Advertisement
ಮೈಸೂರು ಜಿಲ್ಲೆಯಲ್ಲಿ ತೀರಾ ಹಿಂದುಳಿದ ತಾಲೂಕು ಎಂದೇ ಕರೆಯಿಸಿಕೊಳ್ಳುವ ಎಚ್.ಡಿ.ಕೋಟೆ ಕೇರಳ ಗಡಿಗೆ ಹೊಂದಿಕೊಂಡಿದೆ. ವನಸಿರಿಯ ನಾಡು, ಜಲಾಶಯಗಳ ಬೀಡು ಎಂದೇ ಕರೆಯಿಸಿಕೊಳ್ಳುವ ಈ ತಾಲೂಕಿನಲ್ಲಿ ಕಾಕನ ಕೋಟೆ ಅರಣ್ಯ, ಬೀಚನಹಳ್ಳಿ ಡ್ಯಾಂ, ಕಬಿನಿ ಹಿನ್ನೀರು ಪ್ರದೇಶಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಚಳಿಗಾಲದಲ್ಲಿ ಹಿಮಾಲಯದಿಂದ ವಲಸೆ ಬರುವ ಬೂದು ಬಣ್ಣದ ಬಾತುಕೋಳಿಗಳು ಪಕ್ಷಿಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಇಂತಹ ಪ್ರಾಕೃತಿಕ ಪ್ರಮುಖ ಪ್ರವಾಸಿ ತಾಣವಾಗಿರುವ ಎಚ್.ಡಿ.ಕೋಟೆಯಲ್ಲಿ ಅಂತಹ ಸ್ಟಾರ್ ಹೋಟೆಲ್‌ಗಳು ಇಲ್ಲದಿದ್ದರೂ, ಶುಚಿ ರುಚಿಗೆ ಯಾವುದೇ ಕೊರತೆಯಾಗದಂತಹ ಹೋಟೆಲ್‌ಗಳು ಇವೆ. ಅದರಲ್ಲಿ ವೆಂಕಟೇಶ್ವರ ಲಂಚ್ ಹೋಂ ಕೂಡ ಒಂದು. ಇತ್ತ ಹೆಚ್ಚಾ ಅಲ್ಲದೆ, ಕಡಿಮೆಯೂ ಅಲ್ಲದ, ಕೈಗೆಟಕುವ ದರದಲ್ಲಿ ಉಪಾಹಾರ ಸಿಗುತ್ತದೆ. ಇಡ್ಲಿ, ವಡೆ ಸಾಂಬಾರ್, ಮಸಾಲ್ ದೋಸೆ ಮತ್ತು ಬಾಳೆಎಲೆಯಲ್ಲಿ ಊಟ ಹಾಕುವುದು ಈ ಹೋಟೆಲ್‌ನ ವಿಶೇಷ.
ಮಾಡಿಸುವುದು ನಾಗೇಂದ್ರ ಅವರೇ. ಮೊದಲು ಅವರು ಟೇಸ್ಟ್ ನೋಡಿ ಸರಿ ಇದೆ ಎಂದ ಮೇಲೆ ಗ್ರಾಹಕರಿಗೆ ಬಡಿಸಲಾಗುತ್ತದೆ. ಇಡ್ಲಿ ಸಾಂಬರ್ ಫೇಮಸ್:
ಈ ಲಂಚ್ ಹೋಂನ ವಿಶೇಷ ಅಂದ್ರೆ ಇಡ್ಲಿ, ವಡೆ ಸಾಂಬಾರ್. ಗ್ರಾಹಕರು ಹೆಚ್ಚಾಗಿ ಇಡ್ಲಿ ಜತೆ ಚಟ್ನಿಗಿಂತ ಸಾಂಬಾರ್ ಕೇಳುವುದೇ ಹೆಚ್ಚು. ಬೆಳಗ್ಗೆ 6 ಗಂಟೆಗೆ ಹೋಟೆಲ್ ಪ್ರಾರಂಭವಾದ್ರೆ ಮಧ್ಯಾಹ್ನ 12 ಗಂಟೆಯವರೆಗೂ ತಿಂಡಿಯನ್ನು ವಿತರಣೆ ಮಾಡಲಾಗುತ್ತದೆ. 20 ರಿಂದ 40 ರೂ.ವರೆಗೂ ದರ ಇದೆ. ಮಸಾಲೆ, ಬೇಬಿ ಮಸಾಲೆ, ಪ್ಲೆ„ನ್, ಈರುಳ್ಳಿ, ಸೆಟ್, ರವೆ ಹೀಗೆ ವಿವಿಧ ಬಗೆಯ ದೋಸೆ, ರೈಸ್ ಬಾತ್ ಜೊತೆಗೆ ಕಾಫಿ, ಟೀ, ಹಾಲು, ಹಾರ್ಲಿಕ್ಸ್, ರಾಗಿ ಮಾಲ್ಟ್ ಕೂಡ ಇಲ್ಲಿ ಸಿಗುತ್ತದೆ.
Related Articles
Advertisement
ಹೋಟೆಲ್ ಸಮಯ:ಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ, ಭಾನುವಾರ ಬೆಳಗ್ಗೆ 6 ರಿಂದ ರಾತ್ರಿ 5ರವರೆಗೆ. ವಾರದ ರಜೆ ಇಲ್ಲ. ಹಬ್ಬಗಳಲ್ಲಿ ಮಾತ್ರ ರಜೆ. ಹೋಟೆಲ್ ವಿಳಾಸ:
ವೆಂಕಟೇಶ್ವರ ಲಂಚ್ ಹೋಂ, ಹಳೇ ತಾಲೂಕು ಕಚೇರಿ ಎದುರು, ಎಚ್.ಬಿ.ರೋಡ್, ಎಚ್.ಡಿ.ಕೋಟೆ. – ಭೋಗೇಶ್ ಎಂ.ಆರ್./ ನಿಂಗಣ್ಣ ಕೋಟೆ