Advertisement

ವೆಂಕಯ್ಯ ನಾಯ್ಡು ಕಾರ್ಯಾವಧಿ ರಾಜ್ಯಸಭೆಗೆ ಆದರ್ಶ ಹಿನ್ನೋಟ

11:45 PM Aug 09, 2022 | Team Udayavani |

ದೇಶದ ಹದಿಮೂರನೇ ಉಪರಾಷ್ಟ್ರಪತಿಯಾಗಿರುವ ಎಂ. ವೆಂಕಯ್ಯ ನಾಯ್ಡು ಅವರ ಸೇವಾವಧಿ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ.

Advertisement

14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್‌ ಧನ್ಕರ್‌ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2017ರಿಂದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿಯಾಗಿ ಸೇವೆ ಸಲ್ಲಿಸಿದ ನಾಯ್ಡು ಅವರ ಐದು ವರ್ಷಗಳ ಕಿರು ಹಿನ್ನೋಟ ಇಲ್ಲಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಮೇಲ್ಮನೆಗೆ ಸಂಬಂಧಿಸಿದಂತೆ ಒಟ್ಟು 19 ವರ್ಷಗಳ ಕಾಲ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಮುಪ್ಪಾವರಪು ವೆಂಕಯ್ಯ ನಾಯ್ಡು ಅವರು ರಾಜ್ಯಸಭೆಯ ಸಭಾಪತಿ ಆದ ಬಳಿಕ ಮೇಲ್ಮನೆಯ ಕಲಾಪಗಳಿಗೆ ಒಂದು ರೀತಿಯ ಕಲಾತ್ಮಕತೆ ಬಂದಿತು ಎಂದರೆ ತಪ್ಪಾಗಲಾರದು. ಚರ್ಚೆಗಳಿಗೆ ಹೆಚ್ಚಿನ ಅರ್ಥ ಬಂದಿದೆ. ಹೀಗಾಗಿಯೇ, ಮೇಲ್ಮನೆಯ ಕಲಾಪದ ಉತ್ಪಾದಕತೆ (ಪ್ರೊಡಕ್ಟಿವಿಟಿ) ಶೇ.70ಕ್ಕೆ ಏರಿದೆ.

ಸಂಸದೀಯ ಸಮಿತಿಗಳು ನಡೆಸಿದ ಸಭೆಯ ಹಾಗೂ ಕಾರ್ಯಕಲಾಪಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ಮೇಲ್ವಿಚಾರಣೆ ನಡೆಸಿದ್ದಾರೆ ಮತ್ತು ಅವುಗಳು ಸಮರ್ಥವಾಗಿ ಕೆಲಸ ಮಾಡುವಂತೆ ಮಾಡಿದ್ದಾರೆ,ಐದು ವರ್ಷಗಳ ಅವಧಿಯಲ್ಲಿ ರಾಜ್ಯಸಭೆಯು 13 ಅಧಿವೇಶನಗಳಿಂದ 261 ಕಲಾಪ ನಡೆಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕುವುದು, ತ್ರಿವಳಿ ತಲಾಕ್‌ ನಿಷೇಧ ಸೇರಿ ಒಟ್ಟು 177 ಮಸೂದೆಗಳನ್ನು ವೆಂಕಯ್ಯ ನಾಯ್ಡು ಸಭಾಪತಿಯಾಗಿದ್ದ ವೇಳೆ ಅನುಮೋದನೆ ಪಡೆಯಲಾಗಿದೆ.

Advertisement

ಬದಲಾವಣೆಯ ಕಾಲ:
ನಾಯ್ಡು ಅವರ ಸೇವಾವಧಿಯನ್ನು ರಾಜ್ಯಸಭೆಯಲ್ಲಿ ಬದಲಾವಣೆಯ ಕಾಲ ಎಂದರೂ ತಪ್ಪಾಗದು.

ಉಪರಾಷ್ಟ್ರಪತಿಯಾಗಿದ್ದ ಹಮೀದ್‌ ಅನ್ಸಾರಿ ಅವರು ಉಪ ರಾಷ್ಟ್ರಪತಿಯಾಗಿದ್ದಾಗ ಪ್ರಶ್ನೋತ್ತರ ವೇಳೆಯಲ್ಲಿ ಬದಲು ಮಾಡಿದ್ದರು. ನಾಯ್ಡು ಅವರು ಮಧ್ಯಾಹ್ನ 12 ಗಂಟೆಗೆ ಪ್ರಶ್ನೋತ್ತರ ಅವಧಿಯನ್ನು ಮರು ನಿಗದಿಪಡಿಸಿದರು. ಜೆಡಿಯುನ ರಾಜ್ಯಸಭಾ ಸದಸ್ಯರಾಗಿದ್ದ ಶರದ್‌ ಯಾದವ್‌ ಮತ್ತು ಅಲಿ ಅನ್ವರ್‌ ಅನ್ಸಾರಿ ಅವರನ್ನು ಅನರ್ಹಗೊಳಿಸಿದರು. ವಿಶೇಷವಾಗಿ ರಾಜ್ಯಸಭೆಯ ಸದಸ್ಯರಿಗೆ ಅಧಿವೇಶನದ ಸಂದರ್ಭದಲ್ಲಿ ಮಾತೃಭಾಷೆಯಲ್ಲಿ ಮಾತನಾಡುವುದಕ್ಕೆ ಮುಕ್ತ ಅವಕಾಶ ನೀಡಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷದ ‌ ಸದ್ಯಸರಾಗಿ ಅಪಾರ ಅನುಭವ ಹೊಂದಿರುವ ನಾಯ್ಡು ಅವರು, ಆ ಅನುಭವವನ್ನೇ ಆಧರಿಸಿ, ರಾಜ್ಯಸಭೆಯಲ್ಲಿ ವ್ಯವಸ್ಥಿತ ಸುಧಾರಣೆ ತರುವುದಕ್ಕೆ ಮತ್ತು ಅದರ ಕೆಲಸದ ಪಾರದರ್ಶಕತೆ, ಜವಾಬ್ದಾರಿ ಹೆಚ್ಚಿಸಲು ಸಚಿವಾಲಯಗಳ ಸಮಗ್ರ ಅಧ್ಯಯನಕ್ಕೆ ಆದೇಶಿಸಿದರು.

ವಿದೇಶಿ ಪ್ರವಾಸ:
ಉಪ ರಾಷ್ಟ್ರಪತಿಯಾಗಿ ನಾಯ್ಡು ಅವರು ಅಮೆರಿಕ, ಪೆರು, ಬೆಲ್ಜಿಯಂ, ಫ್ರಾನ್ಸ್‌, ಜಿಂಬಾಂಬೆ, ವಿಯೆಟ್ನಾಂ ಸೇರಿ ಅನೇಕ ರಾಷ್ಟ್ರಗಳಿಗೆ ಪ್ರವಾಸ ಬೆಳೆಸಿದ್ದರು. ಹಾಗೆಯೇ ವಿದೇಶಗಳೊಂದಿಗೆ ಭಾರತ ಸ್ನೇಹ ಗಟ್ಟಿ ಮಾಡುವಲ್ಲಿ ಶ್ರಮಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next