಗಳ ಆರೋಗ್ಯ ಸಮಸ್ಯೆಗಳಿಗೂ ಜಪ್ಪು ಗೋ ಆಸ್ಪತ್ರೆಯ ವೈದ್ಯರೇ ಉಪಚಾರ ಮಾಡುತ್ತಾರೆ. ಕೇವಲ ಜಪ್ಪು ಪರಿಸರ ಮಾತ್ರವಲ್ಲದೆ ಜಪ್ಪಿನಮೊಗೆರುವಿನಿಂದ ನೀರುಮಾರ್ಗದ ನಿವಾಸಿಗಳು ಕೂಡ ತಮ್ಮ ಜಾನುವಾರುಗಳಿಗೆ ಜಪ್ಪುವಿನ ಗೋ ಆಸ್ಪತ್ರೆಯನ್ನು ಅವಲಂಬಿಸಿರುತ್ತಾರೆ.

ಜಪ್ಪುವಿನ ಗೋ ಆಸ್ಪತ್ರೆಯನ್ನು ಸ್ಥಳಾಂತರಿ ಸುವುದಾಗಿ ಇತರ ಮೂಲಗಳಿಂದ ನಮಗೆ ತಿಳಿದುಬಂದಿದೆ. ಗೋ ಆಸ್ಪತ್ರೆಯನ್ನು ಸ್ಥಳಾಂತರಿಸಿದರೆ ನಮ್ಮ ಪರಿಸರದ ಎಲ್ಲ ಪ್ರಾಣಿಗಳ ಚಿಕಿತ್ಸೆಗೆ ತೊಂದರೆ ಆಗುತ್ತಿದೆ. ಆದ್ದರಿಂದ ಜಪ್ಪು ಗೋ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಪಾಲಿಕೆ ಆಡಳಿತದಾರರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮೂಲಸೌಲಭ್ಯ ಒದಗಿಸಿ
“ನಗರದಲ್ಲಿ ಜನಸಂಖ್ಯೆ ಅಧಿಕವಾಗು ವಂತೆಯೇ ಸ್ಥಳೀಯ ಜನರಿಗೆ ಬೇಕಾದ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸ್ಥಳೀಯಾಡಳಿತಗಳು ಕ್ರಮ ಕೈಗೊಳ್ಳಬೇಕು. ಆದರೆ, ಸುದೀರ್ಘ‌ ಸಮಯದಿಂದ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ಅಭಿವೃದ್ಧಿಯ ನೆಪದಿಂದ ರದ್ದುಪಡಿಸುವ ತೀರ್ಮಾನಗಳು ಸೂಕ್ತವಲ್ಲ. ಬದಲಾಗಿ, ಅಭಿವೃದ್ಧಿಗೊಳ್ಳುವಾಗ ಈಗ ಇರುವ ಸೇವೆಯನ್ನು ಕೂಡ ಮುಂದುವರಿಸುವ ಕಾರ್ಯ ನಡೆಯಬೇಕು’ ಎನ್ನುತ್ತಾರೆ ಸ್ಥಳೀಯ ಹೋರಾಟಗಾರರಾದ ನೇಮು ಕೊಟ್ಟಾರಿ.

Advertisement

ಗೋ ಆಸ್ಪತ್ರೆ ಸ್ಥಳಾಂತರ ಬೇಡ
ಬಹು ಉಪಯೋಗಿ ಹಾಗೂ ಹಲವು ವರ್ಷಗಳಿಂದ ಯಶಸ್ವಿ ಸೇವೆ ನೀಡುತ್ತಿರುವ ಜಪ್ಪುವಿನ ಗೋ ಆಸ್ಪತ್ರೆಯನ್ನು ಇಲ್ಲಿಂದ ಸ್ಥಳಾಂತರಿಸಿ ದರೆ ಪರಿಸರದ ಎಲ್ಲ ಪ್ರಾಣಿಗಳ ಚಿಕಿತ್ಸೆಗೆ ತೊಂದರೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಗೋ ಆಸ್ಪತ್ರೆ ಸ್ಥಳಾಂತರಿಸಬಾರದು. .
– ಭಾಗೀರಥಿ,
ಸ್ಥಳೀಯ ನಿವಾಸಿ, ಗುಜ್ಜರೆಕೆರೆ, ಜಪ್ಪು

 

Advertisement

Udayavani is now on Telegram. Click here to join our channel and stay updated with the latest news.

Next