Advertisement

ಮೈಷುಗರ್‌ ಹೋರಾಟಕ್ಕೆ ಹಿರಿಯರ ಕಡೆಗಣನೆ?

04:57 PM Sep 25, 2021 | Team Udayavani |

ಮಂಡ್ಯ: ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಹುಟ್ಟಿಕೊಂಡ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಾವಿಕನಿಲ್ಲದ ದೋಣಿಯಂತಾಗಿದ್ದು, ಕಾವೇರಿ ಹೋರಾಟದ 1992ರಲ್ಲಿ ಜಿ.ಮಾದೇಗೌಡರು ಹುಟ್ಟು ಹಾಕಿದ್ದ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆಯ ಪರಿಷ್ಕರಣೆಯಾಗದಿರುವುದು ನಾಯಕರಲ್ಲಿನ ಹಿತಾಸಕ್ತಿಯ ಕೊರತೆ ಎದ್ದು ಕಾಣುತ್ತಿದೆ.

Advertisement

ಜಿಲ್ಲೆಗೆ ಕಾವೇರಿ ನೀರೇ ಆಸರೆಯಾಗಿದೆ. ನೀರಿನ ಹಂಚಿಕೆ ಸಂಬಂಧ ಜಿಲ್ಲೆಯ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ರೈತ ಹಿತರಕ್ಷಣಾ ಸಮಿತಿ ಮುಂದಾಳತ್ವ ವಹಿಸುತ್ತಿತ್ತು. ಎಲ್ಲ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು, ಹೋರಾಟಗಾರರನ್ನು ಒಳಗೊಂಡಂತೆ ಸಮಿತಿ ಚಳವಳಿ ನಡೆಸಲಾಗುತ್ತಿತ್ತು. ಇದರಿಂದ ಪ್ರತಿಭಟ ನೆಗಳು ತಾರ್ಕಿಕ ಅಂತ್ಯ ಕಾಣುತ್ತಿದ್ದವು. ಆದರೆ ಪ್ರಸ್ತುತ ನಾಯಕತ್ವ ಇಲ್ಲದಂತಾಗಿದೆ. ಪ್ರಸ್ತುತ ನಡೆಯುತ್ತಿರುವ ಮೈಷುಗರ್‌ ಹೋರಾಟದಲ್ಲೂ ಹಿರಿಯರ ಕಡೆಗಣನೆ ಆರೋಪ ಕೇಳಿ ಬಂದಿದೆ.

ನಡೆಯದ ನೂತನ ಪದಾಧಿಕಾರಿಗಳ ಆಯ್ಕೆ:ಅಧ್ಯಕ್ಷರಾಗಿದ್ದ ಜಿ.ಮಾದೇ ಗೌಡ, ಉಪಾಧ್ಯಕ್ಷರಾಗಿದ್ದ ಕೆ.ಎಸ್‌.ಪುಟ್ಟಣ್ಣಯ್ಯ, ಕೆ.ಎಸ್‌.ಸಚ್ಚಿದಾನಂದ, ಡಿ. ರಾಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಟಿ.ಶ್ರೀನಿವಾಸಗೌಡ, ಸಂಘಟನಾ ಕಾರ್ಯದರ್ಶಿ ಟಿ.ಎಲ್‌.ಪುರುಷೋತ್ತಮ, ಚೌಡೇಗೌಡ, ಕಾನೂನು ಸಲಹಾ ಸಮಿತಿ ವಕೀಲರಾದ ಎಚ್‌.ಹನುಮೇಗೌಡ, ಕೆ.ಸಿ.ಶಂಕರೇಗೌಡ, ಎಂ.ಜಿ.ರಾಜು ನಿಧನರಾಗಿದ್ದಾರೆ. ಆದ್ದರಿಂದ ಸಮಿತಿಗೆ ತುರ್ತಾಗಿ ಪದಾಧಿಕಾರಿಗಳ ಆಯ್ಕೆ ಮಾಡಬೇಕಾಗಿದೆ. ಆದರೆ ಹಿತಾಸಕ್ತಿ ಕೊರತೆಯಿಂದ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ:ವೀಕ್ಷಿಸಿ… ಪ್ರಥ್ವಿರಾಜ್ ಸುಕುಮಾರನ್ ನಟನೆಯ ಬ್ರಹ್ಮಂ ಸಿನಿಮಾ ಟೀಸರ್ ಬಿಡುಗಡೆ

