Advertisement

ದಸರಾ, ದೀಪಾವಳಿ: ಹೊಸ ವಾಹನಗಳತ್ತ ಗ್ರಾಹಕರ ಒಲವು

01:55 AM Oct 13, 2021 | Team Udayavani |

ಮಂಗಳೂರು: ರಾಜ್ಯದಲ್ಲಿ ಕೋವಿಡ್‌ 2ನೇ ಅಲೆಯ ಲಾಕ್‌ಡೌನ್‌ ತೆರವುಗೊಂಡ ಬಳಿಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಹನಗಳ ಖರೀದಿಯಲ್ಲಿ ತುಸು ಚೇತರಿಕೆ ಕಂಡು ಬರುತ್ತಿರುವುದು ಆಟೋಮೊಬೈಲ್‌ ಉದ್ಯಮ ಕ್ಷೇತ್ರಕ್ಕೆ ಉತ್ಸಾಹ ತುಂಬಿದೆ.

Advertisement

ಸಾರಿಗೆ ಇಲಾಖೆ ಮಾಹಿತಿ ಪ್ರಕಾರ, ಮೂರು ತಿಂಗಳಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 21,307 ವಾಹನಗಳು ನೋಂದಣಿ ಯಾಗಿವೆ. ಕೋವಿಡ್‌ ಲಾಕ್‌ಡೌನ್‌ ಸೇರಿದಂತೆ ಹಲವು ಕಾರಣದಿಂದ ವಾಹನ ಖರೀದಿಗೆ ಹಿನ್ನೆಡೆಯಾಗಿತ್ತು. ಆದರೆ, ಇದೀಗ ಉಭಯ ಜಿಲ್ಲೆಗಳಲ್ಲೂ ವಾಣಿಜ್ಯ ಚಟು ವಟಿಕೆಗಳು ಸಹಜ ಸ್ಥಿತಿಗೆ ಬರತೊಡಗಿವೆ.

ಬೆಂಗಳೂರು ನಗರ ಹೊರತು ಪಡಿಸಿದರೆ ಇಡೀ ರಾಜ್ಯದಲ್ಲೇ ಅತಿಹೆಚ್ಚು ಹೊಸ ಕಾರುಗಳ ನೋಂದಣಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಾಗುತ್ತಿದೆ. ಇದಕ್ಕೆ ಪೂರಕವಾಗಿ ಹೊಸ ವಾಹನಗಳೂ ಜಿಲ್ಲೆಯಲ್ಲಿ ಹೆಚ್ಚು ಬಿಡುಗಡೆಯಾಗುತ್ತಿದೆ.

ಮಾರುಕಟ್ಟೆ ಪರಿಣಿತರು ಹೇಳು ವಂತೆ, ಕಳೆದ ವರ್ಷದ ಲಾಕ್‌ಡೌನ್‌ಗೆ ಹೋಲಿಸಿದರೆ ಈ ವರ್ಷ ಆಟೋಮೊಬೈಲ್‌ ಮಾರುಕಟ್ಟೆ ಬೆಳವಣಿಗೆ ಶೇ. 20ರಷ್ಟು ಹೆಚ್ಚಿದೆ. ಹಬ್ಬಗಳ ವೇಳೆ ಸಾಮಾನ್ಯವಾಗಿಯೇ ವಾಹನಗಳ ಖರೀದಿ ಇನ್ನಷ್ಟು ಹೆಚ್ಚ ತ್ತದೆ. ತೈಲ ಬೆಲ ಏರಿಕೆಯಾದ ಹಿನ್ನೆಲೆಯಲ್ಲಿ ಎಲೆಕ್ಟ್ರಿಲ್‌ ವಾಹನಗಳು, ಸಿಎನ್‌ಜಿ ವಾಹನಗಳಿಗೂ ಬೇಡಿಕೆ ಬರತೊಡಗಿದೆ. ಗ್ರಾಹಕರಿಗೆ ವಿವಿಧ ಆಫರ್‌ಗಳೂ ಕಂಪೆನಿಗಳಿಂದ ನೀಡಲಾಗುತ್ತಿದೆ ಎನ್ನುತ್ತಾರೆ.

ಭಾರತ್‌ ಆಟೋಕಾರ್ನ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ಹೆಡ್‌ ಡೆನ್ಸಿಸ್‌ ಗೋನ್ಸಾಲ್ವೆಸ್‌ ಅವರ ಪ್ರಕಾರ, “ಬೇರೆ ಉದ್ಯಮಕ್ಕೆ ಹೋಲಿಸಿದರೆ ಆಟೋ ಮೊಬೈಲ್‌ ಕ್ಷೇತ್ರ ಚೇತರಿಕೆ ಯತ್ತ ಸಾಗುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷತೆಗೆ ಒತ್ತು ಕೊಡುತ್ತಿರುವ ಜನರು ಸ್ವಂತ ವಾಹನ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಗ್ರಾಹಕರ ಬಜೆಟ್‌ಗೆ ತಕ್ಕಂತೆ ಆಯ್ಕೆಗಳೂ ಇವೆ’ ಎನ್ನುತ್ತಾರೆ.

