Advertisement

Mahbubnagar; ಮರಕ್ಕೆ ಕಾರು ಡಿಕ್ಕಿ; ಮದುವೆಯಾಗಿ ವಾರದೊಳಗೆ ಮಾವ- ಅಳಿಯ ಬಲಿ

09:05 AM Feb 22, 2024 | Team Udayavani |

ಹೈದರಾಬಾದ್: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿ ಮೂವರು ಮೃತಪಟ್ಟ ಘಟನೆ ತೆಲಂಗಾಣ ರಾಜ್ಯದ ಮೆಹಬೂಬ್ ನಗರದಲ್ಲಿ ಬುಧವಾರ ನಡೆದಿದೆ.

Advertisement

ಅಪಘಾತದಲ್ಲಿ ಮೃತಪಟ್ಟವರು ನಂದ್ಯಾಲ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ವೆಂಕಟರಮಣ (57), ಅವರ ಅಳಿಯ ಪವನ್ ಸಾಯಿ (25), ಚಾಲಕ ಚಂದ್ರು (23) ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಎಸ್‌ಐ ವೆಂಕಟರಮಣ ಅವರ ಪುತ್ರಿ ಅನುಷಾ ಅವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮೆಹಬೂಬ್‌ ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೆಬ್ರವರಿ 15 ರಂದು ಅನುಷಾ ಮತ್ತು ಪವನ್ ಸಾಯಿ ವಿವಾಹವಾಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಈ ಅಪಘಾತ ಸಂಭವಿಸಿದೆ.

ಕುಟುಂಬವು ಹೈದರಾಬಾದ್‌ ನಿಂದ ಅನಂತಪುರಕ್ಕೆ ತೆರಳುತ್ತಿತ್ತು, ಅಲ್ಲಿ ಅವರು ಪವನ್ ಸಾಯಿ ಅವರ ನಿವಾಸದಲ್ಲಿ ಔತಣಕೂಟದಲ್ಲಿ ಭಾಗವಹಿಸಿದ್ದರು. ಅವರ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಅಣ್ಣಾಸಾಗರ್ ಪ್ರದೇಶವನ್ನು ತಲುಪಿದಾಗ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next