ಭಾಗವಹಿಸದ ಹಿರಿಯ ಪದಾಧಿಕಾರಿಗಳು: ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿಯೇ ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಬೇಕು ಎಂಬ ನಿಟ್ಟಿನಲ್ಲಿ ನಿರಂತರ ಧರಣಿ ನಡೆಯುತ್ತಿದೆ. ಆದರೆ ಸಮಿತಿಯಲ್ಲಿ ಹಿರಿಯ ಪದಾಧಿಕಾರಿಗಳಾದ ಉಪಾಧ್ಯಕ್ಷರಾಗಿರುವ ಎಂ. ಎಸ್‌.ಆತ್ಮಾನಂದ, ಖಜಾಂಚಿ ಡಾ.ಎಚ್‌.ಡಿ.ಚೌಡಯ್ಯ, ಸಂಘಟನಾ ಕಾರ್ಯದರ್ಶಿ ಕೆ.ಎಸ್‌.ನಂಜುಂಡೇಗೌಡ ಸೇರಿದಂತೆ ಮತ್ತಿತರರು ಭಾಗವ ಹಿಸಿಲ್ಲ. ಹಿತರಕ್ಷಣಾ ಸಮಿತಿ ಕಾವೇರಿ ಹೋರಾಟಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಮೈಷುಗರ್‌ ಹೋರಾಟಕ್ಕಾಗಿ ಸಮಿತಿ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಒಗ್ಗಟ್ಟು ಮಾಯ: ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಮೈಷುಗರ್‌ ಕಾರ್ಖಾನೆ ಉಳಿಸಲು ಹೋರಾಟ ನಡೆಸುತ್ತಿವೆ. ಆದರೆ ಸಮಿತಿಯ ಪದಾ ಧಿಕಾರಿಗಳು ಮಾತ್ರ ಇನ್ನೂ ಒಗ್ಗೂಡಿಲ್ಲ. ಮೈಷುಗರ್‌ ಹೋರಾಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಲ್ಲಿ ಬಣಗಳಾಗಿದ್ದವು. ಒಂದು ಬಣ ಒ ಅಂಡ್‌ ಎಂ ಪರವಾಗಿ ಪ್ರತಿಭಟನೆ ನಡೆಸಿದರೆ, ಮತ್ತೂಂದು ಬಣ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಹೋರಾಟ ನಡೆಸಿದ್ದವು. ಈಗ ಎಲ್ಲರ ಉದ್ದೇಶ ಒಂದೇ ಆದರೂ ಪದಾ ಧಿಕಾರಿಗಳಲ್ಲಿ ಒಗ್ಗಟ್ಟು ಮಾಯವಾಗಿದೆ.

ಮೈಷುಗರ್‌ ಹೋರಾಟಕ್ಕೆ ಕರೆದಿಲ್ಲ
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಕಾವೇರಿ ನೀರಿನ ಹೋರಾಟಕ್ಕೆ ಜಿ.ಮಾದೇಗೌಡರ ನೇತೃತ್ವದಲ್ಲಿ ಮುಂದಾಳತ್ವ ವಹಿಸಿತ್ತು. ಹೋರಾಟಕ್ಕೂ ಮುನ್ನ ಪದಾಧಿ ಕಾರಿಗಳು, ಸದಸ್ಯರನ್ನು ಕರೆದು ಚರ್ಚಿಸಿ ಹೋರಾಟದ ರೂಪುರೇಷೆಯೊಂದಿಗೆ ಚಳವಳಿ ನಡೆಸಲಾಗುತ್ತಿತ್ತು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಎಂ.ಎಸ್‌.ಆತ್ಮಾನಂದ ತಿಳಿಸಿದರು. ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಇದೇ ಮೊದಲ ಬಾರಿಗೆ ಸಮಿತಿಯ ಬ್ಯಾನರ್‌ನಡಿಯಲ್ಲಿ ಮೈಷುಗರ್‌ ಹೋರಾಟ ನಡೆಸಲಾಗುತ್ತಿದೆ. ಮೈಷುಗರ್‌ ಹೋರಾಟ ಸಂಬಂಧ ನಡೆದ ಸಭೆಗೆ ಒಂದು ಬಾರಿಯೂ ನಮ್ಮನ್ನು ಕರೆದಿಲ್ಲ. ಮೈಷುಗರ್‌ ವಿಚಾರದಲ್ಲಿ ನಾಯಕರನ್ನು ಭೇಟಿ ಮಾಡುವ ಸಂದರ್ಭದಲ್ಲೂ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ಇಲ್ಲಿ ಸಂಘಟನೆ, ಒಗ್ಗಟ್ಟು ಮುಖ್ಯವಾಗಿದೆ.