Advertisement

ಪೈ ಸೇಲ್ಸ್‌ ಪ್ರೈಲಿ.ನ ನಿರ್ದೇಶಕ ಅರುಣ್‌ ಪೈ ಹೇಳುವಂತೆ, “ದ್ವಿಚಕ್ರ ಮಾರಾಟವೂ ಚೇತರಿಕೆ ಕಾಣುತ್ತಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ವಾಹನಗಳು ಬರುತ್ತಿವೆ. ಕಾಲೇಜು ವಿದ್ಯಾರ್ಥಿಗಳು, ಯುವ ಜನರು ಗೇರ್‌ಲೆಸ್‌ ಗಾಡಿಗಳನ್ನು ಇಷ್ಟ ಪಡುತ್ತಿದ್ದಾರೆ’ ಎಂದು ವಿವರಿಸುತ್ತಾರೆ.

ಇದನ್ನೂ ಓದಿ:ಆರೋಗ್ಯಕ್ಕೆ ಮತ್ತೊಂದು ಕ್ಲೋನ್‌ ಯೋಜನೆ?

ಹಬ್ಬಗಳ ಸೀಸನ್‌ ಮತ್ತಷ್ಟು ನಿರೀಕ್ಷೆ
ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರು ಬಹು ಉತ್ಸಾಹದಿಂದ ವಾಹನ ಖರೀದಿಗೆ ಮುಂದಾಗಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲ. ಕಾರುಗಳಲ್ಲಿ ಉಪಯೋಗಿಸುವ ಸೆಮಿಕಂಡಕ್ಟರ್‌ ಕೊರತೆಯಿಂದಾಗಿ ದೇಶದಲ್ಲಿಯೇ ಕಾರು ಉತ್ಪಾದನೆ ಕುಂಠಿತವಾಗಿದೆ. ಕೊರೊನೋತ್ತರಕ್ಕೆ ಹೋಲಿಕೆ ಮಾಡಿದರೆ ಸದ್ಯ ದ್ವಿಚಕ್ರ, ಕಾರುಗಳಿಗೆ ಬೇಡಿಕೆ ಕಡಿಮೆ ಇದ್ದು, ಚೇತರಿಕೆಯತ್ತ ಸಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ವಾರದಲ್ಲಿ ಸುಮಾರು 500ರಿಂದ 600 ಕಾರುಗಳು ಬುಕ್ಕಿಂಗ್‌ ಆಗುತ್ತಿದ್ದು, ದ್ವಿಚಕ್ರ ವಾಹನ ಖರೀದಿ ಸುಮಾರು 800ರಷ್ಟಿದೆ ಎನ್ನುತ್ತಾರೆ’ ಕಾಂಚನ ಆಟೋಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್‌ ರಾಜ್‌ ಕಾಂಚನ್‌.

ದ.ಕ.; 15,954, ಉಡುಪಿ 7,714 ವಾಹನ
ಜುಲೈ 1ರಿಂದ ಈವರೆಗೆ ದ.ಕ. ಜಿಲ್ಲೆಯ ಮೂರು ಆರ್‌ಟಿಒ ದಲ್ಲಿ 15,954 ವಾಹನ ಮತ್ತು ಉಡುಪಿ ಆರ್‌ಟಿಒದಲ್ಲಿ 7,714 ವಾಹನಗಳು ನೋಂದಣಿಯಾಗಿವೆ. ಕೊರೊನಾ ಮತ್ತು ಲಾಕ್‌ಡೌನ್‌ ಪರಿಣಾಮ ಈ ವರ್ಷಾರಂಭದಿಂದ ಉಭಯ ಜಿಲ್ಲೆಗಳಲ್ಲಿ ವಾಹನ ನೋಂದಣಿ ಇಳಿದಿತ್ತು. ಸೆಪ್ಟಂಬರ್‌ನಲ್ಲಿ ಮಂಗಳೂರಿನಲ್ಲಿ 3,567 ವಾಹನಗಳು, ಬಂಟ್ವಾಳದಲ್ಲಿ 751 ವಾಹನಗಳು, ಪುತ್ತೂರಿನಲ್ಲಿ 1,050 ಮತ್ತು ಉಡುಪಿಯಲ್ಲಿ 2,394 ವಾಹನಗಳು ನೋಂದಣಿಯಾಗಿವೆ.

