Advertisement
ಕಳೆದ ಬಾರಿಯ ಲಾಕ್‌ಡೌನ್ ಅವಧಿಯಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದ ಕಾರಣ ಹೆಚ್ಚಿನ ಮಂದಿ ಸ್ವಂತ ವಾಹನ ಹೊಂದುವ ಇಚ್ಛೆಯನ್ನು ಹೊಂದಿದ್ದರು. ಅದರಂತೆ ವಾಹನಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ಕೊರೊನಾ ಅವಧಿಯಲ್ಲಿಯೇ ಹೆಚ್ಚಳ ಕಂಡಿತ್ತು. ಎರಡನೇ ಲಾಕ್‌ಡೌನ್ ಅವಧಿಗೂ ಮುನ್ನವೇ ಪ್ರಗತಿ ಕಂಡಿದ್ದ ವಾಹನ ನೋಂದಣಿ ಮೇಯಲ್ಲಿ ಬಹುತೇಕ ಇಳಿಕೆಯಾಗಿತ್ತು. ಈಗ ಮತ್ತೆ ಚೇತರಿಕೆಗೊಂಡು ನೋಂದಣಿ ಆಗುತ್ತಿದೆ.
Related Articles
Advertisement
ಕಾರುಗಳು 788 558 599 434 10 242 2631
ಎಲ್‌ಜಿವಿ 60 68 61 40 05 18 252
ಎಂಜಿವಿ 05 07 05 04 01 05 27
ಎಚ್‌ಜಿವಿ 12 12 07 15 16 04 66
ಇತರ 118 133 141 75 03 31 501
ಒಟ್ಟು 2,261 2,731 2,741 1,944 46 819 10,542
ಈ ವರ್ಷಾರಂಭದಿಂದಲೇ ವಾಹನಗಳ ನೋಂದಣಿ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಬಹುತೇಕ ಇಳಿಕೆ ಕಂಡಿದ್ದ ನೋಂದಣಿ ಪ್ರಕ್ರಿಯೆ ಈಗ ಮತ್ತೆ ಯಥಾಸ್ಥಿತಿಗೆ ಮರಳುತ್ತಿದೆ.–ಜೆ.ಪಿ.ಗಂಗಾಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ
ತೆರಿಗೆ ಪಾವತಿ ಕಡ್ಡಾಯ :
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಯಾಣಿಕ ವಾಹನಗಳಾದ ಬಸ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳು ವಾಹನದ ಮೂಲ ದಾಖಲಾತಿ ಗಳೊಂದಿಗೆ ಕಚೇರಿಗೆ ಸರೆಂಡರ್ ಮಾಡಿದ್ದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸಿದ ಬಳಿಕವೇ ವಾಹನ ಉಪಯೋಗಿಸಲು ಸಾಧ್ಯವಿದೆ. ವಾಹನದ ಬಾಕಿ ತೆರಿಗೆ ಪಾವತಿಸದೆ ಅಥವಾ ವಿನಾಯಿತಿ ಪಡೆಯದೆ, ಪೂರ್ವಾನುಮತಿ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಚಲಾಯಿಸಿದಲ್ಲಿ ಕಚೇರಿಯ ವಿಶೇಷ ತಪಾಸಣೆ ಸಂದರ್ಭ ಸಿಕ್ಕಿಬಿದ್ದಲ್ಲಿ ಭಾರೀ ದಂಡದೊಂದಿಗೆ ಉಳಿಕೆ ತೆರಿಗೆ ಕಟ್ಟಬೇಕಾಗುತ್ತದೆ.