Advertisement

ಶೀಘ್ರದಲ್ಲೇ ಕೇರಳದಲ್ಲಿ ಕಮ್ಯೂನಿಸಮ್, ಕಮ್ಯೂನಿಸ್ಟ್ ಪಕ್ಷ ಕಸದ ಬುಟ್ಟಿಗೆ ಸೇರಲಿದೆ: ತೇಜಸ್ವಿ

01:05 PM Dec 02, 2022 | Team Udayavani |

ತಿರುವನಂತಪುರ: ಇಡೀ ಜಗತ್ತೇ ಕಮ್ಯೂನಿಸಮ್ ಅನ್ನು ತಿರಸ್ಕರಿಸಿದೆ. ಇನ್ನು ಶೀಘ್ರದಲ್ಲೇ ಕೇರಳ ಸೇರಿದಂತೆ ಎಲ್ಲೆಡೆ ಕಮ್ಯೂನಿಸಮ್ ಮತ್ತು ಕಮ್ಯೂನಿಷ್ಟ್ ಪಕ್ಷಗಳು ಕಸದ ಬುಟ್ಟಿಗೆ ಸೇರುವ ಮೂಲಕ ಇತಿಹಾಸಕ್ಕೆ ಸೇರ್ಪಡೆಯಾಗಲಿದೆ ಎಂದು ಬಿಜೆಪಿ ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.

Advertisement

ಇದನ್ನೂ ಓದಿ:ರೆಡ್ಡಿ ಸಹೋದರರೊಂದಿಗೆ ಸೇರಿ ಪ್ರತ್ಯೇಕ ಪಕ್ಷ ಸ್ಥಾಪಿಸುವ ಅಪಪ್ರಚಾರ; ದಿವಾಕರ ಬಾಬು

ಕೇರಳದ ಕಣ್ಣೂರಿನ ಸಮಾರಂಭದಲ್ಲಿ ಮಾತನಾಡಿದ ತೇಜಸ್ವಿ, ಇಡೀ ವಿಶ್ವದಲ್ಲಿಯೇ ಕಮ್ಯೂನಿಸಮ್ ಅನ್ನು ತಿರಸ್ಕರಿಸಲಾಗಿದೆ. ಒಂದು ಕಾಲದಲ್ಲಿ ಕಮ್ಯೂನಿಸಮ್ ನ ಗಂಗೋತ್ರಿಯಾಗಿದ್ದ ಚೀನಾದಂತಹ ದೇಶದಲ್ಲಿಯೂ ತಿರಸ್ಕರಿಸಲಾಗಿದೆ. ಅದೊಂದು ಅಪ್ರಾಯೋಗಿಕ ಮತ್ತು ವಿಫಲ ಸಿದ್ದಾಂತವಾಗಿದೆ. ಕಮ್ಯೂನಿಸಮ್ ಜೀವಂತವಾಗಿರುವ ಏಕೈಕ ದ್ವೀಪ ಕೇರಳವಾಗಿದೆ ಎಂದರು.

ಕೇರಳದ ಯುವ ಜನರು ತೋರುತ್ತಿರುವ ಬದಲಾವಣೆಯ ಉತ್ಸಾಹ ಮತ್ತು ಆಸಕ್ತಿಯನ್ನು ಗಮನಿಸಿದರೆ ಶೀಘ್ರದಲ್ಲಿಯೇ ಕೇರಳದಲ್ಲಿ ಕಮ್ಯೂನಿಸಮ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಕಸದ ಬುಟ್ಟಿಗೆ ಸೇರಲಿದೆ ಎಂಬುದನ್ನು ಬರೆದುಕೊಡುವುದಾಗಿ ವಿಶ್ವಾಸವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next