Advertisement

ವೀರಶೈವ-ಲಿಂಗಾಯತ ಬೇರೆಯಲ್ಲ: ಶ್ರೀಶೈಲ ಶ್ರೀ

12:50 PM Aug 29, 2017 | |

ವಿಜಯಪುರ: ವೀರಶೈವ, ಲಿಂಗಾಯತ ಎರಡೂ ಒಂಂದೇ ಆಗಿದ್ದು, ಬೇರೆ ಬೇರೆ ಎಂದು ಕೆಲವರು ಮಾಡುತ್ತಿರುವ ಗೊಂದಲ ಸರಿಯಲ್ಲ ಎಂದು ಪಂಚಪೀಠಗಳ ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಶ್ರೀಗಳು ಹೇಳಿದರು. ವಿಜಯಪುರ ಜಿಲ್ಲೆ ಬಬಲೇಶ್ವರ ಗ್ರಾಮದ ಗುರುಪಾದೇಶ್ವರ ಮಠದ ಆವರಣದಲ್ಲಿ ನಡೆದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾಣದ ಕೈಗಳು ಸ್ವಾರ್ಥ ಹಾಗೂ ಪ್ರಚಾರಕ್ಕಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ. ವೀರಶೈವ, ಲಿಂಗಾಯತ ಬೇರೆ ಬೇರೆ ಎಂಬ ವಿಚಾರಗಳನ್ನು ಜನರಲ್ಲಿ ಬಿತ್ತುತ್ತಿದ್ದಾರೆ, ಜನರು ಈ ಬಗ್ಗೆ ಗೊಂದಲ ತಾಳಬಾರದು, ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂದರು. ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ದೇಶಿಕೇಂದ್ರ ಶಿವಾಚಾರ್ಯರು ಆಶೀವರ್ಚನ ನೀಡಿ, ನಾಡಿನ ತುಂಬ ಒಳ್ಳೆಯ ಮಳೆ ಬೆಳೆಯಾಗಿ ಸಮೃದ್ಧವಾಗಲಿ, ಯುವಕರು ಸನ್ಮಾರ್ಗದತ್ತ ಹೆಜ್ಜೆಹಾಕಿ ನಾಡು ಕಟ್ಟುವ ಕೆಲಸದಲ್ಲಿ ಭಾಗಿಯಾಗಲಿ ಎಂದು ಹಾರೈಸಿದರು. ಧರ್ಮ ಸನ್ಮಾರ್ಗದತ್ತ
ನಡೆಸುತ್ತದೆ, ಧರ್ಮ ಬೆಳಕು ಚೆಲ್ಲಬೇಕು ಹೊರತಾಗಿ ದಾರಿತಪ್ಪಿಸಬಾರದು. ಸರಿಯಾದ ದಾರಿ ಮತ್ತು ಶಿಕ್ಷಣ
ಮನುಷ್ಯನಿಗೆ ಮುಖ್ಯ ಆದಾರಿ ತೊರಿಸುವವನೆ ಗುರು ಎಂದರು. ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯರು
ಆಶೀರ್ವಚನ ನೀಡಿದರು. ನಂತರ ಉಜ್ಜಯಿನಿ ಶ್ರೀ, ಶ್ರೀಶೈಲ ಮತ್ತು ಕಾಶಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು. ಸಕಲ ಕಲಾ ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ಗುರುಪಾದೇಶ್ವರ ಬೃಹನ್ಮಠದ ಉತ್ತರಾಧಿಕಾರಿ ಗುರುಬಸವ ದೇವರ ಪುರ-ಪ್ರವೇಶ ಸಹ ವೈಭವದಿಂದ ನಡೆಯಿತು. ಬಬಲೇಶ್ವರ ಬೃಹನ್ಮಠದ ಹಾಲಿ ಪೀಠಾಧಿಪತಿ ಡಾ|ಮಹಾದೇವ ಶ್ರೀಗಳು, ಬೆಂಗಳೂರು ವಿಭೂತಿಪುರ ಮಠದ ಮಹಾಂತಲಿಂಗ ಶ್ರೀಗಳು, ನಿಡಗುಂದಿ ರುದ್ರಮುನಿ ಶ್ರೀಗಳು, ಗಿರಿಸಾಗರ, ರುದ್ರಮುನಿ ಶ್ರೀಗಳು, ನಾಗಠಾಣದ ಚನ್ನಮಲ್ಲಿಕಾರ್ಜುನ ಶ್ರೀಗಳು, ಬಸವನಬಾಗೇವಾಡಿಯ ಶಿವಪ್ರಕಾಶ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಿಎಂ ಜಗದೀಶ ಶೆಟ್ಟರ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಸಚಿವ ಸಿದ್ದು ಸವದಿ, ವಿಜುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಜಿಪಂ ಸದಸ್ಯ ಉಮೇಶ ಕೋಳಕೂರ, ವಿ.ಎನ್‌. ಬಿರಾದಾರ, ವಿ.ಎಸ್‌. ಪಾಟೀಲ, ಮಹಾದೇವಪ್ಪ ಕೋಕರೆ, ಜಿಪಂ ಮಾಜಿ ಸದಸ್ಯ ಮಲ್ಲು ಕನ್ನೂರ, ಮಲ್ಲು ಜಂಗಮಶೆಟ್ಟಿ ಇದ್ದರು. ಮಹಾದೇವ ರೆಬಿನಾಳ ಸ್ವಾಗತಿಸಿದರು. ಬಸನಗೌಡ ಬಿರಾದಾರ ನಿರೂಪಿಸಿದರು, ರಾಜಶೇಖರ ಬಿರಾದಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next