Advertisement
ಹೆಸರುಕಾಳಿನ ಕೊಟ್ಟೆ ಕಡುಬುಬೇಕಾಗುವ ಸಾಮಗ್ರಿ: 5-6 ಗಂಟೆ ನೆನೆಸಿದ ಹೆಸರುಕಾಳು 1 ಕಪ್, ತೆಂಗಿನ ತುರಿ- 1 ಕಪ್, ಒಣಮೆಣಸಿನ ಕಾಯಿ 6-7, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ, ಹಲಸಿನ ಎಲೆಯ ದೊನ್ನೆ/ಇಡ್ಲಿ ಬಟ್ಟಲು.
ಬೇಕಾಗುವ ಸಾಮಗ್ರಿ: ಹೆಸರುಕಾಳು- 1/4 ಕಪ್, ತೆಂಗಿನತುರಿ- 1/4 ಕಪ್, ಹಸಿ ಮೆಣಸಿನಕಾಯಿ- 1, ಒಣಮೆಣಸಿನಕಾಯಿ- 2, ಅರಸಿನ ಹುಡಿ- 1/2 ಚಮಚ, ಉಪ್ಪು ರುಚಿಗೆ, ಒಗ್ಗರಣೆಗೆ ಎಣ್ಣೆ , ಸಾಸಿವೆ, ಕರಿಬೇವು, ಜೀರಿಗೆ, ಹುಣಸೆಹಣ್ಣು ಸ್ವಲ್ಪ .
Related Articles
Advertisement
ಹೆಸರುಕಾಳಿನ ಪತ್ರೋಡೆ ಬೇಕಾಗುವ ಸಾಮಗ್ರಿ: ಪತ್ರೋಡೆ ಎಲೆ (ಕೆಸುವಿನ ಎಲೆ) 8-12, ನೆನೆಸಿದ ಹೆಸರುಕಾಳು, ತೆಂಗಿನತುರಿ- ಒಂದೂವರೆ ಕಪ್, ಹುರಿದ ಒಣಮೆಣಸಿನ ಕಾಯಿ 8-10, ರುಚಿಗೆ ಉಪ್ಪು , ಹುಣಸೆಹಣ್ಣು- 2 ಗೋಲಿ ಗಾತ್ರ, ಇಂಗು ನೀರು- 1 ಚಮಚ. ತಯಾರಿಸುವ ವಿಧಾನ: ತೆಂಗಿನತುರಿ, ಹುಣಸೆ, ಒಣಮೆಣಸಿನಕಾಯಿ, ಉಪ್ಪು , ತೊಳೆದ ಹೆಸರುಕಾಳು ಎಲ್ಲವನ್ನು ಒಟ್ಟಿಗೆ ನಯವಾಗಿ ರುಬ್ಬಿ ಇಂಗು ನೀರು ಬೆರೆಸಿ ದಪ್ಪ ಮಸಾಲೆ ತೆಗೆದಿಡಿ. ಶುಚಿಗೊಳಿಸಿದ ಕೆಸುವಿನೆಲೆಯ ಹಿಂಭಾಗದಲ್ಲಿ ಮಸಾಲೆ ಸವರಿ ಒಂದರ ಮೇಲೆ ಒಂದರಂತೆ ಮೂರು ಮೂರು ಎಲೆ ಇಟ್ಟು ಸುರುಳಿ ಸುತ್ತಿ. ಹಬೆಯ ಪಾತ್ರೆಯಲ್ಲಿ ನೀರು ಕಾದ ಮೇಲೆ ಅದರ ಜಾಲರಿ ಮೇಲೆ ಪತ್ರೋಡೆಗೆ ಸ್ವಲ್ಪ ಗಾಯಮಾಡಿ 25 ನಿಮಿಷ ಬೇಯಿಸಿ ತೆಗೆಯಿರಿ. ಊಟಕ್ಕೆ, ತಿಂಡಿಗೆ ಬಲು ರುಚಿ. (ಬೆಲ್ಲ, ಕೊತ್ತಂಬರಿ, ಸ್ವಲ್ಪ ಅಕ್ಕಿ ಹಾಕಿಯೂ ಪತ್ರೋಡೆ ಮಾಡಬಹುದು)
