Advertisement

1180 ದ್ವಿಚಕ್ರ ವಾಹನಗಳ ವಶ

11:30 AM Dec 24, 2017 | |

ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳ ಪತ್ತೆಗಾಗಿ ರಚಿಸಲಾಗಿದ್ದ ಪೂರ್ವ ವಲಯ ಪೊಲೀಸರ ವಿಶೇಷ ತಂಡ, 316 ಬೈಕ್‌ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 4.98 ಕೋಟಿ ರೂ. ಮೌಲ್ಯದ 1180 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇವರ ಬಂಧನದಿಂದ ಬೆಂಗಳೂರಷ್ಟೇ ಅಲ್ಲದೆ ರಾಜ್ಯದ ವಿವಿಧೆಡೆ ನಡೆದಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.

Advertisement

ಪೂರ್ವ ವಿಭಾಗದ 13 ಠಾಣೆ ವ್ಯಾಪ್ತಿಯಲ್ಲಿ 110 ಆರೋಪಿಗಳಿಂದ 1.24 ಕೋಟಿ ರೂ. ಮೌಲ್ಯದ 312 ಬೈಕ್‌ಗಳು, ಆಗ್ನೇಯ ವಿಭಾಗದ ಪೊಲೀಸರು 81 ಕಳ್ಳರನ್ನು ಬಂಧಿಸಿ 2.24 ಕೋಟಿ ರೂ. ಮೌಲ್ಯದ 482 ಬೈಕ್‌ಗಳು ಮತ್ತು ವೈಟ್‌ ಫೀಲ್ಡ್‌ ವಿಭಾಗದ ಪೊಲೀಸರು 60 ಮಂದಿ ಕಳ್ಳರನ್ನು ಬಂಧಿಸಿದ್ದು, 95.20 ಲಕ್ಷದ 238 ಬೈಕ್‌ಗಳು ಹಾಗೂ ಈಶಾನ್ಯ ವಿಭಾಗದಿಂದ 65 ಕಳ್ಳರಿಂದ 76.62 ಲಕ್ಷ ಬೆಲೆಯ 148 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರು ತಮ್ಮ ಮೋಜಿನ ಜೀವನಕ್ಕಾಗಿ ಮನೆ ಹಾಗೂ ಕೆಲ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು
ನಕಲಿ ಕೀ ಮೂಲಕ ಕಳವು ಮಾಡುತ್ತಿದ್ದರು. ನಂತರ ಬೆಂಗಳೂರು, ಹಾಸನ, ಚನ್ನ ರಾಯಪಟ್ಟಣ, ಕೋಲಾರ, ರಾಮನಗರ, ಶಿಡ್ಲಘಟ್ಟ, ಚಿಂತಾಮಣಿ, ಮುಳಬಾಗಿಲು, ಆಂಧ್ರಪ್ರದೇಶ, ತಮಿಳುನಾಡು, ಕೇರಳಕ್ಕೆ ತಾವೇ ಬೈಕ್‌ಗಳನ್ನು ಓಡಿಸಿಕೊಂಡು ಹೋಗಿ, ಗ್ರಾಮಾಂತರ ಪ್ರದೇಶಗಳಲ್ಲಿ ಅಮಾಯಕ ಜನರಿಗೆ ಮಾರಾಟ ಮಾಡುತ್ತಿದ್ದರು. ದಾಖಲೆಗಳನ್ನು ನಂತರ ಕೊಡುತ್ತೇವೆ ಎಂದು ಹೇಳಿ ಕೇವಲ 10ರಿಂದ 15 ಸಾವಿರ ರೂ. ಮುಂಗಡ ಹಣ ಪಡೆದು ಮಾರಾಟ ಮಾಡಿ, ನಾಪತ್ತೆಯಾಗುತ್ತಿದ್ದರು. 

ಬಂಧಿತರ ಪೈಕಿ ಸ್ಥಳೀಯರು ಹಾಗೂ ನೆರೆ ರಾಜ್ಯದ ಕಳ್ಳರು ಇದ್ದು, ಸ್ಥಳೀಯ ಸಿಸಿಟಿವಿ ಹಾಗೂ ಬಾತ್ಮೀದಾರರ ಮಾಹಿತಿಯನ್ನಾಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ನಂತರ ಬೇರೆ ಜಿಲ್ಲೆ, ರಾಜ್ಯಗಳಲ್ಲಿ ಮಾರಾಟ ಮಾಡಿದ್ದ ಸಾವಿರಾರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಲು ಖರೀದಿಸಿದ ವರಿಗೆ ಇತ್ತ ಬೈಕ್‌ ಇಲ್ಲ, ಅತ್ತ ಹಣವೂ ಇಲ್ಲದಾಗಿದೆ. ಯಲಹಂಕ ಠಾಣೆಯ ಇನ್ಸ್‌ಪೆಕ್ಟರ್‌ ಮಂಜೇಗೌಡ ನೇತೃತ್ವದ ತಂಡ ಒಟ್ಟು 40 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದು, 10 ಮಂದಿಯನ್ನು ಬಂಧಿಸಿದೆ. ಈ ಸಂಬಂಧ ಶನಿವಾರ ಯಲಹಂಕದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ಕಳವು ಬೈಕ್‌ಗಳ ಪ್ರದರ್ಶನದಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ವರು, ಕೆಲ ಮಾಲೀಕರಿಗೆ ಬೈಕ್‌ಗಳನ್ನು ಹಸ್ತಾಂತರಿಸಿದರು

