Advertisement

ಕರ್ಫ್ಯೂ ಕಟ್ಟು ನಿಟ್ಟು : ಮುಂದುವರಿದ ವಾಹನ ಜಪ್ತಿ

11:50 AM May 13, 2021 | Team Udayavani |

ಕಲಬುರಗಿ: ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಸೋಂಕಿನ ಜಾರಿ ಮಾಡಲಾದ ಲಾಕ್‌ಡೌನ್‌ ಬುಧವಾರ ಮೂರು ದಿನವೂ ಬಿಗಿಯಾಗಿ ಅನುಷ್ಠಾನ ಗೊಂಡಿತ್ತು. ಪೊಲೀಸರು ರಸ್ತೆಗಿಳಿದ ಬೈಕ್‌, ಕಾರುಗಳನ್ನು ನಿರಂತರವಾಗಿ ಜಪ್ತಿ ಮಾಡುತ್ತಿರುವುದರಿಂದ ಜನರು ಎಚ್ಚೆತ್ತು  ಕೊಂಡು ರಸ್ತೆಗೆ ಇಳಿಯುವುದನ್ನು ಕಡಿಮೆ ಮಾಡಿದ್ದಾರೆ.

Advertisement

ಸೋಮವಾರದಿಂದ ಕಠಿಣ ಲಾಕ್‌ ಡೌನ್‌ ಜಾರಿಗೊಳಿಸಿದ್ದು, ಪೊಲೀಸರು ಬಿಗಿ ಕ್ರಮ ಅನುಸರಿಸುತ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ನಗರದ ಪ್ರಮುಖ ಸ್ಥಳಗಳು, ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ಹೊರತು ಪಡಿಸಿ, ಬೆಳಗ್ಗೆ 10 ಗಂಟೆ ನಂತರ ವಿನಾಕಾರಣ ರಸ್ತೆಗಳಿಗೆ ಬಂದವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ಸರಿಯಾದ ಮಾಹಿತಿ, ಸೂಕ್ತ ಕಾರಣ ನೀಡದೇ ಇದ್ದರೆ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಬುಧವಾರ ನಗರದಾದ್ಯಂತ ಒಟ್ಟು 166 ದ್ವಿಚಕ್ರ ವಾಹನ, 23 ತ್ರಿಚಕ್ರ ವಾಹನ, 24 ಚತುಷcಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಪ್ರತಿ ದಿನವೂ ನೂರಾರು ವಾಹನಗಳನ್ನು ಜಪ್ತಿ ಮಾಡಿ, ಪೊಲೀಸ್‌ ಮೈದಾನಕ್ಕೆ ಅವುಗಳನ್ನು ಸಾಗಿಸುತ್ತಿದ್ದಾರೆ. ಇದರಿಂದ ಪೊಲೀಸ್‌ ಮೈದಾನ ತುಂಬೆಲ್ಲವೂ ಎಲ್ಲಿ ನೋಡಿ  ದರೂ ಬರೀ ಬೈಕ್‌, ಕಾರುಗಳು, ಆಟೋಗಳೇ ಕಾಣಿಸುವಂತೆ ಆಗಿದೆ. ಎಲ್ಲ ವಾಹನಗಳನ್ನು ಸಾಲಾಗಿ ನಿಲ್ಲಿಸುತ್ತಿರುವ ಪೊಲೀಸರು, ಜಪ್ತಿ ಮಾಡಿದ ಮರು ದಿನ ಸೂಕ್ತ ದಾಖಲೆಗಳ ಪರಿಶೀಲನೆ ಮತ್ತು ದಂಡ ಕಟ್ಟಿಸಿಕೊಂಡು ಬಿಡುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next