ಮುಂಬಯಿ: ಹಿರಿಯ ನಟಿ ಸುಲೋಚನಾ ಲಾಟ್ಕರ್ ಅವರು ಭಾನುವಾರ(ಜೂನ್ 4) ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಸುಲೋಚನಾ ಅವರ ಪುತ್ರಿ ಕಾಂಚನಾ ಅವರು ಸಾಯುವ ಕೆಲವೇ ಕ್ಷಣಗಳ ಮೊದಲು, ನಟಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಉಸಿರಾಟದ ತೊಂದರೆ ಮತ್ತು ಇತರ ವಯೋಸಹಜ ಕಾಯಿಲೆಗಳಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದರು. . ಶನಿವಾರ ಅವರ ಆರೋಗ್ಯವು ಹದಗೆಟ್ಟಿತ್ತು ನಿರಂತರ ಆಮ್ಲಜನಕ ಪೂರೈಕೆಯೊಂದಿಗೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.ಜೂನ್ 5 , ಸೋಮವಾರ ದಾದರ್ ಸ್ಮಶಾನದಲ್ಲಿ ನಟಿಯ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.
ಸುಲೋಚನಾ ಲಾಟ್ಕರ್ ಹಿಂದಿ ಮತ್ತು ಮರಾಠಿ ಸೇರಿದಂತೆ 300 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹೆಚ್ಚಿನ ಬಾಲಿವುಡ್ ನಟರಿಗೆ ತಾಯಿಯಾಗಿ ನಟಿಸಿದ್ದಾರೆ. ಸುಲೋಚನಾ ಅವರಿಗೆ 199 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2009 ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಷ್ಠಿತ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅಬ್ ದಿಲ್ಲಿ ದುರ್ ನಹಿನ್, ಸುಜಾತಾ, ಆಯೆ ದಿನ್ ಬಹರ್ ಕೆ, ದಿಲ್ ದೇಕೆ ದೇಖೋ, ಆಶಾ, ಮತ್ತು ಮಜ್ಬೂರ್, ನೈ ರೋಶ್ನಿ, ಆಯಿ ಮಿಲನ್ ಕಿ ಬೇಲಾ, ಗೋರಾ ಔರ್ ಕಾಲಾ, ದೇವರ್, ಬಾಂದಿನಿ, ಶ್ರೀ 420, ನಾಗಿನ್, ಅಬ್ ದಿಲ್ಲಿ ದುರ್ ನಹಿನ್ ಮತ್ತು ಮಿಸ್ಟರ್ ಅಂಡ್ ಮಿಸಸ್ ಸೇರಿದಂತೆ ಕೆಲವು ಜನಪ್ರಿಯ ಚಲನಚಿತ್ರಗಳಲ್ಲಿ ನಟಿಸಿದ್ದರು.