ದಾಖಲೆ ಇಲ್ಲದ ಬೈಕ್‌ ಖರೀದಿಸಿದ್ರೆ ಎಚ್ಚರ “ಬೆಂಗಳೂರಿನಲ್ಲಿ ಒಟ್ಟು 66 ಲಕ್ಷ ವಾಹನಗಳಿದ್ದು, ಈ ಪೈಕಿ 40 ಲಕ್ಷ ದ್ವಿಚಕ್ರ
ವಾಹನಗಳಿವೆ. ಸದ್ಯದ ಮಾಹಿತಿ ಪ್ರಕಾರ ವರ್ಷಕ್ಕೆ ಸರಾಸರಿ 5 ಸಾವಿರ ಬೈಕ್‌ಗಳು ಕಳುವಾಗುತ್ತಿವೆ. ಪ್ರಸ್ತುತ ಶೇ.50ರಷ್ಟು
ಬೈಕ್‌ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದಿದ್ದು, ದಾಖಲೆಗಳಿಲ್ಲದೇ ಬೈಕ್‌ಗ ಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿವೆ. ಹೀಗಾಗಿ ಇನ್ಮುಂದೆ ದಾಖಲೆಗಳಿಲ್ಲದ ವಾಹನಗಳನ್ನು ಖರೀದಿಸಿದರೆ ಅವರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ. ಏಕೆಂದರೆ, ಕಳವು ವಸ್ತು ಖರೀದಿಸುವವರು ಇಲ್ಲ ವಾದರೆ, ಬೈಕ್‌ ಕಳ್ಳತನ ಕಡಿಮೆ ಆಗುತ್ತದೆ ಎಂಬ ಉದ್ದೇಶದಿಂದ ಈ ಆದೇಶ ನೀಡಲಾಗಿದೆ,’ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Advertisement

ಸಂಭ್ರಮಾಚರಣೆ ವೇಳೆ ಜವಾಬಾರಿಯಿಂದ ವರ್ತಿಸಿ “ಕಳೆದ ವರ್ಷ ಹೊಸ ವಷಾಚರಣೆ ಸಂದರ್ಭ ಯುವತಿಯರೊಂದಿಗೆ ಕೆಲ ಪುಂಡರು ಅನುಚಿತವಾಗಿ ವರ್ತಿಸಿದ್ದು ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಭದ್ರತೆ ಕೈಗೊಳ್ಳಲು ಸೂಚಿಸಿದ್ದೇನೆ. ಡಿ.31ರ ತಡರಾತ್ರಿ ನಗರದ ಬಹುತೇಕ ಮಂದಿ ಬಿಗ್ರೇಡ್‌ ರಸ್ತೆ, ಎಂ.ಜಿ.ರಸ್ತೆ ಹಾಗೂ ಚಚ್‌ ಸ್ಟ್ರೀಟ್‌ಗೆ ಆಗಮಿಸುತ್ತಾರೆ. ಸುಮಾರು 25 ಸಾವಿರ ಜನ ಸೇರುವ ಪ್ರದೇಶಕ್ಕೆ ಏಕಕಾಲದಲ್ಲಿ 70 ಸಾವಿರ ಜನರು ಬಂದರೆ ಸಾಮಾನ್ಯವಾಗಿ ತಳ್ಳಾಟ, ನೂಕಾಟ ಆಗುತ್ತದೆ. ಹೀಗಾಗಿ ನಾಗರಿಕರು ಸಂಭ್ರಮದ ನಡುವೆ ಜವಾಬ್ದಾರಿಯಿಂದ ನಡೆದುಕೊಳ್ಳಿ,’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು

ಸನ್ನಿ ನೈಟ್ಸ ಆಯುಕ್ತರು ತೀರ್ಮಾನಿಸ್ತಾರೆ ಇನ್ನು ಬಾಲಿವುಡ್‌ ನಟಿ ಸನ್ನಿ ಲಿಯೋನ್‌ರ “ಸನ್ನಿ ನೈಟ್ಸ್‌’ ಕಾರ್ಯಕ್ರಮ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸನ್ನಿ ನೈಟ್ಸ್‌ ಕಾರ್ಯಕ್ರಮ ಹಾಗೂ ತಡರಾತ್ರಿ 1 ಗಂಟೆವರೆಗೆ
ಬಾರ್‌ ತೆರೆಯುವ ಕುರಿತು ನಗರ ಪೊಲೀಸ್‌ ಆಯುಕ್ತರು ಸದ್ಯದಲ್ಲೇ ಅಂತಿಮ ನಿರ್ಧಾರಕೈಗೊಳ್ಳುತ್ತಾರೆ,’ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next