Advertisement

ಮನೆಯಲ್ಲೇ ಸುಲಭವಾಗಿ ತಯಾರಿಸಿ ಯಮ್ಮಿ…ಯಮ್ಮಿ.. ವೆಜ್ ಮೋಮೋಸ್

05:06 PM Aug 12, 2022 | ಶ್ರೀರಾಮ್ ನಾಯಕ್ |

ಮೋಮೋಸ್‌ ಭಕ್ಷ್ಯವು ಮೂಲತಃ ಟಿಬೆಟ್ ಹಾಗೂ ನೇಪಾಳ ದೇಶಗಳದ್ದಾಗಿದ್ದರೂ, ಇದು ಜಗತ್ತಿನಾದ್ಯ೦ತ ಜನಪ್ರಿಯತೆಗಳಿಸಿಕೊ೦ಡಿದೆ ಎಂದರೆ ತಪ್ಪಾಗುವುದಿಲ್ಲ. ಈಗಂತೂ ಭಾರತದಲ್ಲಿಯೂ ಕೂಡ ಈ ಮೋಮೋಸ್‌ ಎ೦ಬ ಭಕ್ಷ್ಯವು ಬಹಳ ಜನಪ್ರಿಯವಾಗಿದೆ..ಅದರಲ್ಲೂ ಮೋಮೋಸ್‌ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಮಕ್ಕಳಿಂದ ದೊಡ್ಡವರ ತನಕ ಇಷ್ಟ ಪಡುವ ತಿನಿಸಾಗಿದೆ .ಇದರಲ್ಲಿ ವೆಜ್ ಹಾಗೂ ನಾನ್ ವೆಜ್ ಕೂಡ ಮಾಡಬಹುದಾಗಿದೆ .ಇದು ಅಸ್ಸಾಂ ,ಮಹಾರಾಷ್ಟ್ರ, ಸಿಕ್ಕಿಂ, ಅರುಣಾಚಲ ಪ್ರದೇಶದಂತಹ ರಾಜ್ಯ ಗಳಲ್ಲಿ ಇದು ಜನಪ್ರಿಯ ಭಕ್ಷ್ಯವಾಗಿದೆ .

Advertisement

ಸಾಮಾನ್ಯವಾಗಿ ಈ ಮೋಮೋಸ್‌ ಖಾದ್ಯ ವು ತಿನ್ನಲು ತುಂಬಾನೇ ಮೃದು ಹಾಗೂ ರುಚಿಕರ. ಬಹುತೇಕ ಮಂದಿ ಇದನ್ನು ಮೈದಾದಿಂದ ತಯಾರಿಸುತ್ತಾರೆ.ಮೋಮೋಸ್‌ಯಿಂದ ಬಗೆಬಗೆಯ ತಿಂಡಿ-ತಿನಿಸುಗಳನ್ನು ಮಾಡಬಹುದಾಗಿದೆ ಆದರೆ ನಾವು ಇಂದು ನಿಮಗಾಗಿ “ವೆಜ್ ಟೇಬಲ್ ಮೋಮೋಸ್‌” ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ….

ಬೇಕಾಗುವ ಸಾಮಗ್ರಿಗಳು
ಮೈದಾ 1 ಕಪ್ ,ಕ್ಯಾರೆಟ್ 1/2 ಕಪ್, ಕ್ಯಾಬೇಜ್ 1/2 ಕಪ್, ಈರುಳ್ಳಿ 2, ಎಣ್ಣೆ 8 ಚಮಚ, ಶುಂಠಿ ಸ್ವಲ್ಪ, ಹಸಿ ಮೆಣಸು 2, ಕೊತ್ತಂಬರಿ ಸೊಪ್ಪು ಸ್ವಲ್ಪ,ಕಾಳು ಮೆಣಸಿನ ಪುಡಿ 1/4 ಚಮಚ, ಸಣ್ಣ ಗಾತ್ರದ ಲಿಂಬೆ 1, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಒಂದು ಬೌಲ್ ಗೆ ಮೈದಾ ಮತ್ತು ಉಪ್ಪನ್ನು ಸೇರಿಸಿ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಎಣ್ಣೆಯನ್ನು ಸವರಿ ಚೆನ್ನಾಗಿ ಮೃದು ಮಾಡಿಕೊಳ್ಳಿ ತದನಂತರ 20 ನಿಮಿಷಗಳ ಕಾಲ ಹಾಗೇ ಬಿಡಿ .

ತುರಿದ ಕ್ಯಾಬೇಜ್ ,ಕ್ಯಾರೆಟ್ ಹಾಗೂ ಸಣ್ಣದಾಗಿ ಹಚ್ಚಿಕೊಂಡ ಈರುಳ್ಳಿಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ತರಕಾರಿಯಲ್ಲಿ ನೀರಿನ ಅಂಶವಿರುವುದರಿಂದ ಕಾಟನ್ ಬಟ್ಟೆಯಿಂದ ನೀರಿನ ಅಂಶವನ್ನು ತೆಗೆಯಬೇಕು . ನಂತರ ಒಂದು ಬೌಲ್ ಗೆ ಆ ತರಕಾರಿಗಳನ್ನೆಲ್ಲಾ ಹಾಕಿ ನಂತರ ಅದಕ್ಕೆ ಕಾಳು ಮೆಣಸಿನ ಪುಡಿ ,ಕೊತ್ತಂಬರಿ ಸೊಪ್ಪು, ಲಿಂಬೆ ರಸ ,ಹಾಗೂ ಎಣ್ಣೆವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ .

Advertisement

ನಂತರ ಕಲಸಿ ಇಟ್ಟುಕೊಂಡಂತಹ ಮೈದಾ ಹಿಟ್ಟನ್ನು ಸಣ್ಣ -ಸಣ್ಣ ಪೂರಿ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ತದನಂತರ ಲಟ್ಟಿಸಿಕೊಂಡ ಹಿಟ್ಟಿನ ಒಳಗೆ ಕಲಸಿ ಇಟ್ಟ ತರಕಾರಿ ಮಿಶ್ರಣವನ್ನು ಹಾಕಿಕೊಂಡು ಮೋದಕವನ್ನು ಮಡಚುವ ರೀತಿಯಲ್ಲಿ ಮಡಚಿಕೊಳ್ಳಬೇಕು ನಂತರ ಮೋಮೋಸ್‌ ನ್ನು ಹಬೆಯಲ್ಲಿ 15ನಿಮಿಷಗಳ ಕಾಲ ಬೇಯಿಸಿರಿ. ಈಗ ಬಿಸಿ ಬಿಸಿಯಾದ ವೆಜ್  ಮೋಮೋಸ್‌ ನ್ನು ಕೆಂಪು ಚಟ್ನಿ ಜೊತೆ ಸವಿಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next