Advertisement

ತರಕಾರಿ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

04:15 PM May 16, 2022 | Team Udayavani |

ದೇವನಹಳ್ಳಿ: ಜಿಲ್ಲಾದ್ಯಂತ ವಿವಿಧ ಕಡೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ತರಕಾರಿಬೆಲೆಗಳಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

Advertisement

ಈಗಾಗಲೇ ಅಡುಗೆ ಅನಿಲ, ಖಾದ್ಯತೈಲ, ಬೇಳೆ ಕಾಳುಗಳು, ಪೆಟ್ರೋಲ್‌, ಡೀಸೆಲ್‌ ಬೆಲೆಏರಿಕೆಯಾಗಿದೆ. ಈಗ ತರಕಾರಿಗಳ ಬೆಲೆ ಹೆಚ್ಚಳಜನಸಾಮಾನ್ಯರ ಮೇಲೆ ಭಾರೀಪರಿಣಾಮ ಬೀರಿದೆ. ಅಕಾಲಿಕಮಳೆಯಿಂದ ಫ‌ಸಲು ನಾಶ ಹಾಗೂಹೆಚ್ಚಿನ ತಾಪಮಾನ ದಿಂದ ನಿರೀಕ್ಷಿತಬೆಳೆ ಕೈಸೇರದ ಹಿನ್ನೆಲೆ ಬೆಲೆಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಅಕಾಲಿಕ ಮಳೆ ನಿಲ್ಲದಿದ್ದರೆಇನ್ನು ಬೆಲೆ ಏರಿಕೆಯಾಗಬಹುದುಎಂದು ಹೇಳಲಾಗುತ್ತಿದೆಮದುವೆ, ಶುಭ ಸಮಾರಂಭ,ನಾಮಕರಣ, ಮನೆ ಗೃಹಪ್ರವೇಶ,ಬಂಡಿದ್ಯಾವರು, ಜಾತ್ರೆ, ಇತರೆಸಮಾರಂಭಗಳ ನಡುವೆಯೇ ದಿಢೀರ್‌ ಬೆಲೆ ಏರಿಕೆ ಜನರನ್ನು ಕಂಗೆಡಿಸಿದೆ.

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಗುತ್ತಿದೆ. ಇದೀಗತರಕಾರಿ, ಹಣ್ಣುಗಳ ಬೆಲೆ ಏರಿಕೆ ಗ್ರಾಹಕರಕೈಸುಡುತ್ತಿದೆ. ಮಾರುಕಟ್ಟೆಯಲ್ಲಿನ ತರಕಾರಿ ಬೆಲೆಗಿಂತ ಹೆಚ್ಚಿನ ದರ ನೀಡಿ ತರಕಾರಿಖರೀದಿಸಬೇಕಾಗಿದೆ. ಇನ್ನು ಮಳೆಯಿಂದ ಬೆಲೆ ಹೆಚ್ಚು ನೀಡಿದರೂ, ಗುಣಮಟ್ಟದ ತರಕಾರಿ ಗ್ರಾಹಕರಿಗೆ ಸಿಗುತ್ತಿಲ್ಲ.

ಮೋಡ ಕವಿದ ವಾತಾವರಣ: ಕಳೆದ ಒಂದು ತಿಂಗಳಿಂದ ಬೇಸಿಗೆ ಬಿಸಿಲಿನ ತಾಪಕ್ಕೆ ಜನರುಹೈರಾ ಣಾಗಿದ್ದಾರೆ. ಇದೀಗ ಅಬ್ಬರಿಸಲು ಮಳೆರಾಯ ಶುರು ಮಾಡಿದ್ದಾನೆ. ಇದರ ಜತೆಗೆಕಳೆದೆರಡು ದಿನಗಳಿಂದ ಮೋಡ ಕವಿದವಾತಾವರಣ ಮುಂದುವರಿದಿದೆ. ಜತೆಗೆಕೆಲದಿನಗಳು ದಿಢೀರ್‌ ಮಳೆಯಾಗುತ್ತಿದ್ದು,ತರಕಾರಿ ಫ‌ಸಲು ಕುಸಿತ ಕಂಡಿದೆ. ಇದೀಗತರಕಾರಿಗಳಿಗೆ ಬೇಡಿಕೆ ಇದ್ದರೂ ಪೂರೈಕೆ ಕುಸಿತಕಂಡಿದೆ. ಕಳೆದ ದಿನಗಳಿಂದ ಜಿಲ್ಲೆಯಲ್ಲಿಮಳೆರಾಯ ಅವಾಂತರ ಸೃಷ್ಟಿಸಿದ್ದು, ಒಂದೆಡೆತೋಟಗಾರಿಕೆ ಬೆಳೆ ಮಳೆಗೆ ಸಿಲುಕಿ ಹಾನಿಗೊಳಗಾದರೆ, ಮತೊಂದೆಡೆ ಮಳೆ ಜಿಲ್ಲೆಯಲ್ಲಿಮುಂದುವರಿಯುತ್ತಿರುವ ಪರಿಣಾಮ ಕೃಷಿ ಕ್ಷೇತ್ರಕ್ಕೆಹೊಡೆತ ನೀಡುವ ಜತೆಗೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.