ಪತ್ರೋಡೆ ಸ್ಲೆ„ಸ್ ಮಾಡಿ ರವಾದಲ್ಲಿ ಮುಳುಗಿಸಿ ತವಾದ ಮೇಲೆ ಕಾಯಿಸಿ ಸೇವಿಸಬಹುದು. ಹೆಸರುಕಾಳಿನ ಪಂಚರತ್ನ
ಬೇಕಾಗುವ ಸಾಮಗ್ರಿ: ಹೆಸರುಕಾಳು- 1/2 ಕಪ್, ಹಸಿಮೆಣಸಿನಕಾಯಿ- 1, ಟೊಮೆಟೊ- 1, ನೀರುಳ್ಳಿ- 1, ರುಚಿಗೆ ಉಪ್ಪು , ಒಗ್ಗರಣೆಗೆ ಒಣಮೆಣಸಿನಕಾಯಿ- 2, ಬೆಳ್ಳುಳ್ಳಿ ಎಸಳು 4-5, ಎಣ್ಣೆ. ತಯಾರಿಸುವ ವಿಧಾನ: ಹೆಸರುಕಾಳು ಬೇಯಿಸಿ ಪಾತ್ರೆಗೆ ಹಾಕಿ. ನೀರುಳ್ಳಿ ಟೊಮೆಟೊ ಎಣ್ಣೆಯಲ್ಲಿ ಬಾಡಿಸಿ ಹೆಸರುಕಾಳಿಗೆ ಹಾಕಿ ಮೆಣಸಿನಕಾಯಿ ಉದ್ದಕ್ಕೆ ಸೀಳಿ ಹಾಕಿ ಉಪ್ಪು ಸೇರಿಸಿ ಕುದಿಸಿರಿ. ಬೆಳ್ಳುಳ್ಳಿ , ಒಣಮೆಣಸಿನಕಾಯಿ ಒಗ್ಗರಣೆ ಮಾಡಿ ಹಾಕಿ ಮುಚ್ಚಿಡಿ. ಅನ್ನ, ಚಪಾತಿಯೊಂದಿಗೆ ಸ್ವಾದಿಷ್ಟಕರ ಪಂಚರತ್ನ ತಯಾರು. ಹೆಸರುಕಾಳು ಹುಗ್ಗಿ (ಪೊಂಗಲ್)
ಬೇಕಾಗುವ ಸಾಮಗ್ರಿ: ಹೆಸರುಕಾಳು- 1 ಕಪ್, ಅಕ್ಕಿ- 1/2 ಕಪ್, ಬೆಲ್ಲ- 1 ಕಪ್ (ಚೂರು ಮಾಡಿದ್ದು), ತೆಂಗಿನಕಾಯಿ ತುರಿ- ಒಂದೂವರೆ ಕಪ್, ಏಲಕ್ಕಿ ಸ್ವಲ್ಪ , ಒಣದ್ರಾಕ್ಷಿ 8-10, ಗೇರು ಬೀಜ ಚೂರು ಸ್ವಲ್ಪ , ತುಪ್ಪ – 2 ಚಮಚ. ತಯಾರಿಸುವ ವಿಧಾನ: ಹೆಸರುಕಾಳು ಬಾಣಲೆಯಲ್ಲಿ ಹುರಿದು ತಣಿದ ಮೇಲೆ ಮಿಕ್ಸಿ ಜಾರ್‌ನಲ್ಲಿ ಹಾಕಿ ಒಂದು ಸುತ್ತು ತೆಗೆದು ಸಿಪ್ಪೆ ಬೇರ್ಪಡಿಸಿಡಿ. ಕುಕ್ಕರ್‌ನಲ್ಲಿ ಹೆಸರುಕಾಳು, ಅಕ್ಕಿ , ಬೆಲ್ಲ ಹಾಕಿ ಬೇಯಿಸಿ. ತೆಂಗಿನತುರಿ, ಏಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ , ಗೇರುಬೀಜ ಚೂರು ಹಾಕಿ ಕುದಿಸಿ ಒಲೆ ಆರಿಸಿರಿ. ಬಿಸಿ ಇರುವಾಗ ತಿನ್ನಬಹುದು. ದೋಸೆ, ಚಪಾತಿಯೊಂದಿಗೆ ಸೇವಿಸಿದರೆ ಬಲು ಸೊಗಸು. ಬೇಕಿದ್ದರೆ ಬಾಳೆಹಣ್ಣಿನ ಚೂರು ಬೆರೆಸಬಹುದು. ಹೆಸರುಕಾಳಿನ ಬದಲು ಹೆಸರುಬೇಳೆಯನ್ನೂ ಉಪಯೋಗಿಸಬಹುದು. ಎಸ್. ಜಯಶ್ರೀ ಶೆಣೈ