Advertisement
1987ರಲ್ಲಿ ವೇಣೂರಿನಲ್ಲಿ ಪ್ರಾರಂಭಗೊಂಡ ನಾಡಕಚೇರಿಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಒದಗಿ ಬಂದಿಲ್ಲ. ಸುಮಾರು 32 ವರ್ಷಗಳಿಂದ ಬಾಡಿಗೆ ಕೋಣೆಯಲ್ಲೇ ದಿನ ಕಳೆಯುತ್ತಿದೆ. ಇಂದೋ ನಾಳೆಯೋ ಬೀಳುವ ಸ್ಥಿತಿ ಯಲ್ಲಿರುವ ಕಟ್ಟಡದಿಂದ ಗ್ರಾಮಸ್ಥರ ಕಡತಗಳಿಗೆ ಸುರಕ್ಷತೆಯೇ ಇಲ್ಲವಾಗಿದೆ.
Related Articles
ನಾಡಕಚೇರಿಗೆ ಬಾಡಿಗೆ ಕೋಣೆಯನ್ನು ಪಡೆದುಕೊಂಡಾಗ ಕೊಠಡಿ ವ್ಯವಸ್ಥಿತವಾಗಿಯೇ ಇತ್ತು. ಆದರೆ ಇಂದು ಕಟ್ಟಡದ ಈ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಛಾವಣಿ ಕಾಂಕ್ರಿಟ್ ಬೀಳುತ್ತಿದೆ. ಬಾಡಿಗೆ ನೀಡಿದವರೇ ಕಚೇರಿ ತೆರವಿಗೆ ಹಲವು ಬಾರಿ ಸೂಚಿ ಸಿದ್ದರೂ ಇಲಾಖೆ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲ.
Advertisement
ಜಾಗವಿದ್ದರೂ ಕಟ್ಟಡವಿಲ್ಲವೇಣೂರು ಕಂದಾಯ ನಿರೀಕ್ಷಕರ ಕಚೇರಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ದಾಗ ದುರಸ್ತಿ ಕಾರ್ಯ ಮಾಡುವ ಬದಲು 2004ಲ್ಲಿ ಬಾಡಿಗೆ ಕೋಣೆಗೆ ಸ್ಥಳಾಂತರ ಮಾಡಲಾಗಿದೆ. ನಾಡ ಕಚೇರಿಗೆ ಸಂಬಂಧಿಸಿ 40 ಸೆಂಟ್ಸ್ ಜಾಗವಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣ ಆಗಬೇಕಿದೆ.
ಪ್ರಸ್ತಾವನೆ ಕಳುಹಿಸಿದೆ
ವೇಣೂರು ನಾಡಕಚೇರಿಗೆ ಸ್ವಂತ ಜಾಗವಿದ್ದರೂ ಕಟ್ಟಡವಿಲ್ಲದೆ ಬಾಡಿಗೆ ಕೊಠಡಿಯಲ್ಲಿರಬೇಕಾಗಿದೆ. ಹೊಸ ಕಟ್ಟಡದ ಬಗ್ಗೆ ಕಳೆದ ಬಾರಿಯೂ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹೊಸ ಕಟ್ಟಡ ಅನುಮೋದನೆ ಗೊಂಡರೆ ಅನುಕೂಲ.
– ಪಾವಡಪ್ಪ ದೊಡ್ಡಮನಿ
– ಪದ್ಮನಾಭ ವೇಣೂರು ಕಂದಾಯ ನಿರೀಕ್ಷಕರು, ವೇಣೂರು ಹೋಬಳಿ