ಬೈಕ್‌, ಕಾರುಗಳೇ ಅಧಿಕ
ಉಭಯ ಜಿಲ್ಲೆಗಳಲ್ಲಿ ಈ ತಿಂಗಳಿನಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ನೋಂದಣಿಯಾಗಿವೆ. ದ.ಕ. ದಲ್ಲಿ ಸೆಪ್ಟಂಬರ್‌ನಲ್ಲಿ ಒಟ್ಟು 3,726 ದ್ವಿಚಕ್ರ ವಾಹನಗಳು ಮತ್ತು 1,059 ಕಾರುಗಳು ನೋಂದಣಿಯಾಗಿವೆೆ. ಅದರಲ್ಲಿಯೂ ದ.ಕ.ದಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನ ಮತ್ತು ಕಾರುಗಳು ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ ನೋಂದಣಿಯಾಗಿವೆ. ಮಂಗಳೂರಿನಲ್ಲಿ 2499 ದ್ವಿಚಕ್ರ ವಾಹನ, 791 ಕಾರುಗಳು, ಪುತ್ತೂರಿನಲ್ಲಿ 711 ದ್ವಿಚಕ್ರ ವಾಹನ, 199 ಕಾರುಗಳು, ಬಂಟ್ವಾಳದಲ್ಲಿ 69 ಕಾರುಗಳು, 516 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆೆ. ಇನ್ನು, ಉಡುಪಿ ಜಿಲ್ಲೆಯಲ್ಲಿ 1,547 ದ್ವಿಚಕ್ರ ವಾಹನಗಳು 569 ಕಾರುಗಳು ನೋಂದಣಿಯಾಗಿವೆ.

ಯೂಸ್ಡ್ ಕಾರುಗಳಿಗೂ ಬೇಡಿಕೆ
“ಇತ್ತೀಚಿನ ದಿನಗಳಲ್ಲಿ ಯೂಸ್ಡ್ ಕಾರುಗಳಿಗೆ (ಸೆಕೆಂಡ್‌ ಹ್ಯಾಂಡ್‌) ಬೇಡಿಕೆ ಬರಲು ಆರಂಭವಾಗಿದೆ. ಕೊರೊನಾ ತೀವ್ರತೆ ವೇಳೆ ಹೆಚ್ಚಿನ ಮಂದಿ ಸ್ವಂತ ವಾಹನ ಬಳಕೆಗೆ ಉತ್ಸುಕರಾಗಿದ್ದರು. ಆ ವೇಳೆ ಸುಮಾರು 3ರಿಂದ 4 ಲಕ್ಷ ರೂ. ವರೆಗಿನ ಕಾರುಗಳಿಗೆ ಬೇಡಿಕೆ ಹೆಚ್ಚಿತ್ತು. ಬ್ಯಾಂಕ್‌ಗಳಿಂದಲೂ ಸಾಲ ಸಿಗುತ್ತಿರುವ ಕಾರಣ ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಬೇಡಿಕೆ ಇದೆ’ ಎನ್ನುತ್ತಾರೆ ಯೂಸ್ಡ್ ವೆಹಿಕಲ್‌ ಡೀಲರ್ ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಮುನೀರ್‌ ಅಹ್ಮದ್‌.

ವಾಹನ ಖರೀದಿಯಲ್ಲಿ ಹೆಚ್ಚಳ
ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ಗೆ ಹೋಲಿಕೆ ಮಾಡಿದರೆ ಈ ವರ್ಷ ವಾಹನ ಖರೀದಿ ಶೇ. 20ರಿಂದ 25ರಷ್ಟು ಹೆಚ್ಚಾಗಿದೆ. ಮುಂದಿನ ದಿನ ಗಳಲ್ಲಿ ಹಬ್ಬಗಳ ಸರದಿಯಲ್ಲಿ ಮಾಮೂಲಿ ಯಾಗಿ ವಾಹನ ಖರೀದಿ ಹೆಚ್ಚಾ ಗಿರುತ್ತದೆ. ಹೀಗಾಗಿ ಈ ವರ್ಷಾಂತ್ಯದ ವರೆಗೆ ವಾಹನ ಖರೀದಿ ಇದೇ ರೀತಿ ಮುಂದು ವರೆಯುವ ಸಾಧ್ಯತೆ ಇದೆ.
– ಆರ್‌. ವರ್ಣೇಕರ್‌,
ಮಂಗಳೂರು ಆರ್‌ಟಿಒ

Advertisement

Udayavani is now on Telegram. Click here to join our channel and stay updated with the latest news.

Next