Advertisement

ಬಹುಭಾಷಾ ಹಿರಿಯ ನಟಿ ಜಮುನಾ ನಿಧನ

10:37 AM Jan 27, 2023 | Team Udayavani |

ಹೈದರಾಬಾದ್: ಬಹುಭಾಷಾ ಹಿರಿಯ ನಟಿ ಜಮುನಾ (86) ಶುಕ್ರವಾರ (ಜ.27 ರಂದು) ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನಾ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Advertisement

ನಟಿಯ ಹಿನ್ನೆಲೆ: ಜಮುನಾ ನಟಿ ಹಾಗೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ತನ್ನ 16ನೇ ವಯಸ್ಸಿನಲ್ಲಿ ʼ ಪುಟ್ಟಿಲುʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, 1955 ರಲ್ಲಿ ರಿಲೀಸ್‌ ಆದ  ಎಲ್.ವಿ.ಪ್ರಸಾದ್ ಅವರ ʼಮಿಸ್ಸಮ್ಮʼ ಸಿನಿಮಾದಿಂದ ಹೆಚ್ಚು ಖ್ಯಾತಿಗಳಿಸಿದರು. ಕನ್ನಡ, ತಮಿಳು ಚಿತ್ರದಲ್ಲೂ ನಟಿಸಿ ಖ್ಯಾತಿಗಳಿಸಿದ್ದಾರೆ.

ಜಮುನಾ 9ನೇ ಲೋಕಸಭೆಯಲ್ಲಿ ಸಂಸದರಾಗಿದ್ದರು ಮತ್ತು ರಾಜಮಂಡ್ರಿಯನ್ನು ಪ್ರತಿನಿಧಿಸಿದ್ದರು.ʼತೆನಾಲಿ ರಾಮಕೃಷ್ಣʼ, ʼಮುದ್ದು ಬಿದ್ದʼ, ʼಗುಂಡಮ್ಮ ಕಥೆʼ, ʼರಾಮುಡು ಭೀಮುಡುʼ ಮತ್ತು ʼಪೂಲ ರಂಗಡುʼ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.ನಟಿಯ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next