Advertisement

ಎಳ್ಳ ಅಮಾವಾಸ್ಯೆಗೆ ತರಕಾರಿ ತುಟ್ಟಿ

08:45 AM Jan 04, 2019 | |

ಬಸವಕಲ್ಯಾಣ: ಹೊಸ ವರ್ಷದ ಮೊದಲನೆಯ ಹಬ್ಬವಾದ ಎಳ್ಳ ಅಮಾವಾಸ್ಯೆ ಬಂದರೆ ಸಾಕು ಪಟ್ಟಣದ ಜನತೆ ಹಾಗೂ
ರೈತರಿಗೆ ಬಾಯಿಗೆ ನೀರು ಬರುವಂತೆ ಮಾಡುತ್ತದೆ. ಸಜ್ಜಿ ರೊಟ್ಟಿ ಹಾಗೂ ವಿವಿಧ ತರಕಾರಿ ಬೆರೆಸಿ ತಯಾರಿಸುವ ಭಜ್ಜಿ
(ಪಲ್ಯ) ಊಟ ಮಾಡುವುದು ಹಬ್ಬದ ವಿಶೇಷವಾಗಿದೆ.

Advertisement

ಆದರೆ, ಬರ ಆವರಿಸಿಕೊಂಡ ಹಿನ್ನೆಲೆಯಲ್ಲಿ ಬೇಕಾಗುವಷ್ಟ ತರಕಾರಿ ಮಾರುಕಟ್ಟೆಯಲ್ಲಿ ಬಂದಿಲ್ಲ. ಹಾಗಾಗಿ ಪಕ್ಕದ ಆಂಧ್ರ ಹಾಗೂ ತೆಲಂಗಾಣದಿಂದ ತರಕಾರಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ತರಕಾರಿ ಬೆಲೆ ದುಬಾರಿಯಾಗಿದ್ದು, ಸಾರ್ವಜನಿಕರು ತರಕಾರಿಯನ್ನು ಚೌಕಾಸಿ ಮಾಡಿ ಖರೀದಿ ಮಾಡುವುದು ಹಬ್ಬದ ಮುನ್ನದಿನವಾದ ಗುರುವಾರ ಕಂಡುಬಂತು.

ಜಾತಿ ಮತ ಪಂಥ ಎನ್ನದೇ ನಗರ ಸೇರಿದಂತೆ, ಹೊಲದ ಅಕ್ಕಪಕ್ಕದ ಆತ್ಮೀಯರಿಗೆ ಆಹ್ವಾನಿಸಿ ಊಟ ಮಾಡಿಸುವುದೇ ಹಬ್ಬದ ಮತ್ತೂಂದು ವಿಶೇಷವಾಗಿದೆ. ಹಾಗಾಗಿ ಬಜ್ಜಿ ತಯಾರಿಸಲು ಬೇಕಾದ ತರಕಾರಿಯನ್ನು ಖರೀದಿ ಮಾಡುವಾಗ ಸಾರ್ವಜನಿಕರು ಮಾತ್ರ ತಮ್ಮ ಜೇಬಿನ ಕಡೆ ನೋಡಿಕೊಂಡು ಒಂದು ಕೆಜಿ ಅವಶ್ಯಕತೆ ಇದ್ದಲ್ಲಿ, ಅರ್ಧ ಕೆಜಿ ಹಾಗೂ ಪಾವು ಕೆಜಿ ಖರೀದಿ ಮಾಡಿದರು. 

ಬದನೆಕಾಯಿ-60ರಿಂದ 80, ಮೆಂತೆ-50-ರಿಂದ60, ಚಾಕೋತಿ-60ರಿಂದ 70, ಹಸೆ ಹುಣಸಿನಕಾಯಿ-50, ಔರೆಕಾಯಿ 60, ಬೀಸ್‌-60, ಮೂಲಂಗಿ-60, ಬಟಾನಿ-50 ರೂ. ಸೇರಿದಂತೆ ಹಣ್ಣುಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷಕ್ಕೆ ತರಕಾರಿ ಸೇರಿದಂತೆ ಪ್ರತಿಯೊಂದರ ಬೆಲೆ ಹೆಚ್ಚಳವಾಗಿದೆ. ಆದ್ದರಿಂದ ಗ್ರಾಹಕರು ಬೇಕಾಗುವಷ್ಟು ತರಕಾರಿ ಖರೀದಿ ಮಾಡುವುದಕ್ಕೂ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ತರಕಾರಿ ಅಂಗಡಿ ಮಾಲೀಕ ಈರ್ಫಾನ್‌ ಮಾಹಿತಿ ನೀಡಿದರು. ಒಟ್ಟಿನಲ್ಲಿ ಬರದ ಛಾಯೆ ಮಾತ್ರ ಎಳ್ಳ ಅಮವಾಸ್ಯೆ ಹಬ್ಬಕ್ಕೆ ಬೇಕಾಗುವ ತರಕಾರಿ ಬೆಲೆ ಪರಿಣಾಮ ಬೀರಿದೆ.

Advertisement

ಈ ವರ್ಷ ಮಳೆ ಚನ್ನಾಗಿ ಬಂದಿಲ್ಲ. ಇದರಿಂದ ತರಕಾರಿ ಬೆಲೆಗಳಲ್ಲಿ ಸ್ವಲ್ಪ ಏರಿಕೆಯಾಗಿದೆ. ಇದರಿಂದ ಸಾರ್ವಜನಿಕರು ತರಕಾರಿ ಖರೀದಿ ಮಾಡುವಾಗ ಸ್ವಲ್ಪ ಯೋಚನೆ ಮಾಡುವಂತೆ ಆಗಿದೆ.  ಇರ್ಫಾನ್‌ ತರಕಾರಿ ಅಂಗಡಿ ಮಾಲೀಕ

„ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next