ದಕ್ಷಿಣ ಚಿತ್ರರಂಗದ ನಿರ್ಮಾಪಕ ಕೆ. ಮುರಳೀಧರನ್ ಹೃದಯಾಘಾತದಿಂದ ನಿಧನರಾದರು. ಅವರು ತಮಿಳುನಾಡಿನ ಕುಂಭಕೋಣಂನಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಮುರಳೀಧರನ್ ಅವರು ತಮಿಳು ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದರು. ಅವರ ಪಾಲುದಾರರಾದ ದಿ| ವಿ. ಸ್ವಾಮಿನಾಥನ್ ಮತ್ತು ಜಿ. ವೇಣುಗೋಪಾಲ್ ರ ಸಹಯೋಗದಲ್ಲಿ ಲಕ್ಷ್ಮಿ ಮೂವೀ ಮೇಕರ್ಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದರು.
ಈ ನಿರ್ಮಾಣ ಸಂಸ್ಥೆಯ ಮೂಲಕ ಅಂಬೆ ಶಿವಂ, ಪುದುಪೆಟ್ಟೈ ಮತ್ತು ಬಾಗಾವತಿಯಂತಹ ಹಲವಾರು ಪ್ರಮುಖ ಹಿಟ್ ಚಿತ್ರಗಳನ್ನು ಮಾಡಿದರು. ಈ ನಿರ್ಮಾಣ ಸಂಸ್ಥೆ ನಿರ್ಮಿಸಿದ ಕೊನೆ ಚಿತ್ರ ಸಕಲಕಲಾ ವಲ್ಲವನ್ ನಲ್ಲಿ ಜಯಂ ರವಿ, ತ್ರಿಷಾ ಮತ್ತು ಅಂಜಲಿ ನಟಿಸಿದ್ದರು. ಇದು 2015 ರಲ್ಲಿ ಬಿಡುಗಡೆಯಾಗಿತ್ತು.