Advertisement

ವೇಣೂರು: ಬೈಕ್- ಈಚರ್ ಲಾರಿ ಅಪಘಾತ; ಸವಾರ ಮೃತ್ಯು

10:35 AM Sep 16, 2022 | Team Udayavani |

ವೇಣೂರು: ಬೈಕ್ ಮತ್ತು ಈಚರ್ ಲಾರಿ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಳದ೦ಗಡಿ ಸಮೀಪ ಪಿಲ್ಯ ಮಸೀದಿ ಎದುರು ಸೆ.15ರ ರಾತ್ರಿ ನಡೆದಿದೆ.

Advertisement

ಬೈಕ್ ಸವಾರ ಕುದ್ಯಾಡಿ ನಿವಾಸಿ ಪ್ರವೀಣ್ ಆಚಾರ್ಯ ಮೃತಪಟ್ಟ ವ್ಯಕ್ತಿ. ಈಚರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಕಟ್ಟೆ ಬಳಿ ವಾಹನ ತಡೆದು ನಿಲ್ಲಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.

ಮೃತ ಪ್ರವೀಣ್ ಆಚಾರ್ಯ ಅವರ ಪಾರ್ಥಿವ ಶರೀರವನ್ನು ಬೆಳ್ತಂಗಡಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next