ಪ್ರತ್ಯೇಕ ಪ್ರತಿಭಟನೆ
ರೈತ ನಾಯಕ ದಿ.ಕೆ.ಎಸ್‌.ಪುಟ್ಟಣ್ಣಯ್ಯ ನೇತೃತ್ವದ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ ಅವರ ರೈತಸಂಘದ ಬಣ ಮೈಷುಗರ್‌ ಕಾರ್ಖಾನೆ ಆರಂಭಿಸುವಂತೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದೆ. ಕೆ.ಎಸ್‌. ಪುಟ್ಟಣ್ಣಯ್ಯ ಇದ್ದಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯೊಂ ದಿಗೆ ಹೋರಾಟಕ್ಕಿಳಿಯಲಾಗುತ್ತಿತ್ತು. ಆದರೆ ಮೈಷುಗರ್‌ ವಿಚಾರದಲ್ಲಿ ದೂರವೇ ಉಳಿದಿದೆ. ಮೈಷುಗರ್‌ ಕಾರ್ಖಾನೆ ವಿಚಾರದಲ್ಲಿ ನಡೆಯು ತ್ತಿದ್ದ ಸಮಿತಿ ಸಭೆಗೆ ಪರಿಗಣಿಸದೆ ಇರುವುದು ಪ್ರತ್ಯೇಕವಾಗಲು ಕಾರಣವಾಗಿದೆ.

12ನೇ ದಿನಕ್ಕೆ ಕಾಲಿಟ್ಟ ಮೈಷುಗರ್‌ ಹೋರಾಟ
ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸುವಂತೆ ಒತ್ತಾಯಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟ ಶುಕ್ರವಾರಕ್ಕೆ 12ನೇ ದಿನಕ್ಕೆ ಕಾಲಿರಿಸಿದೆ. ಶುಕ್ರವಾರ ಜನಪರ ಟ್ರಸ್ಟ್‌ ಹಾಗೂ ಜನಪರ ಲಯನ್ಸ್‌ ಸಂಸ್ಥೆಗಳ ಪದಾ ಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಬೆಂಬಲ ಸೂಚಿಸಿದರು. ಯಾವುದೇ ಕಾರಣಕ್ಕೂ ಮೈಷುಗರ್‌ ಖಾಸಗಿ ಯವರ ಪಾಲಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತನಾಯಕಿ ಸುನಂದಜಯರಾಂ, ಜನಪರ ಟ್ರಸ್ಟ್‌ನ ರತ್ನಮ್ಮ, ಸಿಐಟಿಯುನ ಸಿ.ಕುಮಾರಿ, ಸಾಹಿತ್ಯ ಪರಿಷತ್ತಿನ ಚುನಾವಣೆಯ ರಾಮೇಗೌಡ, ಕನ್ನಡ ಸೇನೆ ಮಂಜುನಾಥ್‌, ನಗರಸಭೆ ಮಾಜಿ ಸದಸ್ಯೆ ಅಂಬುಜಮ್ಮ, ಆಂಜನಪ್ಪ, ಕೆ.ಬೋರಯ್ಯ ಸೇರಿದಂತೆ ಮತ್ತಿತರರಿದ್ದರು.

