Advertisement

ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

09:21 AM Sep 26, 2022 | Team Udayavani |

ಕುಲು: ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದು ಏಳು ಪ್ರವಾಸಿಗರು ಮೃತಪಟ್ಟು ಹತ್ತು ಮಂದಿ ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಬಂಜಾರ್ ಉಪವಿಭಾಗದ ಘಿಯಾಘಿ ಬಳಿ ಅಪಘಾತ ಸಂಭವಿಸಿದೆ.

Advertisement

“ಕುಲುವಿನ ಬಂಜಾರ್ ಕಣಿವೆಯ ಘಿಯಾಘಿ ಪ್ರದೇಶದಲ್ಲಿ ಭಾನುವಾರ ರಾತ್ರಿ 8:30 ಕ್ಕೆ ಪ್ರವಾಸಿ ವಾಹನವು ಬೆಟ್ಟದಿಂದ ಕೆಳಕ್ಕೆ ಉರುಳಿದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ಐವರು ಗಾಯಾಳುಗಳನ್ನು ಕುಲು ವಲಯದ ಆಸ್ಪತ್ರೆಗೆ, ಉಳಿದ ಐದು ಜನರನ್ನು ಬಂಜಾರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ” ಎಂದು ಗುರುದೇವ್ ಸಿಂಗ್ ಎಸ್‌ಪಿ ಕುಲು ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಕುಣಿಗಲ್: ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಬಂಜಾರ್‌ನ ಬಿಜೆಪಿ ಶಾಸಕ ಸುರೇಂದರ್ ಶೌರಿ ಅವರು ರಾತ್ರಿ 12.45 ರ ಸುಮಾರಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಫೇಸ್‌ಬುಕ್ ಲೈವ್‌ನಲ್ಲಿ ಮಾಡುವ ಮೂಲಕ ಅಪಘಾತದ ಬಗ್ಗೆ ಮಾಹಿತಿ ನೀಡಿದರು.

ಬಲಿಯಾದವರು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳವರಾಗಿದ್ದು, ಅವರನ್ನು ಗುರುತಿಸಲಾಗುತ್ತಿದೆ ಎಂದು ಬಂಜಾರ್ ಶಾಸಕರು ತಿಳಿಸಿದ್ದಾರೆ. ಕತ್ತಲೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಮತ್ತು ಸ್ಥಳೀಯರಿಗೆ ಶೌರಿ ಧನ್ಯವಾದ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next