ವೇಣೂರು: ಜಾನುವಾರು ಹಾಯ್ದು ಕುತ್ತಿಗೆ ಭಾಗಕ್ಕೆ ತೀವ್ರ ತರಹದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗುಂಡೂರಿ ಗ್ರಾಮದ ದರಿಕಂಡ ನಿವಾಸಿ ಸದಾನಂದ ಪೂಜಾರಿ ಅವರ ಪತ್ನಿ ಮೋಹಿನಿ ಯಾನೆ ಪ್ರೇಮ (45) ಮೃತಪಟ್ಟಿದ್ದಾರೆ.
Advertisement
ಹಟ್ಟಿಯಲ್ಲಿ ಮೇವು ಹಾಕುತ್ತಿದ್ದಾಗ ಅನಿರೀಕ್ಷಿತವಾಗಿ ಜಾನುವಾರು ಹಾಯ್ದು ಮೋಹಿನಿ ಕುತ್ತಿಗೆಯ ಭಾಗಕ್ಕೆ ದನದ ಕೊಂಬು ತಾಗಿ ತೀವ್ರ ತರಹದ ಗಾಯವಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ. 27ರಂದು ಮೃತಪಟ್ಟಿದ್ದಾರೆ. ಅವರ ಪುತ್ರಿಗೆ ಕೆಲವು ದಿನಗಳ ಹಿಂದೆಯಷ್ಟೇ ಹೆರಿಗೆಯಾಗಿತ್ತು. ಮೃತರು ಪತಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.