Advertisement

ವಿವಿಧ ತರಕಾರಿ ಬೆಲೆ: ಟೊಮೊಟೋ 80 ರೂ.,ಬದನೆಕಾಯಿ 40 ರೂ., ಮೂಲಂಗಿ 40 ರೂ.,ಹಾಗಲಕಾಯಿ 40 ರೂ., ಹೀರೆಕಾಯಿ 40 ರೂ.,ಹುರುಳಿಕಾಯಿ 100 ರೂ., ಪಡವಲಕಾಯಿ 60ರೂ., ಸೋರೆಕಾಯಿ 60 ರೂ., ಮೆಣಸಿನಕಾಯಿ40 ರೂ., ಕ್ಯಾರೆಟ್‌ 40 ರೂ., ಬಟಾಣಿ 200 ರೂ.,ನುಗ್ಗೆಕಾಯಿ 80 ರೂ., ಬೆಂಡೆಕಾಯಿ 40 ರೂ.,ಎಲೆಕೋಸು 30ರೂ., ಗಡ್ಡೆಕೋಸು 30 ರೂ.,ಶುಂಠಿ 40 ರೂ., ಬೆಳ್ಳುಳ್ಳಿ 80 ರೂ., ಒಂದು ಕಟ್ಟುಕೊತ್ತಂಬರಿ ಸೊಪ್ಪು 40ರಿಂದ 50ರೂ.,ದಂಟಿನಸೊಪ್ಪು 20 ರೂ., ಸಬ್ಬಕ್ಕಿ ಸೊಪ್ಪು 30ರೂಪಾಯಿ ಹೀಗೆ ಮಾರುಕಟ್ಟೆಯಲ್ಲಿ ವಿವಿಧ ಬೆಲೆಗೆ ಮಾರಾಟವಾಗುತ್ತಿವೆ.

ಟೊಮೊಟೋ ಭಾರೀ ದುಬಾರಿ :  ಜಿಲ್ಲೆಯಲ್ಲಿ ಮಳೆಯಿಂದ ತರಕಾರಿ ಬೆಳೆಗಳು ನೆಲಕಚ್ಚಿದೆ.ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರಭಾಗದಲ್ಲಿ ಬೆಳೆಯಲಾಗುವ ಟೊಮೊಟೋಗೆ ಎಲ್ಲೆಡೆ ಬೇಡಿಕೆಹೆಚ್ಚಿದೆ. ಮಳೆಗೆ ಸಿಲುಕಿ ಕೆಲವೆಡೆ ಬೆಳೆ ನಾಶವಾಗಿದ್ದು, ಪೂರೈಕೆಕುಸಿತ ಕಂಡಿದೆ. ಇದರಿಂದ ಟೊಮೊಟೋ ದರ ಏರಿಕೆಯಾಗಿತ್ತು. ಇದೀಗ ಮಳೆ ಕಡಿಮೆಯಾದರೂ, ಟೊಮೊಟೋ ದರ ಮಾತ್ರ ಏರಿಕೆಯಾಗುತ್ತಲೇ ಇದೆ. ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಟೊಮೊಟೋ ಬರುತ್ತಿಲ್ಲ.ಗುಣಮಟ್ಟದ ಟೊಮೊಟೋ ಕೆ.ಜಿ.ಗೆ 80 ರೂಪಾಯಿ ನೀಡಬೇಕಾಗಿದೆ.

ಮಳೆಯಿಂದ ಮಾರುಕಟ್ಟೆಗಳಿಗೆ ನಿಗದಿತ ಸಮಯಕ್ಕೆ ತರಕಾರಿ ಬರುತ್ತಿಲ್ಲ. ಇದರಿಂದ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಪ್ರತಿನಿತ್ಯ ಮಾರುಕಟ್ಟೆಗೆಹೋಗಿ ತರಕಾರಿ ತೆಗೆದುಕೊಂಡು ಬರುತ್ತಿದ್ದೇವೆ.ಪೆಟ್ರೋಲ್‌, ಡೀಸೆಲ್‌ ಹೆಚ್ಚಾಗಿರುವುದರಿಂದ ಸಾಗಾಣಿಕೆ ವೆಚ್ಚವೂ ದುಬಾರಿಯಾಗಿದೆ. – ಆನಂದ್‌, ತರಕಾರಿ ವ್ಯಾಪಾರಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಬೆಲೆಯೂ ಗಗನಕ್ಕೇರಿದೆ. ಎಷ್ಟೇ ಬೆಲೆಯಾ ದರೂ ತರಕಾರಿ ಮತ್ತು ಅಗತ್ಯವಸ್ತುಗಳನ್ನುಖರೀದಿಸಬೇಕು. ಬೆಲೆ ಹೆಚ್ಚಾದೂ ಅನಿವಾರ್ಯವಾಗಿ ಖರೀದಿಸಲೇ ಬೇಕು. ಮಳೆಯಿಂದತರಕಾರಿ, ಇತರೆ ವಸ್ತುಗಳ ಬೆಲೆ ಹೆಚ್ಚಳವಾಗಿದೆ. – ಅಶ್ವಿ‌ನಿ, ಗ್ರಾಹಕಿ

ಮಳೆ ಪ್ರಮಾಣ ಹೆಚ್ಚಾದ ಪರಿಣಾಮ ಬೆಳೆಗೆ ತೇವಾಂಶ ಹೆಚ್ಚಳವಾಗಿ ಫ‌ಸಲುನಾಶವಾಗುತ್ತಿದೆ. ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆಹೆಚ್ಚಳವಾದರೂ, ರೈತರಿಗೆ ಕಡಿಮೆ ದರದಲ್ಲಿತೆಗೆದುಕೊಂಡು ಹೋಗುತ್ತಾರೆ. ಸಾಲ ಮಾಡಿ ತರಕಾರಿ ಬೆಳೆ ಬೆಳೆಯುತ್ತಿದ್ದೇವೆ. – ಶ್ರೀನಿವಾಸ್‌, ರೈತ

– ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next