Advertisement

ಉದಯ್‌ಪುರ ಘಟನೆ: ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು; ವೆರೋನಿಕಾ ಕರ್ನೆಲಿಯೊ

02:51 PM Jun 29, 2022 | Team Udayavani |

ಉಡುಪಿ: ಅಮಾನತುಗೊಂಡಿರುವ ಬಿಜೆಪಿ ನಾಯಕ  ನೂಪುರ್ ಶರ್ಮಾ  ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿದ ಕಾರಣಕ್ಕೆ ರಾಜಸ್ಥಾನದ ಉದಯ್‌ಪುರದಲ್ಲಿ  ಯುವಕನೊಬ್ಬನ ಬರ್ಬರ ಹತ್ಯೆಯಾಗಿರುವುದು  ಅಮಾನವೀಯ ಹಾಗೂ ಕ್ರೂರತೆಯ ಪರಮಾವಧಿಯಾಗಿದ್ದು ನಾಗರಿಕ ಸಮಾಜ ಇಂತಹ ವರ್ತನೆಯನ್ನು ಸಹಿಸಲಾಗದು ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೊ ಘಟನೆಯನ್ನು ಖಂಡಿಸಿದ್ದಾರೆ.

Advertisement

ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಯಾವುದೇ ಸಮುದಾಯ ಮಾಡಿದ್ದರೂ ಕೂಡ ಸಹಿಸಲು ಸಾಧ್ಯವಿಲ್ಲ. ಉದಯಪುರದ  ಹತ್ಯೆಯನ್ನು ‘ಭಯಾನಕ ಮತ್ತು ಭೀಕರ’ ಆಗಿದ್ದು ಈ ಕ್ರೌರ್ಯದಿಂದ ಭಯೋತ್ಪಾದನೆಯನ್ನು ಹರಡುವವರಿಗೆ ತಕ್ಷಣ ಶಿಕ್ಷೆಯಾಗಬೇಕೆಂದರು.

ಇದನ್ನೂ ಓದಿ: ಪುರಸಭಾ ಮಾಜಿ ಅಧ್ಯಕ್ಷೆ ಪತಿಗೆ ಚಾಕುವಿನಿಂದ ಬೆದರಿಸಿ ಚಿನ್ನದ ಸರ,ಮೊಬೈಲ್ ಕಸಿದು ಪರಾರಿ

ಭಾರತದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಹರಡಲು ಬಯಸುವವರು ನಮ್ಮ ದೇಶ ಮತ್ತು ಸಮಾಜಕ್ಕೆ ಮಾರಕ.  ಸುಸಂಸ್ಕೃತ ಸಮಾಜದಲ್ಲಿ ಇಂತಹ ಕ್ರೂರ ಕೃತ್ಯಗಳಿಗೆ ಸ್ಥಳವಿಲ್ಲ. ಕಾಂಗ್ರೆಸ್‌ ಪಕ್ಷ ಎಂದಿಗೂ ಕೂಡ ಇಂತಹ ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದರು.

ಧಾರ್ಮಿಕ ಮೂಲಭೂತವಾದವು ಯಾವುದೇ ಸಮುದಾಯವನ್ನು ಕುರುಡನನ್ನಾಗಿ ಮಾಡುವುದಲ್ಲದೆ ಅವರ ಆಲೋಚನಾ ಶಕ್ತಿಯನ್ನು ಕಸಿದುಕೊಳ್ಳುತ್ತದೆ. ಒಂದು ಮತಾಂಧತೆಯು ಮತ್ತೊಂದು ಮತಾಂಧತೆಯನ್ನು ಪೋಷಿಸುತ್ತದೆ.   ಈ ಅಪರಾಧದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಹಿಂಸಾಚಾರವನ್ನು ವಿರೋಧಿಸುವುದು ನಮ್ಮ ಪಕ್ಷದ ಸ್ಥಿರ ನಿಲುವು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳುವಂತಿಲ್ಲ. ರಾಜ್ಯ ಸರ್ಕಾರವು ಸಾಧ್ಯವಾದಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next