Advertisement

ಫೂಲ್ ಖಿಲೆ ಹೇ ಗುಲ್ಶನ್ ಗುಲ್ಶನ್ ಖ್ಯಾತಿಯ ಹಿರಿಯ ನಟಿ ತಬಸ್ಸುಮ್ ವಿಧಿವಶ

07:22 PM Nov 19, 2022 | Team Udayavani |

ಮುಂಬೈ: ಬಾಲ ಕಲಾವಿದೆಯಾಗಿ ಮತ್ತು ದೂರದರ್ಶನದ ಜನಪ್ರಿಯ ಟಾಕ್ ಶೋ “ಫೂಲ್ ಖಿಲೆ ಹೇ ಗುಲ್ಶನ್ ಗುಲ್ಶನ್” ಕಾರ್ಯಕ್ರಮದ ನಿರೂಪಕಿಯಾಗಿ ಹೆಸರುವಾಸಿಯಾಗಿದ್ದ ಹಿರಿಯ ನಟಿ ತಬಸ್ಸುಮ್ ಅವರು ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ ಎಂದು ಅವರ ಪುತ್ರ ಹೋಶಾಂಗ್ ಗೋವಿಲ್ ಶನಿವಾರ ತಿಳಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಗ್ಯಾಸ್ಟ್ರೋ ಸಮಸ್ಯೆ ಇತ್ತು ಮತ್ತು ನಾವು ತಪಾಸಣೆಗಾಗಿ ಅಲ್ಲಿಗೆ ಹೋದೆವು. ಶುಕ್ರವಾರ  ರಾತ್ರಿ 8.40 ಮತ್ತು 8.42ಕ್ಕೆ ಎರಡು ಬಾರಿ ಹೃದಯಾಘಾತವಾಯಿತು. ಶುಕ್ರವಾರ ರಾತ್ರಿ ಅವರು ಕೊನೆಯುಸಿರೆಳೆದರು ಎಂದು ಹೊಶಾಂಗ್ ಪಿಟಿಐಗೆ ತಿಳಿಸಿದ್ದಾರೆ.

ಬಾಲ ಕಲಾವಿದೆಯಾಗಿ, ತಬಸ್ಸುಮ್ ಅನ್ನು ಬೇಬಿ ತಬಸ್ಸುಮ್ ಎಂದು ಕರೆಯಲಾಗುತ್ತಿತ್ತು ಮತ್ತು 1940 ರ ದಶಕದ ಉತ್ತರಾರ್ಧದಲ್ಲಿ “ನರ್ಗೀಸ್”, “ಮೇರಾ ಸುಹಾಗ್”, “ಮಂಜ್ಧರ್” ಮತ್ತು “ಬರಿ ಬೆಹೆನ್” ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದರು.

ಅವರು ದೂರದರ್ಶನದಲ್ಲಿ 1972 ರಿಂದ 1993 ರವರೆಗೆ ಸೆಲೆಬ್ರಿಟಿ ಟಾಕ್ ಶೋ “ಫೂಲ್ ಖಿಲೆ ಹೇ ಗುಲ್ಶನ್ ಗುಲ್ಶನ್” ಅನ್ನು ಆಯೋಜಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next