ಸಮಸ್ಯೆ ಬಂದಾಗ ಜಿ. ಮಾದೇಗೌಡರು ಪಕ್ಷಭೇದ ಮರೆತು ಎಲ್ಲರನ್ನು ಕರೆದು ತೀರ್ಮಾನ ಕೈಗೊಳ್ಳಲಾಗುತ್ತಿತ್ತು. ಸಾಮೂಹಿಕವಾಗಿ ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗಲಾಗುತ್ತಿತ್ತು. ಈಗ ನೇತೃತ್ವ ವಹಿಸಿಕೊಂಡು ಧರಣಿ ನಡೆಸುತ್ತಿರುವವರು ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕು. ನೇತೃತ್ವ ವಹಿಸುವವರೇ ಸಭೆ ಕರೆದು ಯುವ ನಾಯಕತ್ವಕ್ಕೆ ಬೆಂಬಲ ನೀಡಲಿ.
-ಎನ್‌.ರಾಜು, ಪ್ರಧಾನ ಕಾರ್ಯದರ್ಶಿ,
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ಮೈಷುಗರ್‌ ಹೋರಾಟ ವಿಚಾ ರ ವಾಗಿ ಯಾರೂ ನಮ್ಮನ್ನು ಸಭೆಗೆ ಕರೆದಿಲ್ಲ. ಕಾವೇರಿ ವಿವಾದದ ಮಧ್ಯಂತರ ಆದೇಶ ಬಂದಾಗಿನಿಂದಲೂ ರಾಷ್ಟ್ರಮಟ್ಟದ ಗಮನ ಸೆಳೆಯುವ ಹೋರಾಟ ನಡೆದಿದೆ. ಆದರೆ ಇಂದು ಅವರವರ ಅ ಧಿಕಾರಕೊಸ್ಕರ ಹಿತರಕ್ಷಣಾ ಸಮಿತಿ ಬಳಸಿಕೊಳ್ಳಲಾಗುತ್ತಿದೆ. ಇದುವರೆಗೂ ಸಮಿತಿಯ ಸಭೆಗೆ ಕರೆದಿಲ್ಲ
-ಕೆ.ಎಸ್‌.ನಂಜುಂಡೇಗೌಡ,
ಸಂಘಟನಾ ಕಾರ್ಯದರ್ಶಿ, ಮಂಡ್ಯ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ರೈತರ ಹಿತದೃಷ್ಟಿಯಿಂದ ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕು ಎಂಬ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇವೆ. ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯೆಯಾಗಿದ್ದು, ಮೈಷುಗರ್‌ ಉಳಿಸುವುದೊಂದೆ ನಮ್ಮ ಮುಂದಿರುವ ಗುರಿ. ಸಮಿತಿಯ ಸಭೆ ಕರೆದರೆ ನಾವೂ ಸಹ ಭಾಗವಹಿಸುತ್ತೇವೆ.
– ಸುನಂದ ಜಯರಾಂ, ಸಂಘಟನಾ
ಕಾರ್ಯದರ್ಶಿ, ಮಂಡ್ಯ ಜಿಲ್ಲಾ ರೈತ
ಹಿತರಕ್ಷಣಾ ಸಮಿತಿ

ಎಲ್ಲರನ್ನು ಒಗ್ಗಟ್ಟಾಗಿ ತೆಗೆದು ಕೊಂಡು ಹೋಗುವುದು ಸೂಕ್ತ. ಹಿರಿಯ ನಾಯಕರಾದ ಎಚ್‌.ಡಿ. ಚೌಡಯ್ಯ, ಆತ್ಮಾನಂದ ಅವರು ಇದ್ದಾರೆ. ಅವರ ನಾಯಕತ್ವದಲ್ಲೇ ಸಭೆ ನಡೆಸಿ ನಿರ್ಣಯ ಕೈಗೊಳ್ಳಬಹುದಾಗಿತ್ತು. ಆದರೆ ಅದು ಆಗಿಲ್ಲ. ಜಿಲ್ಲೆಯ ಹಿತ ದೃಷ್ಟಿಯಿಂದ ನಾವು ತಟಸ್ಥರಾಗಿ ದ್ದೇವೆ. ಮುಂದಿನ ದಿನಗಳಲ್ಲಿ ಒಗ್ಗಟ್ಟಿನ ಸಭೆ ನಡೆಯಬಹುದು ಎಂಬ ನಿರೀಕ್ಷೆ ಇದೆ.
-ಬೇಕ್ರಿ ರಮೇಶ್‌,
ಜಂಟಿ ಕಾರ್ಯದರ್ಶಿ, ಮಂಡ್ಯ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next