Advertisement

ವಾಹನ ಖರೀದಿಯ ಮೇಲೆ ಶೇ. 25 ರಷ್ಟು ತೆರಿಗೆ ವಿನಾಯಿತಿ.! ಏನಿದು ಕೇಂದ್ರದ ಹೊಸ ಯೋಜನೆ.?

02:52 PM May 09, 2021 | Team Udayavani |

ನವ ದೆಹಲಿ : ಕೇಂದ್ರ ಸರ್ಕಾರ ದೇಶದ ಸಾರ್ವಜನಿಕರಿಗೆ ಒಂದು ಭರ್ಜರಿ ಆಫರ್ ಒಂದನ್ನು ನೀಡುತ್ತಿದೆ. ವಾಹನ ಖರೀದಿ ಮಾಡಿದ್ದಲ್ಲಿ ಶೇಕಡಾ 25 ರಷ್ಟು ತೆರಿಗೆ ವಿನಾಯಿತಿ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

Advertisement

ಹೌದು, ಕೇಂದ್ರ ಸರ್ಕಾರ ಮಾರ್ಚ್ ತಿಂಗಳಿನಲ್ಲಿ ತನ್ನ ಸ್ಕ್ರ್ಯಾಪಿಂಗ್ ಪಾಲಸಿಯ ಕರಡು ಪ್ರತಿಯನ್ನು ಜಾರಿಗೊಳಿಸಿತ್ತು. ವಾಯುಮಾಲಿನ್ಯವನ್ನು ನಿಒಯಂತ್ರಣಕ್ಕೆ ತರುವ ಉದ್ದೇಶದಿಂದ 15 ವರ್ಷ ಮೇಲ್ಪಟ್ಟ 15 ವರ್ಷಕ್ಕಿಂತ ಹಳೆಯ ಕಮರ್ಷಿಯಲ್ ಹಾಗೂ 20 ವರ್ಷಕ್ಕಿಂತ ಹಳೆಯ ನಾನ್ ಕಮರ್ಷಿಯಲ್ ವಾಹನಗಳನ್ನು ಸ್ಕ್ರ್ಯಾಪ್ ಎಂದು ಪರಿಗಣಿಸಲಾಗುವುದು ಎಂದು ಹೇಳಿತ್ತು. ಇದರ ಅನ್ವಯ ಅಕ್ಟೋಬರ್ 1 ರ ಮೇಲೆ ನೀವು ಹೊಸ ಕಾರುಗಳನ್ನು ಖರೀದಿಸಿದ್ದಲ್ಲಿ ನಿಮಗೆ ಶೇಕಡಾ 25 ರಷ್ಟು ತೆರಿಗೆ ವಿನಾಯಿತಿ ಮಾಡಲಾಗುವುದು ಎಂದು ಕೇಂದ್ರ ಘೋಷಣೆ ಮಾಡಿದೆ.

ಓದಿ : ರಾಜಸ್ಥಾನ್ ರಾಯಲ್ಸ್ ವೇಗಿ ಚೇತನ್ ಸಕಾರಿಯಾ ತಂದೆ ಕೋವಿಡ್ 19 ಸೋಂಕಿನಿಂದ ಸಾವು

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯ ಅನ್ವಯ ನೀಡಿದ  ವೆಹಿಕಲ್ ಸ್ಕ್ರ್ಯಾಪಿಂಗ್ ಸರ್ಟಿಫಿಕೆಟ್ ಜೊತೆಗೆ ಸ್ವಂತ ಹೊಸ ವಾಹನ ಖರೀದಿಯ ಮೇಲೆ ರೋಡ್ ಟ್ಯಾಕ್ಸ್ ನಲ್ಲಿ ಶೇಕಡಾ. 25 ರಷ್ಟು ವಿನಾಯಿತಿ ಸಿಗಲಿದೆ ಹಾಗೂ ಕಮರ್ಷಿಯಲ್ ವಾಹನ ಖರೀದಿಯ ವೇಳೆ ಶೇ.15 ರಷ್ಟು ಏರಿಗೆ ವಿನಾಯಿತಿ ಸಿಗಲಿದೆ. 8 ವರ್ಷಗಳು ಹಳೆಯ ವಾಹನಗಳಿಂದ ಗ್ರೀನ್ ಟ್ಯಾಕ್ಸ್ ವಸೂಲಿ ಮಾಡಲಾಗುತ್ತದೆ ಮತ್ತು ಆ ಗ್ರೀನ್ ಟ್ಯಾಕ್ಸ್ ನಿಂದ ಬಂದ ಹಣವನ್ನು  ವಾಯುಮಾಲನ್ಯವನ್ನು ತಡೆಗಟ್ಟ್ಉವ ಉದ್ದೇಶದಿಂದ ಬೇಕಾದ ಎಲ್ಲ ಕಾರ್ಯಗಳಿಗೆ ಬಳಸಲಾಗುವುದು ಎಂದು ಕೇಂದ್ರ ತಿಳಿಸಿದೆ.

ಪ್ಯಾಸೆಂಜರ್ ವಾಹನ ಖರೀದಿಯ ಮೇಲೆ ಶೇ.25 ರಷ್ಟು ಹಾಗೂ ಕಮರ್ಷಿಯಲ್ ವಾಹನ ಖರೀದಿಯ ಮೇಲೆ ಶೇ.15 ರಷ್ಟು ವಿನಾಯಿತಿ ಸಿಗಲಿದೆ.

Advertisement

ಕಮರ್ಷಿಯಲ್ ವಾಹನಗಳ ಮೇಲೆ ಈ ತೆರಿಗೆ ವಿನಾಯ್ತಿ ನಿಮಗೆ 8 ವರ್ಷಗಳ ಅವಧಿಗೆ ದೊರೆತರೆ, ಪರ್ಸನಲ್ ವಾಹನ ಖರೀದಿಸುವವರಿಗೆ ಈ ತೆರಿಗೆ ವಿನಾಯ್ತಿ  ರಿಜಿಸ್ಟ್ರೇಷನ್ ದಿನಾಂಕದಿಂದ 15 ವರ್ಷಗಳವರೆಗೆ ಅಸ್ತಿತ್ವದಲ್ಲಿರಲಿದೆ

ಇನ್ನು,  ಕೇಂದ್ರ ಸಚಿವ ನಿತೀನ್ ಗಡ್ಕರಿ, ಈ ಸ್ಕ್ರ್ಯಾಪಿಂಗ್ ಪಾಲಸಿ ಜಾರಿಯಾದ ಬಳಿಕ ಹೊಸ ವಾಹನಗಳ ಬೆಲೆ ಶೇಕಡಾ.10ರಷ್ಟು ಇಳಿಕೆಯಾಗಲಿದ್ದು, ದೇಶದಲ್ಲಿ ಹೊಸ ವಾಹನಗಳ ಬೇಡಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಬಹುದು ಎಂದು ಅಂದಾಜಿಸಿದ್ದಾರೆ.

ಓದಿ : ಭಾರತವನ್ನು ಕಾಡುತ್ತಿರುವ ಗಂಭೀರ ಕಾಯಿಲೆ :ಪಿತ್ತಜನಕಾಂಗದ ಕೊಬ್ಬು

Advertisement

Udayavani is now on Telegram. Click here to join our channel and stay updated with the latest news.

Next