Advertisement

ಲಾಕ್‌ಡೌನ್‌ ಬಳಿಕ ವಾಹನ ನೋಂದಣಿ ಚೇತರಿಕೆ

08:54 PM Jul 26, 2021 | Team Udayavani |

ಉಡುಪಿ:   ಜಿಲ್ಲಾದ್ಯಂತ ದ್ವಿಚಕ್ರ ವಾಹನ ಬಳಕೆದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ 6 ತಿಂಗಳುಗಳಲ್ಲಿ ಒಟ್ಟು 7,065 ದ್ವಿಚಕ್ರ ವಾಹನಗಳನ್ನು ನೋಂದಣಿ ಮಾಡಲಾಗಿದ್ದರೆ, 2,631 ಕಾರುಗಳು ನೋಂದಾಯಿಸಲ್ಪಟ್ಟಿವೆ.

Advertisement

ಕಳೆದ ಬಾರಿಯ ಲಾಕ್‌ಡೌನ್‌ ಅವಧಿಯಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದ ಕಾರಣ ಹೆಚ್ಚಿನ ಮಂದಿ ಸ್ವಂತ ವಾಹನ ಹೊಂದುವ ಇಚ್ಛೆಯನ್ನು ಹೊಂದಿದ್ದರು. ಅದರಂತೆ ವಾಹನಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ಕೊರೊನಾ ಅವಧಿಯಲ್ಲಿಯೇ ಹೆಚ್ಚಳ ಕಂಡಿತ್ತು. ಎರಡನೇ ಲಾಕ್‌ಡೌನ್‌ ಅವಧಿಗೂ ಮುನ್ನವೇ ಪ್ರಗತಿ ಕಂಡಿದ್ದ ವಾಹನ ನೋಂದಣಿ ಮೇಯಲ್ಲಿ ಬಹುತೇಕ ಇಳಿಕೆಯಾಗಿತ್ತು. ಈಗ ಮತ್ತೆ ಚೇತರಿಕೆಗೊಂಡು ನೋಂದಣಿ ಆಗುತ್ತಿದೆ.

ಕೋವಿಡ್ ಹಿನ್ನೆಲೆಯಲ್ಲಿ ಜಿÇÉೆಯ ಪ್ರಯಾಣಿಕ ವಾಹನಗಳಾದ ಬಸ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಇತ್ಯಾದಿಗಳು ವಾಹನದ ಮೂಲ ದಾಖಲಾತಿ ಗಳೊಂದಿಗೆ ಕಚೇರಿಗೆ ಸರೆಂಡರ್‌ ಮಾಡಿದ್ದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸಿದ ಬಳಿಕವೇ ವಾಹನ ಉಪಯೋಗಿಸಲು ಸಾಧ್ಯವಿದೆ. ವಾಹನದ ಬಾಕಿ ತೆರಿಗೆ ಪಾವತಿಸದೆ ಅಥವಾ ವಿನಾಯಿತಿ ಪಡೆಯದೆ, ಪೂರ್ವಾನುಮತಿ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಚಲಾಯಿಸಿದಲ್ಲಿ ಕಚೇರಿಯ ವಿಶೇಷ ತಪಾಸಣೆ ಸಂದರ್ಭ ಸಿಕ್ಕಿಬಿದ್ದಲ್ಲಿ ಭಾರೀ ದಂಡದೊಂದಿಗೆ ಉಳಿಕೆ ತೆರಿಗೆ ಕಟ್ಟಬೇಕಾಗುತ್ತದೆ.

ವಾಹನ               ಜನವರಿ             ಫೆಬ್ರವರಿ             ಮಾರ್ಚ್‌             ಎಪ್ರಿಲ್‌ ಮೇ        ಜೂನ್‌ ಒಟ್ಟು

ದ್ವಿಚಕ್ರ 1,278     1,953     1,928     1,376     11           519         7,065

Advertisement

ಕಾರುಗಳು           788         558         599         434         10           242         2631

ಎಲ್‌ಜಿವಿ            60           68           61           40           05           18           252

ಎಂಜಿವಿ              05           07           05           04           01           05           27

ಎಚ್‌ಜಿವಿ            12           12           07           15           16           04           66

ಇತರ    118         133         141         75           03           31           501

ಒಟ್ಟು   2,261     2,731     2,741     1,944     46           819         10,542

ಈ ವರ್ಷಾರಂಭದಿಂದಲೇ ವಾಹನಗಳ ನೋಂದಣಿ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಬಹುತೇಕ ಇಳಿಕೆ ಕಂಡಿದ್ದ ನೋಂದಣಿ ಪ್ರಕ್ರಿಯೆ ಈಗ ಮತ್ತೆ ಯಥಾಸ್ಥಿತಿಗೆ ಮರಳುತ್ತಿದೆ.ಜೆ.ಪಿ.ಗಂಗಾಧರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ 

ತೆರಿಗೆ  ಪಾವತಿ ಕಡ್ಡಾಯ :

ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಯಾಣಿಕ ವಾಹನಗಳಾದ ಬಸ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಇತ್ಯಾದಿಗಳು ವಾಹನದ ಮೂಲ ದಾಖಲಾತಿ ಗಳೊಂದಿಗೆ ಕಚೇರಿಗೆ ಸರೆಂಡರ್‌ ಮಾಡಿದ್ದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸಿದ ಬಳಿಕವೇ ವಾಹನ ಉಪಯೋಗಿಸಲು ಸಾಧ್ಯವಿದೆ. ವಾಹನದ ಬಾಕಿ ತೆರಿಗೆ ಪಾವತಿಸದೆ ಅಥವಾ ವಿನಾಯಿತಿ ಪಡೆಯದೆ, ಪೂರ್ವಾನುಮತಿ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಚಲಾಯಿಸಿದಲ್ಲಿ ಕಚೇರಿಯ ವಿಶೇಷ ತಪಾಸಣೆ ಸಂದರ್ಭ ಸಿಕ್ಕಿಬಿದ್ದಲ್ಲಿ ಭಾರೀ ದಂಡದೊಂದಿಗೆ ಉಳಿಕೆ ತೆರಿಗೆ ಕಟ್ಟಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next