ಕೇರಳ: ಮಲಯಾಳಂನ ಹಿರಿಯ ರಂಗಭೂಮಿ ಕಲಾವಿದ ಮತ್ತು ಚಲನಚಿತ್ರ ನಟ ಕೊಚ್ಚು ಪ್ರೇಮನ್ ಅವರು ಶ್ವಾಸಕೋಶದ ಕಾಯಿಲೆಯಿಂದ ಡಿಸೆಂಬರ್ 3 ರಂದು ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
1955 ರಲ್ಲಿ ತಿರುವನಂತಪುರದಲ್ಲಿ ಜನಿಸಿದ ಕೊಚ್ಚು ಪ್ರೇಮನ್, ನಾಟಕಗಳ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು ಬಳಿಕ ಮಲಯಾಳಂ ರಂಗಭೂಮಿಯ ಪ್ರಮುಖ ಭಾಗವಾಗಿ ಹೊರಹೊಮ್ಮಿದರು. ಅವರು ಮೊಹಮ್ಮದ್ ಮಣಿ ಬರೆದ ಎಝು ನಿರಂಗಲ್ (1979) ಚಿತ್ರದ ಮೂಲಕ ತಮ್ಮ ಚೊಚ್ಚಲ ಚಲನಚಿತ್ರವನ್ನು ಮಾಡಿದರು. ತಿಲಕ್ಕಂ, ಕಲ್ಯಾಣರಾಮನ್, ತೆಂಕಾಸಿಪಟ್ಟಣಂ, ಮತ್ತು ಪಟ್ಟಾಭಿಷೇಕಂ ಮುಂತಾದ ಚಲನಚಿತ್ರಗಳಲ್ಲಿನ ಹಾಸ್ಯ ಪಾತ್ರಗಳ ಮೂಲಕ ಜನರ ಮನಗೆದ್ದಿದ್ದರು.
ಕೊಚ್ಚು ಪ್ರೇಮನ್ ಟಿವಿ ಕಾರ್ಯಕ್ರಮಗಳಲ್ಲೂ ನಟಿಸಿದ್ದಾರೆ. ಸಿನಿಮಾಲಾ, ಕಲಿವೀಡು, ಮಿಸೆಸ್ ಹಿಟ್ಲರ್ ಮತ್ತು ಸ್ವಾಮಿ ಅಯ್ಯಪ್ಪನ್ ಮುಂತಾದ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ.
ಕೊಚ್ಚು ಪ್ರೇಮನ್ ನಿಧನ ಮಲಯಾಳಂ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ.
Related Articles
ಇದನ್ನೂ ಓದಿ: ಮೈನ್ಪುರಿ ಲೋಕಸಭಾ ಉಪಚುನಾವಣೆ ; ಡಿಂಪಲ್ ಯಾದವ್ ಪರ ಭರ್ಜರಿ ಪ್ರಚಾರ